ವಿಠ್ಠಲಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಹಾಲಿಂಗಪುರ 06: ಸೈದಾಪುರ್ ಸಮೀರ್ವಾಡಿ ಸಮೀಪದ ರಾಜ್ಯದ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಮದೇವ ಶಿಂಪಿ, ಭಾವಸಾರ ಕ್ಷತ್ರಿಯ ಸಮಾಜದ ಸಾಧಕರನ್ನು ಪ್ರೋತ್ಸಾಹಿಸಲು ವಿಠ್ಠಲಶ್ರೀ ಪ್ರಶಸ್ತಿ ನೀಡಿ ಗೌರವಿಸಲು ಅರ್ಹ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಎಂದು ಸಂಕಲ್ಪ ಕ್ರೀಡಾ ಮತ್ತು ಸಮಾಜಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ರೇಳೆಕರ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಅವರು ಮಾತನಾಡಿ, ನಾಮದೇವ ಶಿಂಪಿ ಮತ್ತು ಭಾವಸಾರ ಕ್ಷತ್ರಿಯ ಸಮಾಜದವರು ಟೇಲರಿಂಗ್, ಕ್ರೀಡೆ, ವಿಜ್ಞಾನ, ನಾಟಕ, ಸಿನಿಮಾ, ಸಂಗೀತ, ಗಾಯನ, ಮಾಧ್ಯಮ, ಕೃಷಿ, ಫ್ಯಾಶನ್ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಸಾಧನೆ ಮಾಡಿದ ದಾಖಲೆಗಳ ಝರಾಕ್ಸ್, ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರದೊಂದಿಗೆ ನ.30ರೊಳಗೆ ಮಂಜುನಾಥ ರೇಳೆಕರ, ಮನೆ ನಂ.573, ಗಾಂಧಿ ಚೌಕ್ ಅಂಚೆ: ಮೂಡಲಗಿ-591312, ತಾ: ಮೂಡಲಗಿ, ಜಿ: ಬೆಳಗಾವಿ ವಿಳಾಸಕ್ಕೆ ಸಲ್ಲಿಸಬಹುದು. ಮಾಹಿತಿಗೆ 8867372123, 7022095868 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.