ಬಳ್ಳಾರಿ

ಪಿ.ವೆಂಕಟೇಶಲು ನೇಮಕ

ಪಿ.ವೆಂಕಟೇಶಲು ನೇಮಕ

ಬಳ್ಳಾರಿ 07: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಡಾ. ಉದಿತ್ ರಾಜ್ ರವರ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅನುಮೋದನೆ ಮೇರೆಗೆ ಹಾಗೂ ಕೆ.ಪಿ.ಸಿ.ಸಿ. ವಿಜಯನಗರ ಜಿಲ್ಲಾ ಅಧ್ಯಕ್ಷ ಸಿರಾಜ್‌ಶೇಖ್ ಅವರ ಶಿಫಾರಸ್ಸು ಮೇರೆಗೆ ಪಿ.ವೆಂಕಟೇಶಲು ಅವರನ್ನು ಕೆ.ಪಿ.ಸಿ.ಸಿ. ಅಸಂಘಟಿತ ಕಾರ್ಮಿಕರ ಹಾಗೂ ನೌಕರರ ವಿಭಾಗದ ವಿಜಯನಗರ ಜಿಲ್ಲಾಧ್ಯಕ್ಷರ ಹುದ್ದೆಗೆ ನೇಮಿಸಲಾಯಿತು. 

ರಾಜ್ಯ ಪ್ರಧಾನ ಕಾರ್ಯದರ್ಶಿ ಲಿಂಗಣ್ಣ ನಾಯಕ, ರಾಜ್ಯ ಕಾರ್ಯದರ್ಶಿ ಸಂದೀಪ್, ಸ್ವಾಭಿಮಾನಿ ಆನಂದ್, ಶ್ರೀನಿವಾಸ್ ಇನ್ನು ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ