ಒಳ ಮೀಸಲಾತಿ ವಿರೋಧಿಸಿ, ಭಾರತ್ ಬಂದ್ ಬೆಂಬಲಿಸಿ ಜಿಲ್ಲಾಧಿಕಾರಿಗಳಿಗೆ ಮನವಿ
ಕಲಬುರಗಿ 22:ಒಳ ಮೀಸಲಾತಿ ವಿರೋಧಿಸಿ ಮತ್ತು ಭಾರತ್ ಬಂದ್ ಬೆಂಬಲಿಸಿ ಬಂಜಾರ, ಭೋವಿ, ಕೊರಚಾ ಮತ್ತುಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು. ಸಂಘದಅಧ್ಯಕ್ಷ ಶ್ಯಾಮರಾವ ಪವಾರ್, ಕಾರ್ಯದರ್ಶಿ ತಿಪ್ಪಣ್ಣಒಡೆಯರ್ ಸೇರಿದಂತೆ ಮತ್ತಿತರರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.