ವಿವಿಧ ರಾಜ್ಯಗಳ ನೇಕಾರ ಮುಖಂಡರಿಂದ ನೇಕಾರರ ಸಮಸ್ಯೆಗಳ ಕುರಿತು ಮನವಿ
ಮಹಾಲಿಂಗಪುರ 24: ಕೇಂದ್ರ ಸರ್ಕಾರ ಜವಳಿ ನೀತಿಯನ್ನು ರಚಿಸುತ್ತಿದ್ದು, ರೈತರ ಉತ್ಪನ್ನಗಳಿಗೆ ಜಿಎಸ್ಟಿ ರದ್ದುಗೊಳಿಸಿದ ಹಾಗೆ ದೇಶದ ನೇಕಾರ ಉತ್ಪಾದಿಸುವ ಸರಕುಗಳಿಗೂ ಆ ಸೌಲಭ್ಯ ಒದಗಿಸಲು ಮತ್ತು ದಶಕಗಳಿಂದಿರುವ ಇನ್ನಿತರೆ ಸಮಸ್ಯೆಗಳ ಪರಿಹಾರ ಕುರಿತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಇನ್ನೀತರ ಸಂಬಂಧಿಸಿದ ಇಲಾಖೆಯ ಮಂತ್ರಿಗಳಿಗೆ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಅವರು ದೇಶದ ನೇಕಾರರ ಪರವಾಗಿ ಮನವಿ ಸಲ್ಲಿಸಿರುವ ವಿಷಯವನ್ನು ಪತ್ರಿಕೆಗೆ ಹಂಚಿಕೊಂಡಿದ್ದಾರೆ.
75 ನೇ ಸ್ವಾತಂತ್ಯೋತ್ಸವದ ಸವಿನೆನಪಿನಲ್ಲಿ ನ. 24ರಂದು ಎರಡು ದಿವಸಗಳ ನೇಕಾರ ಕಾರ್ಮಿಕ ನೀತಿ ವಿಚಾರ ಮಂಥನ ಸಭೆ ನ.23 ಹಾಗೂ 24ರಂದು ಹೊಸ ದಿಲ್ಲಿಯ ಭಾಜಪ ಬುನಕರ್ ಪ್ರಕೋಷ್ಠ ಏರಿ್ಡಸಿತ್ತು.
ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸರಕಾರದ ಸಂಸ್ಕೃತಿ ರಾಜ್ಯ ಮಂತ್ರಿ ಅರ್ಜುನ್ ಮೇಘವಾಲಜೀ, ಮಧ್ಯಮ ಉದ್ಯೋಗ ಮಂತ್ರಿ ಭಾನು ಪ್ರತಾಪ್ ಸಿಂಗ್, ಅರ್ಥ ಸಮಿತಿಯ ಚೇರ್ಮನ್ ಸಂತೋಷಕುಮಾರ್ ಗಂಗವಾರ, ವಸ್ತ್ರ ಮಂತ್ರಾಲಯದ ಉಪೇಂದ್ರ ಪ್ರಸಾದ್ ಅವರು ಭಾಗವಹಿಸಿದ್ದರು.
ನೇಕಾರ ಸಂಘದ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ರಮೇಶ್ ಜಿ ಭಾಕರೆ, ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಸುನಿಲ್ ಮೆಟೆ, ಕರ್ನಾಟಕ ರಾಜಾಧ್ಯಕ್ಷ ಶಿವಲಿಂಗ ಟಿರಕಿ ಮತ್ತು ಆಂಧ್ರ್ರದೇಶ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ್ರದೇಶ, ಜಾಖಂರ್ಡ್, ಅರುಣಾಚಲ ಪ್ರದೇಶ, ರಾಜಸ್ಥಾನ್, ಅಸ್ಸಾಂ ಅನೇಕ ರಾಜ್ಯಗಳಿಂದ ನೇಕಾರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮನವಿಯ ವಿವರ : ಕಾರ್ಮಿಕ ಸೌಲಭ್ಯಗಳನ್ನು ಒದಗಿಸಿ, ಸಂಪೂರ್ಣ ಸಾಲಮನ್ನಾ ಮಾಡಬೇಕು. ದೇಶಾದ್ಯಂತ ವೃತ್ತಿಪರ ನೇಕಾರ ರಂಗ ಸಾಕಷ್ಟು ಸಮಸ್ಯೆಗಳ ಎದುರಿಸುತ್ತಿರುವ ಕಾರಣ ಜವಳಿ ಕ್ಷೇತ್ರ ಸಂಪೂರ್ಣ ಕುಸಿದು ಹೋಗಿದೆ. ಒಂದು ಕಡೆ ಕಚ್ಚಾ ಮಾಲಿನ ಬೆಲೆ ಗಗನಕ್ಕೇರಿದ್ದು, ಕಾರ್ಮಿಕ ಹಾಗೂ ಮಾಲೀಕ ವರ್ಗಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಯಾವುದೇ ಪರ್ಯಾಯ ಸೌಲಭ್ಯಗಳು ಸಮರ್ಕವಾಗಿ ದೊರೆಯುತ್ತಿಲ್ಲ. ಕಾರಣ ಸಂಪೂರ್ಣವಾಗಿ ನೆಲಕಚ್ಚಿರುವ ನೇಕಾರಿಕೆಯನ್ನು ಪುನಶ್ಚೇತನಗೊಳಿಸಲು ಪ್ರಧಾನಮಂತ್ರಿ ಮೋದಿಜಿ ಅವರಿಗೆ ನಿತಿನ್ ಗಡ್ಕರಿಯವರ ಮೂಲಕ ಮನವಿಯ ಮತ್ತು ಸಂದೇಶವನ್ನು ಕಳುಹಿಸಲಾಯಿತು ಎಂದು ಶಿವಲಿಂಗ್ ಟಿರ್ಕಿ ತಿಳಿಸಿದ್ದಾರೆ.