ಅಹಿಂದ ಯುವ ಘಟಕದ ಜಿಲ್ಲಾ ಪದಾಧಿಕಾರಿಗಳ ನೇಮಕ
ಬಳ್ಳಾರಿ 10: ಕರ್ನಾಟಕ ಅಹಿಂದ ಜನ ಸಂಘದ ಯುವ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಮುಂಡ್ರಿಗಿ ಅರುಣ್ ಕುಮಾರ್, ಬಳ್ಳಾರಿ ಗ್ರಾಮಾಂತರ ಅಧ್ಯಕ್ಷರಾಗಿ ಹರಗಿನಡೊಣಿ ಗಾದಿ, ಗ್ರಾಮಾಂತರ ಕಾರ್ಯಧ್ಯಕ್ಷರಾಗಿ ಎ.ಬಸವರಾಜ್ ಹಾಗೂ ಜಿಲ್ಲಾ ಸಂಚಾಲಕರಾಗಿ ಪಿ.ಶಾಷವಲಿ ನೇಮಕಗೊಂಡಿದ್ದಾರೆ.ಕರ್ನಾಟಕ ಅಹಿಂದ ಜನ ಸಂಘದ ಜಿಲ್ಲಾಧ್ಯಕ್ಷರಾದ ಗೋನಾಳ್ ಎಂ.ತಿಮ್ಮಪ್ಪ ಅವರು ಆದೇಶದ ಮೇರೆಗೆ ಅಹಿಂದ ಯುವ ಘಟಕದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರು ಈ ನೇಮಕಮಾಡಿ ಅಹಿಂದ ಜನರ ಶ್ರೇಯೋಭಿವೃದ್ಧಿಗಾಗಿ, ಸಾಮಾಜಿಕವಾಗಿ, ಶೈಕ್ಷಣಕವಾಗಿ ಮತ್ತು ಆರ್ಥಿಕವಾಗಿ ’ಅಹಿಂದ ಜನ ಸಮುದಾಯದ ಮುಖ್ಯವಾಹಿನಿಗೆ ತರುವ ಹಾಗೂ ಸಂಘಟನೆಯ ಮತ್ತು ಬಲವರ್ಧನೆಗಾಗಿ ದುಡಿಯುತ್ತೀರೆಂದು ನಂಬಿ ನಾನು ತಮಗೆ ಈ ಜವಾಬ್ದಾರಿಯನ್ನು ವಹಿಸಿರುತ್ತೇನೆ ಎಂದು ಎಂ.ಜಿ ಕನಕ ಅವರು ಹೇಳಿದರು. ಅಹಿಂದ ಯುವ ಘಟಕದ ಜವಾಬ್ದಾರಿ ವಹಿಸಿಕೊಂಡ ಮುಂಡ್ರಿಗಿ ಅರುಣ್ ಕುಮಾರ್ ಅವರು, ನನ್ನ ಸಮಾಜಿಕ ಸೇವೆ ಪರಿಗಣಿಸಿ ಈ ಸ್ಥಾನ ಕಲ್ಪಿಸಿರುವ ಜಿಲ್ಲಾಧ್ಯಕ್ಷರು ಗೋನಾಳ್ ಎಂ.ತಿಮ್ಮಪ್ಪ ಅವರು, ಅಹಿಂದ ಯುವ ಘಟಕದ ಜಿಲ್ಲಾಧ್ಯಕ್ಷರು ಎಂ.ಜಿ ಕನಕ ಹಾಗೂ ಅಹಿಂದದ ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ಸಮುದಾಯವನ್ನು ಒಟ್ಟುಗೂಡಿಸಿ ಅದರ ಬೆಳವಣಿಗೆಗಾಗಿ ದುಡಿಯುತ್ತೇನೆ ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಉಪಾಧ್ಯಕ್ಷರಾದ ಕೆ.ಬಿ ಚಂದ್ರಶೇಖರ್, ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ವೈ.ಅರುಣ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಗೊಲ್ಲರ ಗೋಪಾಲಕೃಷ್ಣ, ಜಿಲ್ಲಾ ಸಂಚಾಲಕರಾದ ಆನಂದ ಹಾಗೂ ಬಿಳಿಹಾಳ್ ಬಸವರಾಜ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.