ಮಹಲಿಂಗಪುರ

ಮಹರ್ಷಿ ಭಗೀರಥ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.

ಮಹರ್ಷಿ  ಭಗೀರಥ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ  ಆಹ್ವಾನ.

ಮಹಾಲಿಂಗಪುರ: ಶ್ರೀ ಭಗೀರಥ ಮಹರ್ಷಿ  ಉಪ್ಪಾರ ಸಮಾಜ ಸೇವಾ ಸಂಘದ ವತಿಯಿಂದ  ಮೇ 28 ರಂದು ಮಹರ್ಷಿ ಭಗೀರಥ 13 ನೇ ವಾರ್ಷಿಕೋತ್ಸವದ ಪ್ರಯುಕ್ತ ಸ್ಥಳೀಯ  ಭಗೀರಥ ದೇವಸ್ಥಾನದಲ್ಲಿ ಬಾಗಲಕೋಟೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ ಎಂದು ರಾಜ್ಯ ಉಪ್ಪಾರ ಮಹಾಸಭಾ ಮುಖಂಡ ವಿಷ್ಣು ಲಾತೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಅಥವಾ ಪಿಯುಸಿಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಪಡೆದ ಬಾಗಲಕೋಟೆ  ಜಿಲ್ಲೆಯ  ಉಪ್ಪಾರ ಸಮಾಜ ವಿದ್ಯಾರ್ಥಿಗಳು ಅರ್ಜಿ  ಸಲ್ಲಿಸಬಹುದಾಗಿದೆ. ಮೇ 26 ರ ಒಳಗೆ ಅಂಕಪಟ್ಟಿ ನಕಲು ಪ್ರತಿ, ಭಾವಚಿತ್ರ, ಸಂಪೂರ್ಣ ವಿಳಾಸದೊಂದಿಗೆ ನೀಡಬಹುದು ಅಥವಾ ಮೇ 28 ರಂದು ಮಾಲಿಂಗಪುರದಲ್ಲಿ ನಡೆಯಲಿರುವ ಭಗೀರಥ  ವಾಷರ್ಿಕೋತ್ಸವದ ಸಮಾರಂಭದ ದಿನದಂದು ನೇರವಾಗಿ ಬಂದು ಅರ್ಜಿ  ಸಲ್ಲಿಸಬಹುದು. 

ಮಹಾಲಿಂಗಪ್ಪ ಲಾತೂರ ಅಧ್ಯಕ್ಷರು, ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ,ಕಾಲೇಜು ರಸ್ತೆ, ಉಪ್ಪಾರ ಗಲ್ಲಿ ಮಹಾಲಿಂಗಪುರ, ತಾ: ರಬಕವಿ- ಬನಹಟ್ಟಿ, ಜಿ: ಬಾಗಲಕೋಟೆ ಈ ವಿಳಾಸಕ್ಕೆ ಅರ್ಜಿ  ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಂದೇಶ ಲಾತೂರ (9620860430)  ಮಾಳೇಶ ಮಣ್ಣಿಕೇರಿ (8123732869), ಶಿವಾನಂದ ಬಿರಾಜನವರ (8073289073), ಮುತ್ತಪ್ಪ ಲಾತೂರ (9482972480), ನಿಂಗಪ್ಪ ಉಸಳಿ(9743331247) ಇವರನ್ನು ಸಂಪಕರ್ಿಸಲು  ತಿಳಿಸಿದ್ದಾರೆ 

ಸುದ್ದಿ ಓದಿ