ಮೂಡಲಗಿ

ಕುರಿಗಾಹಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸಿಎಂಗೆ ಮನವಿ

ಕುರಿಗಾಹಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸಿಎಂಗೆ ಮನವಿ

ಮೂಡಲಗಿ 28:  ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಚಾರಿ ಕುರಿಗಾಹಿಗಳಿದ್ದು, ಅವರು ಬೆಳಗಾವಿ ಜಿಲ್ಲೆಯನ್ನು ಬಿಟ್ಟು ಬೇರೆ ಬೇರೆ ಜಿಲ್ಲೆಗಳಿಗೆ ಸಂಚಾರ ಮಾಡುತ್ತಾ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಕೆಲವು ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ಮಾರುತಿ ಮರ್ಡಿ ಮೌರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. 

ಕುರಿಗಾರರಿಗೆ ರಾಜ್ಯಾದ್ಯಂತ ಬಂದೂಕು ತೆಗೆದುಕೊಂಡು ಹೋಗುವ ಅಧಿಕಾರವನ್ನು ನೀಡುವುದು. ರಾಜ್ಯಾದ್ಯಂತ ಬಂದೂಕು ಪರವಾಣಿಗೆಯ ವ್ಯಾಪ್ತಿ ಹೆಚ್ಚಿಸುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡುವುದು. ಕುರಿಗಾರರಿಗೆ ಪೋಲಿಸ್ ವೇರಿಪಿಕೇಷನ್ ನಿರ್ಬಂದಿಸುವುದು. ಕಾಡಿನಂಚಿನಲ್ಲಿರುವ ಸಂದರ್ಭದಲ್ಲಿ ಅಪಾಯಕಾರಿ ಕಾಡು ಪ್ರಾಣಿಗಳಿಂದ ಮತ್ತು ಕುರಿಗಳ್ಳರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಗುಂಡು ಹಾರಿಸುವ ಅಧಿಕಾರವನ್ನು ನೀಡುವುದು. ಕುರಿಗಾರರಿಗೆ ಆಯುಧ ಹೊಂದಲು ಅರ್ಜಿಸಲ್ಲಿಸಿದ ಒಂದು ವಾರದೊಳಗೆ ಅನಗತ್ಯ ವಿಂಳಬ ಮಾಡದೆ ಲೈಸನ್ಸ್‌ ಅನುಮತಿ ನೀಡುವುದು. ರಾಜ್ಯದ ಎಲ್ಲ ಕುರಿಗಾರರಿಗೆ ಎಲ್ಲ ಜಿಲ್ಲೆಗಳಲ್ಲಿ ಆಯುಧ ಲೈಸನ್ಸ್‌ ಪಡೆಯುವ ಅನುಕೂಲವನ್ನು ಸರಳ ರೀತಿಯಲ್ಲಿ ಮಾಡುವುದು. ವಿವಿದ ಚುನಾವಣೆಗಳಲ್ಲಿ ಕಾಲ ಕಾಲಕ್ಕೆ ಬಂದೂಕನ್ನು ಸಂಬಂದ ಪಟ್ಟ ಪೋಲಿಸ್ ಠಾಣೆಗಳಿಗೆ ಜಮಾ ಮಾಡದಂತೆ ಆದೇಶವನ್ನು ನೀಡಬೇಕು. ಮುಖ್ಯಸ್ಥನ ಅನುಪಸ್ಥಿತಿಯಲ್ಲಿ ಕುಟುಂಬದ ಸದಸ್ಯ ಆಯುಧವನ್ನು ಉಪಯೋಗಿಸುವ ಅಧಿಕಾರವನ್ನು ನೀಡುವುದು. ಬಂದೂಕು ಅರ್ಜಿ ನೀಡುವ ಸಂದರ್ಭದಲ್ಲಿ ಅತಿ ಕಡಿಮೆ ದಾಖಲಾತಿಗಳನ್ನು ಪರಿಷ್ಕರಿಸಿ ಅನುಮೋದನೆ ನೀಡುವುದು. ಅನಕ್ಷರಸ್ಥರಿದ್ದರೆ ಪೋಲಿಸ್ ಠಾಣೆಗಳಲ್ಲಿ ಸರಿಯಾಗಿ ಸ್ಪಂದಿಸಿ ಅವರಿಗೆ ಸಂಪೂರ್ಣ ಮಾಹಿತಿ ನೀಡುವುದು. ಕುರಿಗಾರರಿಗೆ ಎಲ್ಲ ಜಿಲ್ಲೆಗಳಲ್ಲಿ ಪ್ರತೇಕವಾಗಿ ಬಂದೂಕು ತರಬೇತಿ ಆಯೋಜನೆ ಮಾಡಿ ತರಬೇತಿ ಪ್ರಮಾಣ ಪತ್ರವನ್ನು ನೀಡುವುದು ಮೊದಲಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ