ಬಳ್ಳಾರಿ

170 ಕೋಟಿ ರೂ. ಅನುದಾನ ನೀಡುವಂತೆ ಸಚಿವರಿಗೆ ಮನವಿ

170 ಕೋಟಿ ರೂ. ಅನುದಾನ ನೀಡುವಂತೆ ಸಚಿವರಿಗೆ ಮನವಿ

ಬಳ್ಳಾರಿ,ಜ.13: ಬಳ್ಳಾರಿ ನಗರದ ಉತ್ತರ ಭಾಗದ ರಾಷ್ಟ್ರೀಯ ಹೆದ್ದಾರಿ-63 ರಿಂದ ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆಯನ್ನು ನಿರ್ಮಿಸುವ ಕುರಿತು 2011 ರಲ್ಲಿ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಆಗ ಯೋಜನಾ ಮೊತ್ತ 110 ಕೋಟಿ ರೂ. ಆಗಿತ್ತು. ಆದರೆ, ಪರಿಷ್ಕೃತ ವಿಸ್ತೃತ ಯೋಜನಾ ವರದಿಯಲ್ಲಿ ಈ ಯೋಜನೆಗೆ 170 ಕೋಟಿ ರೂ. ಅವಶ್ಯಕವಿದ್ದು, ವಿಶೇಷ ಅನುದಾನದಡಿಯಲ್ಲಿ ಹಣ ಬಿಡುಗಡೆಗೊಳಸಬೇಕು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಗೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಮನವಿ ಸಲ್ಲಿಸಲಾಯಿತು.

ರಾಯಚೂರು ಜಿಲ್ಲೆಯ ತಿಂತೀನಿ ಮಠದಲ್ಲಿ ಸಚಿವ ಭೈರತಿ ಬಸವರಾಜ್ ಅವರನ್ನು ಬುಧವಾರ ಭೇಟಿ ಮಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನಗಳನ್ನು ಶಾಲಾ, ಕಾಲೇಜು/ಸಂಘ/ಸಂಸ್ಥೆಗಳಿಗೆ/ಟ್ರಸ್ಟ್ ಗಳಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡುತ್ತಿದ್ದು, ಇದರ ಬದಲು ಕಂದಾಯ ಇಲಾಖೆ ಶಾಲಾ, ಕಾಲೇಜು/ಸಂಘ/ಸಂಸ್ಥೆಗಳಿಗೆ/ಟ್ರಸ್ಟ್‍ ಗಳಿಗೆ ನಿವೇಶನಗಳ ಮಾರಾಟ ಸುತ್ತೋಲೆ ಹೊರಡಿಸುತ್ತದೆ. ಇದೇ ರೀತಿಯಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನಗಳನ್ನು ಮಾರಾಟ ಮಾಡಿ ನೋಂದಣಿ ಮಾಡಿಸಿಕೊಡುವ ರೀತಿ ಸುತ್ತೋಲೆ ಹೊರಡಿಸುವಂತೆ  ದಮ್ಮೂರು ಶೇಖರ್ ಅವರು ಮನವಿ ಸಲ್ಲಿಸಿದರು.

ಸುದ್ದಿ ಓದಿ