ಬಳ್ಳಾರಿ

ರಸ್ತೆ ಅಗಲೀಕರಣ, ಒತ್ತುವರಿ ತೆರವಿಗೆ ಮಹಾಪೌರರಿಗೆ ಮನವಿ

ರಸ್ತೆ ಅಗಲೀಕರಣ, ಒತ್ತುವರಿ ತೆರವಿಗೆ ಮಹಾಪೌರರಿಗೆ ಮನವಿ

ಬಳ್ಳಾರಿ 25: ನಗರದ ಬೆಂಗಳೂರು ರಸ್ತೆ, ಕಾಳಮ್ಮ ಬೀದಿ, ಬ್ರಾಹ್ಮಣ ಬೀದಿ ಮತ್ತು ಗೋಲ್ಡ್‌ಸ್ಮಿತ್ ಬೀದಿ ಈ ಬೀದಿಗಳಿಗೆ ಸಂಬಂಧಪಟ್ಟಂತೆ ಅಡ್ಡ ರಸ್ತೆಗಳು ಸುಮಾರು 40 ಅಡಿ ಅಗಲೀಕರಣ ಮಾಡುವಂತೆ ಮತ್ತು ಬೆಂಗಳೂರು ರಸ್ತೆಯ ನಟರಾಜ ಚಿತ್ರಮಂದಿರ ರಸ್ತೆಯಿಂದ ಎಪಿಎಂಸಿ ರಸ್ತೆಯವರೆಗಿನ ಅಂಗಡಿ ಮಾಲೀಕರು ಮತ್ತು ಇನ್ನಿತರರು ಒತ್ತುವರಿ ಮಾಡಿಕೊಂಡಿರುವ ಪಾದಾಚಾರಿ ರಸ್ತೆಯನ್ನು ತೆರವುಗೊಳಿಸುವಂತೆ ಯುವಸೇನ ಸೊಶಿಯಲ್ ಆ್ಯಕ್ಷನ್ ಕ್ಲಬ್ ಅಧ್ಯಕ್ಷ ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರರೆಡ್ಡಿ ಅವರು ಮಹಾನಗರ ಪಾಲಿಕೆ ಮಹಾಪೌರರಿಗೆ ಮನವಿ ಅರ​‍್ಿಸಿದರು. 

ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮಹಾಪೌರರಿಗೆ ಸಂಘದ ಪರವಾಗಿ ಶುಭಾಷಯ ತಿಳಿಸಿದ ಅವರು ಮನವಿಯಲ್ಲಿ ಬಳ್ಳಾರಿ ನಗರದ ಬೆಂಗಳೂರು ರಸ್ತೆ, ಕಾಳಮ್ಮ ಬೀದಿ, ಬ್ರಾಹ್ಮಣ ಬೀದಿ ಮತ್ತು ಗೋಲ್ಡ್‌ಸ್ಮಿತ್ ಬೀದಿ ಈ ಬೀದಿಗಳಿಗೆ ಸಂಬಂಧಪಟ್ಟಂತೆ ಅಡ್ಡ ರಸ್ತೆಗಳಾದ ಲಕ್ಷ್ಮಿ ನಾರಾಯಣ ಬೀದಿ, ಹೂವಿನ ಬಜಾರ್ ಬೀದಿ, ಗ್ರಹಂ ರಸ್ತೆ ಇನ್ನು ಮುಂತಾದ ಬೆಂಗಳೂರು ರಸ್ತೆಯ ಬ್ರಾಹ್ಮಣ ಬೀದಿಗೆ ಅನುಸಂಧಾನ ಆಗಿರುವ ರಸ್ತೆಗಳೆಲ್ಲಾ ಕನಿಷ್ಠ 30 ರಿಂದ 40 ಅಡಿಗಳಷ್ಟು ಅಗಲವಾಗಿ ಅಗಲೀಕರಣ ಮಾಡುವಂತೆ ಕೋರಿದ್ದಾರೆ. 

ಈ ರಸ್ತೆಗಳು ಬ್ರಿಟಿಷ್ ಆಡಳಿತದಲ್ಲಿ ಸುಮಾರು 30 ಅಡಿ ಅಗಲ ಇದ್ದವು, ಈ ರಸ್ತೆಯ ಮ್ಯಾಪ್‌ಗಳು ಬೇಕಾದರೆ ತಹಶೀಲ್ದಾರರ ಕಛೇರಿಯಲ್ಲಿ ಸಿಗುತ್ತವೆ. ಈ ರಸ್ತೆಗಳಲ್ಲಿನ ನಿವಾಸಸ್ಥರು ಹಾಗೂ ಎಲ್ಲಾ ಅಂಗಡಿ ಮಾಲೀಕರು ಮತ್ತು ಮನೆ ಮಾಲೀಕರು ಒಬ್ಬರನ್ನೋಡಿ ಒಬ್ಬರು ರಸ್ತೆ ಒತ್ತುವರಿ ಮಾಡಿಕೊಂಡು ಚಿಕ್ಕದಾದ ರಸ್ತೆಗಳನ್ನಾಗಿ ಪರಿವರ್ತಿಸಿದ್ದಾರೆ.   

ಮಹಾಪೌರರಾದ ತಾವುಗಳು ಯಾರ ಮೇಲೆ ದಯಾದಾಕ್ಷಿಣ್ಯ ಇಲ್ಲದೆ ಕಾನೂನು ಪರವಾಗಿ ನಗರವನ್ನು ರಸ್ತೆ ಅಗಲೀಕರಣ ಮಾಡಿ, ಸುಂದರವಾದ ರಸ್ತೆ ವ್ಯವಸ್ಥೆ ಕಲ್ಪಿಸಿ, ಸಾರ್ವಜನಿಕರಿಗೆ ತೊಂದರೆ ಇಲ್ಲದಂತೆ ಸುಗಮ ಸಂಚಾರಕ್ಕೆ ಅನುಕೂಲವಾದ ರಸ್ತೆಗಳನ್ನು ನಿರ್ಮಿಸಿ ಸುಂದರ ನಗರ ಮಾಡುವಂತೆ ಕೋರಿದ್ದಾರೆ. 

ಆದರೆ ಬೆಂಗಳೂರು ರಸ್ತೆಯಲ್ಲಿ ಪಾದಾಚಾರಿಗಳು ಅಡ್ಡಾಡುವ ಪರಿಸ್ಥಿತಿ ಇಲ್ಲಾ, ವಾಹನಗಳು ಅಡ್ಡಾಡುವ ಮಾರ್ಗದಲ್ಲಿ ಅಡ್ಡಾಡಿದರೆ ಅಪಘಾತಗಳಾಗುವ ಸಂಭವ ಜಾಸ್ತಿ, ಅಮೂಲ್ಯವಾದ ಪ್ರಾಣಕ್ಕೆ ಯಾರೂ ಜವಾಬ್ದಾರರು ?  

ಬಳ್ಳಾರಿ ನಗರದ ಬೆಂಗಳೂರು ರಸ್ತೆಯ ನಟರಾಜ್ ಚಿತ್ರಮಂದಿರದಿಂದ ಎಪಿಎಂಸಿ ವರೆಗೆ ಪಾದಾಚಾರಿಯ ರಸ್ತೆ ಮೇಲೆ ಹೂ-ಹಣ್ಣು ಬಟ್ಟೆಯ ವ್ಯಾಪಾರಸ್ಥರು ಅಂಗಡಿ ಮಾಲೀಕರು ಪಾದಾಚಾರಿ ರಸ್ತೆಯ ಮೇಲೆ ತಮ್ಮ ಅಂಗಡಿಯ ವಸ್ತುಗಳನ್ನು ಇಡುವುದರ ಮೂಲಕ ಹಾಗೂ ಹಣ್ಣಿನ ಬಂಡಿಗಳು ಇಟ್ಟು ವ್ಯಾಪಾರ ಮಾಡುವುದರ ಮೂಲಕ  ಒತ್ತುವರಿ ಮಾಡಿಕೊಂಡಿರುವ ಸ್ಥಳವನ್ನು ಎಲ್ಲವೂ ತೆರವುಗೊಳಿಸುವಂತೆ ಕ್ರಮ ಕೈಗೊಂಡು ಪಾದಾಚಾರಿ ರಸ್ತೆಯ ಮೇಲೆ ಕೇವಲ ಪಾದಾಚಾರಿಗಳು ಮಾತ್ರ ಅಡ್ಡಾಡುವಂತೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.  

ಎಸ್‌.ಕೃಷ್ಣ, ಜಿ.ಎಂ. ಭಾಷ, ಪಿ.ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ ಶ್ರೀನಿವಾಸರೆಡ್ಡಿ.ಎಂ, ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಮತ್ತು  ಕೆ.ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು ಇದ್ದರು. 


ಸುದ್ದಿ ಓದಿ