ಮಾಡಗಿನ ಬಸಪ್ಪನವರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಮುಖ್ಯ ಮಂತ್ರಿಗಳಿಗೆ ಮನವಿ
ಹಗರಿಬೊಮ್ಮನಹಳ್ಳಿ 17: ಚಳ್ಳಕೆರೆಯ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಾಡಗಿನ ಬಸಪ್ಪನವರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ತಾಲೂಕು ಘಟಕದಿಂದ ಹಲ್ಲೇಕೋರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹ್ಯಾಟಿ ಲೋಕಪ್ಪ ಮಾತನಾಡಿ ಸರಕಾರಿ ನೌಕರರಿಗೆ ಸೇವಾ ಭದ್ರತೆ ಇಲ್ಲದಂತಾಗಿದ್ದು ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಹಲ್ಲೆ ಮರುಕಳಿಸುತ್ತಿದ್ದರೂ ಸರಕಾರ ಕಣ್ಮುಚ್ಚಿ ಕುಳಿತುಕೊಂಡಿದೆ, ಕಾರ್ಯನಿರತ ಇಒ ಅವರ ಪರಿಸ್ಥಿತಿ ಹಿಗಾದರೆ ಸಾಮಾನ್ಯ ನೌಕರರ ಮೇಲಿನ ದಬ್ಬಾಳಿಕೆ ದೌರ್ಜನ್ಯ ಹೇಳತೀರದ್ದಾಗಿದೆ, ಹಲ್ಲೆ ಪ್ರಕರಣಗಳಿಂದ ಇಂದು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಆತಂಕ ಹಾಗೂ ಭಯದ ವಾತಾವರಣದಲ್ಲಿ ಸೇವೆ ಸಲ್ಲಿಸುವ ಪರಿಸ್ಥಿತಿ ಒದಗಿದೆ ಇದಕ್ಕೆ ಸರ್ಕಾರ ಕೂಡಲೇ ಎಚ್ಚೆತ್ತು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಕ್ರೋಶ ವ್ಯೆಕ್ತಪಡಿಸಿದರು. ಸರಕಾರಿ ನೌಕರರ ಕೇವಲ ಕಚೇರಿ ಕೆಲಸಕ್ಕೆ ಸೀಮಿತವಾಗದೇ ವಿಶ್ವವನ್ನೆ ಕಂಪಿಸಿದ ಕರೋನಾ ಅಲೆಯಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದಾರೆ ಇಂತಹ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣಗಳು ಮರುಕಳಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ, ಇಂತಹ ಕೃತ್ಯ ವೆಸಗುವ ದುಷ್ಕರ್ಮಿಗಳಿಗೆ ಸರಕಾರ ಕೂಡಲೇ ನಿರ್ದಾಕ್ಷಿಣ್ಯ ಕನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ್ ಮಾತನಾಡಿ ನೌಕರರ ರಕ್ಷಣೆಗೆ ತಾಲೂಕು ನೌಕರರ ಸಂಘವು ನೈತಿ ಬೆಂಬಲಕ್ಕೆ ಸದಾ ಸಿಧ್ಧವಿರುತ್ತದೆ, ಸರಕಾರ ಇಂತಹ ಪ್ರಕರಣಗಳಿಗೆ ಕಠಿಣ ಕಾನೂನು ರೂಪಿಸುವುದು ಅವಶ್ಯಕವಾಗಿದೆ ಎಂದರು.
ಈ ಸಂಧರ್ಭದಲ್ಲಿ ಹಿರಿಯರಾದ ಶಂಭುಲಿಂಗಯ್ಯ, ಮಾಜಿ ಅಧ್ಯಕ್ಷ ಜ್ಞಾನೇಶ್ವರಯ್ಯ, ಸದಸ್ಯರಾದ ಎಂ.ಕುಮಾರಸ್ವಾಮಿ, ಕೆ.ಮಲ್ಲಿಕಾರ್ಜುನ, ಸಿ.ವೈ.ಮೋರನಾಳ, ಆರ್.ಶಾಂತನಗೌಡ, ಶಿಕ್ಷಕ ರೆಡ್ಡಿನಾಯ್ಕ್, ಒಬಯ್ಯ, ಬಿ.ಕೊಟ್ರ್ಪ, ಹಾಲಪ್ಪ, ಸೂರ್ಯಪ್ರಕಾಶ್,ಎಸ್.ಕೊಟ್ರೇಶ್,ಕಾರ್ಯದರ್ಶಿ ನಾಗರಾಜ್ ಶಿವಲಿಂಗಪ್ಪ ಇನ್ನಿತರರು ಇದ್ದರು.