ಮಹಾಲಿಂಗಪುರ ಫುಡ್ ರೈಡರ್ ಸರ್ವೀಸ್ಗೆ ಗುಡ್ ಎಂದ ಗ್ರಾಹಕ !
ಆಹಾರಕ್ಕೊಂದು ಆ್ಯಪ್ ! ಗೂಗಲ್ ಪ್ಲೇಸ್ಟೋರ್ ನಲ್ಲೂ ಲಭ್ಯ !
ಮಹಾಲಿಂಗಪುರ 09: ಪಟ್ಟಣದ ಚಂದ್ರಶೇಖರ ಹಳ್ಳಿಕೇರಿ ಮತ್ತು ರವಿಕುಮಾರ ಹಳ್ಳಿಕೇರಿ (ಹೂಗಾರ) ಸಹೋದರರು ಲಾಕ್ಡೌನ್ನ ಸಮಯದಲ್ಲಿ ಆರಂಭಿಸಿದ್ದ ತಮ್ಮದೇ ಪರಿಕಲ್ಪನೆಯ ಫುಡ್ ರೈಡರ್ ಎಂಬ ಆನ್ಲೈನ್ ಆಹಾರ ಸೇವೆ ನಗರದ ಜನತೆಗೆ ಆಪ್ತವಾಗಿದೆ.
ಆರಂಭದಲ್ಲಿ ಕಳಕಳಿಯ ಸರ್ವೀಸ್ ನೀಡಲು ಆರಂಭಿಸಿದ ಸಹೋದರರು ಇದೀಗ ನಿತ್ಯ ಸರಾಸರಿ 60ಕ್ಕೂ ಹೆಚ್ಚು ಆರ್ಡರ್ ಪೂರೈಸುತ್ತಾರೆ. ಬೆಳಗ್ಗೆ 7ರಿಂದ ಮಧ್ಯಾಹ್ನ 3.30 ಹಾಗೂ ಸಂಜೆ 6 ರಿಂದ ರಾತ್ರಿ 10.30ರವರೆಗೆ ಕೆಲಸ ಮಾಡಿ ಎರಡೂವರೆ ವರ್ಷಗಳಲ್ಲಿ 40 ಸಾವಿರಕ್ಕೂ ಹೆಚ್ಚು ಆರ್ಡರ್ಗೆ ಸ್ಪಂದಿಸಿದ್ದಾರೆ. ಇವರ ಆನ್ಲೈನ್ ಫುಡ್ ಸರ್ವೀಸ್ ಗ್ರಾಹಕರಿಂದ ಗುಡ್ ಎನಿಸಿಕೊಂಡಿದೆ.
ಆಹಾರಕ್ಕೊಂದು ಆ್ಯಪ್ :
ಹಳ್ಳಿಕೇರಿ ಸಹೋದರರು ಸಿದ್ದಪಡಿಸಿದ ಫುಡ್ರೈಡರ್ ಆ್ಯಪ್ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯ. ಗ್ರಾಹಕರು ಆ್ಯಪ್ ಇನ್ಸ್ಟಾಲ್ ಮಾಡ್ಕೊಂಡು ನಂತರ ಸೈನ್ಇನ್ ಆಗಿ ಲೊಕೇಶನ್ ಆನ್ ಮಾಡಿದ್ರೆ ಹತ್ತಾರು ಹೋಟೇಲ್ಗಳ ಮಾಹಿತಿ ಮತ್ತು ಯಾವ ಹೋಟೇಲ್ನಲ್ಲಿ ಯಾವ ಐಟಂ ಯಾವ ಅವವರೆಗೆ ಲಭ್ಯ ಎಂಬುದು ತಿಳಿಯುತ್ತದೆ. ಆರ್ಡರ್ ಹಾಕಿದ ತಕ್ಷಣ ಫುಡ್ರೈಡರ್ಗೆ ಲೊಕೇಶನ್ ಸಮೇತ ಸಂದೇಶ ರವಾನೆಯಾಗಿ ಅದನ್ನು ಫುಡ್ರೈಡರ್ಸ ಫಾಲೋ ಮಾಡುತ್ತ ಸರ್ವೀಸ್ ನೀಡುತ್ತಾರೆ. ಐಫೋನ್ ಇದ್ದವರು ಕೂಡ ವೆಬ್ ವರ್ಷನ್ನಲ್ಲಿ ಲಾಗಿನ್ ಆಗಿ ಆರ್ಡರ್ ಮಾಡಬಹುದು.
ಲೈಫ್ಲೈನ್ ಆದ ಹೆಲ್ಪ್ಲೈನ್:
ಲಾಕ್ಡೌನ್ನಲ್ಲಿ ಅಗತ್ಯ ವಸ್ತು ಪೂರೈಸಲು ಆರಂಭಿಸಿದ ಹೆಲ್ಪ್ಲೈನ್ (8762037422 ಸಂಖ್ಯೆ) ಸೇವೆ ಕ್ರಮೇಣ ಗ್ರಾಹಕರ ಒತ್ತಾಯದ ಮೇರೆಗೆ ವಿಸ್ತಾರಗೊಂಡು ನಮಗೆ ಲೈಫ್ಲೈನ್ ಆಗಿದೆ. ಆರಂಭದಲ್ಲಿ ನಮ್ಮ ಉತ್ಸಾಹಕ್ಕೆ ನಮ್ಮ ಗುರು ಶಿವಲಿಂಗ ಸಿದ್ನಾಳ ಪ್ರೋತ್ಸಾಹ ನೀಡಿದ್ದು ಸ್ಮರಣೀಯ. ಈ ಸೇವೆಯಲ್ಲಿ ಅಲೆದಾಟ ಹೆಚ್ಚು, ಲಾಭ ಕಡಿಮೆ. ಆದಾಗ್ಯೂ ಸೇವೆಯ ಮೂಲಕ ಜನರ ವಿಶ್ವಾಸ ಗಳಿಸಿರುವ ಹೆಮ್ಮೆ ನಮಗಿದೆ. ಫುಡ್ರೈಡರ್ ಆ್ಯಪ್ನಿಂದ ಸೇವೆ ಮತ್ತಷ್ಟು ಸುಲಭವಾಗಲಿದೆ.
- ಚಂದ್ರಶೇಖರ ಮತ್ತು ರವಿಕುಮಾರ ಹಳ್ಳಿಕೇರಿ, ಫುಡ್ ರೈಡರ್ ಹೋಂ ಡೆಲಿವರಿ ಸರ್ವೀಸ್, ಮಹಾಲಿಂಗಪುರ
9 ಎಂಎಲ್ಪಿ 2, 2ಎ
ಮಹಾಲಿಂಗಪುರದ ಫುಡ್ರೈಡರ್ ಹೋಂ ಡೆಲಿವರಿ ಸರ್ವೀಸ್ ನೀಡುತ್ತಿರುವ ಸಹೋದರರಾದ ಹಳ್ಳಿಕೇರಿ ಚಂದ್ರಶೇಖರ ಮತ್ತು ರವಿಕುಮಾರ.
9 ಎಂಎಲ್ಪಿ 2ಬಿ
ಫುಡ್ರೈಡರ್ ಲೋಗೊ