ಪ್ರಥಮ ದರ್ಜೆ ಕಾಲೇಜು ಮಂಜೂರಾತಿಗಾಗಿ 17 ಕಿ.ಮೀ.ಪಾದಯಾತ್ರೆ ಮೂಲಕ ತಹಶೀಲ್ದಾರ್ಗೆ ಮನವಿ
ಹಗರಿಬೊಮ್ಮನಹಳ್ಳಿ 24 : ಸುತ್ತ ಮುತ್ತಲಿನ ಗ್ರಾಮಗಳಿಗೆ ತಂಬ್ರಹಳ್ಳಿ ಗ್ರಾಮವು ಕೇಂದ್ರ ಸ್ಥಾನವಾಗಿದ್ದು ಈ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ಇಲ್ಲದಿರುವುದರಿಂದ ಈ ಭಾಗದ ಬಡ ವಿದ್ಯಾರ್ಥಿಗಳ ಪದವಿ ಶಿಕ್ಷಣಕ್ಕಾಗಿ ಹಗರಿಬೊಮ್ಮನಹಳ್ಳಿ, ವಿಜಯನಗರ ಸೇರಿದಂತೆ ಹರಪನಹಳ್ಳಿ ನಗರಗಳಿಗೆ ಹೋಗಬೇಕಾಗಿದೆ. ಪ್ರಸಕ್ತ ಸಾಲಿನಲ್ಲಿ ಹಗರಿಬೊಮ್ಮನಹಳ್ಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದಾರೆ, ಇದರಿಂದ ವಿದ್ಯಾರ್ಥಿಗಳ ಪರಿಪೂರ್ಣ ತರಗತಿಗಳ ಹಾಜರಾತಿಗೆ ತೊಂದರೆಯಾಗಿದೆ, ಮತ್ತು ತಂಬ್ರಹಳ್ಳಿ ಗ್ರಾಮದಿಂದ ವ್ಯವಸ್ಥಿತ ಬಸ್ ಸಂಚಾರವು ಇಲ್ಲದಿರುವುದು ಕಾಣಬಹುದಾಗಿದೆ ತಂಬ್ರಹಳ್ಳಿ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ಅಕ್ಕಿ ತೋಟೇಶ್ ಎಂದು ಹೇಳಿದರು.
ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ನೂತನ ಪ್ರಥಮ ದರ್ಜೆ ಕಾಲೇಜು ಮಂಜೂರಾತಿ ಮಾಡಬೇಕೆಂದು ತಂಬ್ರಹಳ್ಳಿಯ ವಿದ್ಯಾರ್ಥಿಗಳು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು, ರೈತರು 17ಕಿ.ಮೀ. ಪಾದಯಾತ್ರೆ ಮಾಡುವುದರ ಮೂಲಕ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿದರು.
ಬಸ್ಸುಗಳಿದ್ದರೂ ಸೂಕ್ತ ಸಮಯಕ್ಕಿಲ್ಲ ಹಾಗೂ ಬೆರಳೆಣಿಕೆಯ ಬಸ್ಸುಗಳರುವುದು ಕಾಣಬಹುದಾಗಿದೆ ಹೀಗಾಗಿ ಕೂಡಲೇ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಅತ್ಯವಶ್ಯಕವಾಗಿದೆ ಎಂದರು. ಮನವಿಗೆ ಸ್ಪಂದಿಸಿ ಕಾಲೇಜು ಸ್ಥಾಪನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಶಿಕ್ಷಣ ಸಚಿವರ ಮನೆ ಮುಂದೆ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು ಹಾಗೂ ಶಾಸಕ ಭೀಮಾನಾಯ್ಕ್ ಅವರಿಗೂ ಮನವಿಯನ್ನು ಸಲ್ಲಿಸಲಾಗಿದೆ. ,ಕೂಡಲೇ ಗ್ರಮದಲ್ಲಿ ಪದವಿ ಕಾಲೇಜು ಸ್ಥಾಪನೆಗೆ ಸಂಭಂದಿಸಿದ ಸಚಿವರ ಬಳಿ ಮಾತನಾಡುವೆ , ಗ್ರಾಮದಲ್ಲಿ ಪದವಿ ಕಾಲೇಜಿನ ಅವಶ್ಯಕತೆ ಇದ್ದು, ಸಂಭಂದಿಸಿ ಸಚಿವರು ಇತ್ತ ಗಮನ ಹರಿಸಬೇಕು ಇಲ್ಲವಾದಲ್ಲಿ ಧರಣಿಗೆ ಸಾಥ್ ನೀಡುವೆ ಎಂದು ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಮುಖಂಡ ಅಕ್ಕಿ ಶಿವಕುಮಾರ ಮಾತನಾಡಿ ತಂಬ್ರಹಳ್ಳಿ ಗ್ರಾಮದ ಖಾಸಗಿ ಪದವಿ ಪೂರ್ವ ಕಾಲೇಜಿನಲ್ಲಿ 400 ವಿದ್ಯಾರ್ಥಿಗಳೂ ಪ್ರವೇಶ ಪಡೆದಿದ್ದಾರೆ. ಗ್ರಾಮದಲ್ಲಿ ಐಟಿಐ ಸೇರಿದಂತೆ ಪದವಿ ಕಾಲೇಜು, ರಾಷ್ಟ್ರೀಕೃತ ಬ್ಯಾಂಕು, ಎಪಿಎಂಸಿ ಮಾರುಕಟ್ಟೆ, ಪೋಲೀಸ್ ಠಾಣೆ, ರೈತ ಸಂಪರ್ಕ ಕೇಂದ್ರವಿದೆ. ಪದವಿ ವಿದ್ಯಾಭ್ಯಾಸಕ್ಕಾಗಿ ಕಾಲೇಜು ಮಂಜೂರು ಮಾಡಬೇಕು. ಗ್ರಾಮದ 10ಕಿ.ಮೀ.ವ್ಯಾಪ್ತಿಯಲ್ಲಿ ಬಾಚಿಗೊಂಡನಹಳ್ಳಿ, ಮೋರಗೇರೆ, ಹಂಪಸಾಗರ ಗ್ರಾಮಗಳು ಬರುತ್ತವೆ ಪದವಿ ಕಾಲೇಜು ಸಥಾಪನೆಯಿಂದ ಸುತ್ತಲಿನ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸದಂತಾಗುತ್ತದೆ ಎಂದರು.
ಸಾಹಿತಿ ಮೇಟಿ ಕೊಟ್ರಪ್ಪ, ಹುಸೇನ ಬಾಷಾ ಮಾತನಾಡಿದರು.
ಕಾಲೇಜು ಹೋರಾಟ ಸಮಿತಿ ಉಪಾಧ್ಯಕ್ಷ ಶಿವಕುಮಾರಗೌಡ, ತಾ.ಪಂ ಸದಸ್ಯ ಪಿ.ಕೊಟ್ರೇಶ್, ಬಾಳೆಕಾಯಿ ಚಿದಾನಂದಪ್ಪ, ಮಂಜುನಾಥ ಪಟ್ಟಣಶೆಟ್ಟಿ, ಸುರೇಶ್ ಯಳಕಪ್ಪನವರ್, ಗಡ್ಡಿ ನಿಂಗಪ್ಪ, ಸುರೇಶ್ ಪಟ್ಟಣಶೆಟ್ಟಿ, ಬಣಕಾರ ಕೊಟ್ರೇಶ್, ಆನೆಕಲ್ ದೊಡ್ಡಬಸಪ್ಪ, ಗೌರಜ್ಜನವರ ಗಿರೀಶ್, ಮಡಿವಾಳಕೊಟ್ರೇಶ್, ವೈ.ಕೆ.ಶ್ರೀನಿವಾಸ, ಹುಸೇನ್ ಬಾಷಾ, ಟಿ.ವಿಠ್ಠಲ, ಸತೀಶ್ಗೌಡ, ಬಿ.ಶ್ರೀನಿವಾಸ ಸೇರಿದಂತೆ ನೂರಾರು ರೈತ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
24.ಹೆಚ್.ಬಿ.ಹೆಚ್.01 : ತಂಬ್ರಹಳ್ಳಿ ಗ್ರಾಮದಲ್ಲಿ ನೂತನ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸುವಂತೆ ತಹಶೀಲ್ದಾರ್ ಶಿವಕುಮಾರ ಗೌಡಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಾಲೇಜು ಹೋರಾಟ ಸಮಿತಿಯ ಅಧ್ಯಕ್ಷ ಅಕ್ಕಿ ತೋಟೇಶ್, ಉಪಾಧ್ಯಕ್ಷ ಶಿವಕುಮಾರ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.