ಬಳ್ಳಾರಿ

ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಗೆ ಮನವಿ

ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಗೆ ಮನವಿ

ಬಳ್ಳಾರಿ 24: ನವದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರು ಹಾಗೂ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ ನಿತೀನ್ ಗಡ್ಕರಿ ಅವರನ್ನು ಸಂಸದರಾದ ವೈ.ದೇವೇಂದ್ರಪ್ಪ ಮತ್ತು ಬಳ್ಳಾರಿ ನಗರ ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಬುಧವಾರ ಭೇಟಿಯಾಗಿ ವಿವಿಧ ಬೇಡಿಕೆಗಳು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಸುಧಾ ಕ್ರಾಸ್ ನ ರೈಲ್ವೆ ಹಳಿಗೆ ರೈಲ್ವೆ ಓವರ್ ಸೇತುವೆ ನಿರ್ಮಾಣ ಮಾಡಿ: ಬಳ್ಳಾರಿ ಮತ್ತು ಬಳ್ಳಾರಿ ಕಂಟೋನ್ಮೆಂಟ್ ನಿಲ್ದಾಣಗಳ ನಡುವಿನ ಹುಬ್ಬಳ್ಳಿ-ಗುಂಟಕಲ್ ವಿಭಾಗದಲ್ಲಿ ಎಲ್ ಸಿ ಸಂಖ್ಯೆ 1108 ರ ಬದಲಾಗಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ ಈ ಸಂಬಂಧ ನೈರುತ್ಯ ರೈಲ್ವೆಯ ಎಲ್.ಸಿ ನಂ 1108 ರ ಬದಲಾಗಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸ್ಥಳೀಯವಾಗಿ ಸುಧಾ ಕ್ರಾಸ್ ಎಂದು ಕರೆಯಲ್ಪಡುವ ಈ ಎಲ್.ಸಿ 1108 ಎನ್‍ಎಚ್ -63 ನಂತಹ ಹಲವಾರು ಪ್ರಮುಖ ಮುಖ್ಯ ರಸ್ತೆಗಳನ್ನು ಸಂಪರ್ಕಿಸುವ ಒಂದು ದೊಡ್ಡ ಜಂಕ್ಷನ್ ಆಗಿದೆ, ಇದು ಹೊಸಪೇಟೆಯಿಂದ ಬಳ್ಳಾರಿ ನಗರಕ್ಕೆ ಇರುವ ಏಕೈಕ ಮುಖ್ಯ ಪ್ರವೇಶ ರಸ್ತೆಯಾಗಿದೆ.ಹಲವಾರು ಜನನಿಬಿಡ ವಿಶಾಲ ಪ್ರದೇಶಗಳಾದ ಟಿಬಿ ಸ್ಯಾನಿಟೋರಿಯಂ, ಒಪಿಡಿ ಆಸ್ಪತ್ರೆ, ಬೆಳಗಲ್ಲು ಕ್ರಾಸ್, ಕಂಟೋನ್ಮೆಂಟ್, ರೇಡಿಯೋ ಪಾರ್ಕ್ ಇನ್ನೀತರ ಸುತ್ತಮುತ್ತಲ ಪ್ರದೇಶದಲ್ಲಿ ಬರುತ್ತವೆ. ಸಾರ್ವಜನಿಕ, ಖಾಸಗಿ ವಾಹನಗಳು, ಎನ್‍ಎಚ್ -63 ರಲ್ಲಿ ಹಾದುಹೋಗುವ ಸರಕು ಸಾಗಣೆ ವಾಹನಗಳು ಮತ್ತು ಪಕ್ಕದ ರಿಂಗ್ ರಸ್ತೆಯಿಂದ ಬರುವ ವಾಹನಗಳು (ಆಂಧ್ರಪ್ರದೇಶವನ್ನು ಎನ್‍ಎಚ್ -63 ಗೆ ಸಂಪರ್ಕಿಸುತ್ತದೆ) ಈ ರಸ್ತೆ ಮೂಲಕ ಬಳ್ಳಾರಿ ನಗರಕ್ಕೆ ಪ್ರವೇಶಿಸಬೇಕಾಗಿದೆ ಮತ್ತು ಈಗಿರುವ ಏಕೈಕ ಸುಧಾ ಕ್ರಾಸ್ (ಎಲ್.ಸಿ. ನಂ 1108) ಬಳಿಯ ರೈಲ್ವೆ ಗೇಟ್ ಹಲವಾರು ಅಪಘಾತಗಳು ಮತ್ತು ಟ್ರಾಫಿಕ್ ಅನ್ನು ಗಂಟೆಗಳ ಕಾಲ ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಎಲ್.ಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‍ಎಚ್ 63) ಬರುವುದರಿಂದ ಈ ಎಲ್.ಸಿ ಯನ್ನು ಏಕ ಘಟಕದ ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸಲು ಸಚಿವರಿಗೆ ಮನವಿ ಸಲ್ಲಿಸಿದರು.




ಸುದ್ದಿ ಓದಿ