ಬಳ್ಳಾರಿ

ವಿಕಲಚೇತನರ ಬೇಡಿಕೆ ಈಡೇರಿಸುವಂತೆ ತಹಶೀಲ್ದಾರಗೆ ಮನವಿ

ವಿಕಲಚೇತನರ ಬೇಡಿಕೆ ಈಡೇರಿಸುವಂತೆ ತಹಶೀಲ್ದಾರಗೆ ಮನವಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 22 :  ವಿಕಲ ಚೇತನರ ಕುಂದುಕೊರತೆಗಳನ್ನು ಆಲಿಸುವಂತೆ ಪ್ರತಿ ತಿಂಗಳ 5ನೇರಂದು ಸಭೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಅಂಗವಿಲಕರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಮಿತಿಯು ತಹಶಿಲ್ದಾರ್‌ಗೆ ಮನವಿ ನೀಡಿದರು. 

ಈ ಸಂಧರ್ಭದಲ್ಲಿ  ಕರ್ನಾಟಕ ರಾಜ್ಯ ಅಂಗವಿಲಕರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ರಂಗಪ್ಪ ದಾಸರ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಅಂಗವಿಕಲರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕರೋನಾ ಆರ್ಭಟ ಸಮಯದಲ್ಲಿ ಬದುಕು ಬಹು ದುಸ್ತರವಾಗಿದ್ದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸೇರಿದಂತೆ ರಾಜ್ಯ ಸರಕಾರಗಳು ನೆರವಿಗೆ ಧಾವಿಸದಿರುವುದು ಶೋಚನೀಯ ಸಂಗತಿಯಾಗಿದೆ, ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು ಅಂಗವಿಲರಿಗೆ ರಿಯಾಯತಿ ದರದಲ್ಲಿ ಪೆಟ್ರೋಲ್ ನೀಡುವಂತೆ ತಿಳಿಸಿದರು.ನ್ಯಾಯಬೆಲೆ ಅಂಗಡಿಗಳಲ್ಲಿ 19 ಆಹಾರ ಸಾಮಾಗ್ರಿಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜಂಟಿ ಯೋಜನೆಯಡಿ ಕಡಿಮೆ ದರದಲ್ಲಿ ನೀಡಬೇಕು. 

ವಿಕಲಚೇತನರ ಹಕ್ಕುಗಳ ಕಾಯ್ದೆ 2016 ಸಮರ​‍್ಕವಾಗಿ ಜಾರಿಗೊಳಿಸಬೇಕು ಬಾಕಿ ಮಾಶಾಸನವನ್ನು ಬಿಡುಗಡೆ ಮಾಡಬೇಕು, ಗ್ರಾ.ಪಂ.ಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕಾಯಕ ಬಂಧು ಎಂದು ಪರಿಗಣಿಸಿ ಉದ್ಯೋಗ, ಕಾರ್ಮಿಕ ಇಲಾಖೆಯ ಸೌಲಭ್ಯಗಳ ಫಲಾನುಭವಿಯಾಗಿ ಪರಿಗಣಿಸಬೇಕು,ವಿವಾಹ ಪ್ರೋತ್ಸಾಹ ಧನವನ್ನು 5ಲಕ್ಷಕ್ಕೆ ಹೆಚ್ಚಿಸಬೇಕು,ಎಂ.ಆರ್‌ಡಬ್ಯು ಮತ್ತು ವಿ.ಆರ್ ಡಬ್ಲುಗಳಿಗೆ ಪ್ರತ್ಯೇಕ ಕೊಠಡಿ ಹಾಗೂ ಪೀಠೋಪಕರಣ ಒದಗಿಸಿ ವಿಕಲ ಚೇತನರ ಪರ ಸಕ್ರೀಯವಾಗಿ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು,ವಿಕಲ ಚೇತನ ಗುರುತಿನ ಚೀಟಿಗಳನ್ನು ಶೀಘ್ರವಾಗಿ ವಿತರಣೆ ಮಾಡಬೆಕೆಂದು ಆಗ್ರಹಿಸಿದರು. 

ಮನವಿಯನ್ನು ಸ್ವೀಕರಿಸಿ ತಹಸೀಲ್ದಾರ್ ಶರಣಮ್ಮ ಮಾತನಾಡಿ ತಾಲೂಕಿನಲ್ಲಿರುವ ವಿಕಲ ಚೇತನರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಸಭೆ ಕರೆಯಲಾಗುವುದು. ಸಭೆಯಲ್ಲಿ ತಾಲೂಕು ಸಮಿತಿಯ ಪದಾಧಿಕಾರಿಗಳು ಭಾಗವಹಿಸಿ ಅಂಗವಿಕಲರನ್ನು ಸಬಲರನ್ನಾಗಿಸುವ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂಬ ಭರವಸೆಯನ್ನು ನೀಡಿದರು. 

ಈ ಸಂದರ್ಭದಲ್ಲಿ ಸಿ.ಬಸಮ್ಮ, ಬಿ.ಸುಮಾ, ನಿಂಗಪ್ಪ, ಭೀಮಪ್ಪ, ಸಮಾದೆಪ್ಪ, ಅಕ್ಕಮ್ಮ, ಉಸ್ಮಾನ್ ಬಾಷಾ, ಚಂದ್ರ​‍್ಪ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ