ಬೆಳಕು ಯೋಜನೆ ಫಲಾನುಭವಿಗಳಿಂದ ಅರ್ಜಿ: ಸ್ಥಳ ಪರೀಶೀಲನೆ
ಹಗರಿಬೊಮ್ಮನಹಳ್ಳಿ 30: ಬಡ ಕುಟುಂಬಗಳು ಕತ್ತಲೆಯಲ್ಲಿ ಕಾಲ ಕಳೆಯುವುದನ್ನು ತಪ್ಪಿಸುವುದಕ್ಕಾಗಿ ಸರ್ಕಾರ ರೂಪಿಸಿರುವ ಬೆಳಕು ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಸ್ಥಳಗಳನ್ನು ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ತೆಜಾನಾಯ್ಕ್ ಮಂಗಳವಾರ ಪರೀಶೀಲಿಸಿದರು.
ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿ ಈ ಯೋಜನೆಯು ಬಡ ಕುಟುಂಬಗಳಿಗೆ ಸಹಾಯಕವಾಗಿದ್ದು ವಾರ್ಡ್ ಸಂಖ್ಯೆ 2ರ ಜಾಲಿನಗರದಲ್ಲಿನ 94 ಫಲಾನುಭವಿಗಳ ಪೈಕಿ 80 ಅರ್ಜಿದಾರರು ಆಯ್ಕೆ ಮಾಡಿಕೊಂಡಿದ್ದು ಉಳಿದ 14 ಅರ್ಜಿದಾರರ ದಾಖಲೆ ಕೊರತೆಯಿಂದ ತಡೆಹಿಡಿಯಲಾಗಿದೆ, ನಿಗದಿತ ಸಮಯದೊಳಗೆ ತಾಲೂಕು ಕಚೇರಿ ಅಥವಾ ಪುರಸಭೆಯಿಂದ ಅಧಿಕೃತವಾಗಿ ದೃಢೀಕರಣವನ್ನು ನೀಡಿದರೆ ಅವುಗಳನ್ನು ಪರೀಶೀಲಿಸಿ ಸಂಪರ್ಕ ಕಲ್ಪಿಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು.
ಬೆಳಕು ಯೋಜನೆಯಲ್ಲಿನ ಫಲಾನುಭವಿಗಳು ಮುಂಗಡ ಹಣ ಪವತಿಸದೇ ನಿವೇಶನಕ್ಕೆ ಮೀಟರ್, ಸ್ವಿಚ್ ಬೋರ್ಡ್ ಹಾಕಿಕೊಳ್ಳಬಹುದಾಗಿದೆ, ಸಾಮಾನ್ಯವಾಗಿ ಇಗಿರುವ ಪದ್ದತಿಯಂತೆ ಪ್ರತಿ ತಿಂಗಳು ಉಪಯೋಗಿಸಿದಷ್ಟು ವಿದ್ಯುತ್‌ನ ಬಿಲ್ ಪಾವತಿ ಮಾಡಬೇಕಾಗುತ್ತದೆ, ಈವರೆಗೆ 1085 ಫಲಾನುಭವಿಗಳ ಅರ್ಜಿ ಬಂದಿದ್ದು ಡಿಸೆಂಬರ್ 10ರೊಳಗೆ ಸಂಪರ್ಕ ನೀಡಲಾಗುವುದು, ಕಂಬಗಳ ಅವಶ್ಯಕತೆವಿರುವ ಸ್ಥಳಗಳಲ್ಲಿ ಡಿಸೆಂಬರ್ ಅಂತ್ಯದೊಳಗೆ ಸಂಪರ್ಕ ಕಾರ್ಯ ಮಾಡಲಾಗುವುದು, ಬಿಪಿಎಲ್ ಕಾರ್ಡುಹೊಂದಿದವರು ಇದಕ್ಕೆ ಅರ್ಹರಾಗಿರುತ್ತಾರೆ ನಮ್ಮ ಇಲಾಖೆಯಿಂದ ವಿದ್ಯುತ್ ಸಂಪರ್ಕ ಇಲ್ಲದಿರುವ ಮನೆಗಳ ಸರ್ವೆ ಕಾರ್ಯ ಮಾಡಲಾಗುತ್ತಿದೆ ಎಂದು ಪತ್ರಿಕೆ ತಿಳಿಸಿದರು.
ಈ ಸಂಧರ್ಭದಲ್ಲಿ ವಿಭಾಗ ಅಧಿಕಾರಿ ಪಕ್ಕೀರ್ಪ, ಕರವೇ ತಾಲೂಕಾಧ್ಯಕ್ಷ ಎನ್.ಎಂ.ಗೌಸ್ , ಸೇರಿದಂತೆ ಫಲಾನುಭವಿಗಳು ಇದ್ದರು.