ಬಳ್ಳಾರಿ

ವಿಮ್ಸ್ ಮೈದಾನ ಖಾಸಗಿಯವರಿಗೆ ನೀಡದಿರಲು ಆಗ್ರಹ

ವಿಮ್ಸ್  ಮೈದಾನ ಖಾಸಗಿಯವರಿಗೆ ನೀಡದಿರಲು ಆಗ್ರಹ

ಬಳ್ಳಾರಿ 23 : ನಗರದ ವಿಮ್ಸ್ಆ ಸ್ಪತ್ರೆಯ ಕ್ರೀಡಾಂಗಣವನ್ನು ಅಭಿವೃದ್ಧಿಗಾಗಿ ಖಾಸಗಿಯವರಿಗೆ ನೀಡದಿರಲು ಈ ಕ್ರೀಡಾಂಗಣವನ್ನು ದಿನಾಲು ತಮ್ಮ ವಾಕಿಂಗ್ ಮತ್ತಿತರ ಕ್ರೀಡೆಗಾಗಿ ಬಳಸುತ್ತಿದ್ದ ಜನತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮತ್ತು ವಿಮ್ಸ್  ನಿರ್ದೇಶಕ ಡಾ.ಗಂಗಾಧರಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ. 

ಅಂದಾಜು 12 ಎಕರೆಯಷ್ಟು ಪ್ರದೇಶವನ್ನು ಹೊಂದಿರುವ ವಿಮ್ಸ ಮೈದಾನದಲ್ಲಿ ದಿನನಿತ್ಯ 150 ಕ್ಕೂ ಹೆಚ್ಚು ಹಿರಿಯರು ದಿನನಿತ್ಯ ಬೆಳಿಗ್ಗೆ ಇಲ್ಲವೇ  ಸಂಜೆ ವಾಕಿಂಗ್ ಗಾಗಿ ಬಳಸುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಇದು ಸರಕಾರದ, ಸಾರ್ವಜನಿಕರಿಗೆ ಮತ್ತು ವಿಮ್ಸ್  ಆಸ್ಪತ್ರೆ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಿದ್ದ ಕ್ರೀಡಾ ಮೈದಾನ ಖಾಸಗಿಯವರ ಪಾಲಾಗುವುದು ಬೇಡ ಎಂದು ದಿನನಿತ್ಯ ಈ ಮೈದಾನದಲ್ಲಿ ವಾಕಿಂಗ್ ಮಾಡುವ 130 ಕ್ಕೂ ಹೆಚ್ಚು ಜನ ಸಹಿ ಮಾಡಿ ಮನವಿ ಮಾಡಿದ್ದಾರೆ.ಇಡೀ ವಿಮ್ಸ್  ಮೈದಾನ ಸಾರ್ವಜನಿಕರಿಗೆ ನಿಷೇಧ ಎಂದು ಪುಕಾರು ಎಬ್ಬಿಸಿರುವುದು ಸರಿಯಲ್ಲ ಕ್ರಿಕೆಟ್ ಮೈದಾನವನ್ನು ಸಹ ಷರತ್ತುಗಳ ಪ್ರಕಾರ ಕಾರ್ಯಕ್ರಮಗಳಿದ್ದಾಗ ಉಚಿತವಾಗಿ ನೀಡಲಿದೆ ಎಂದು ದೂರಿದರು.

ಸುದ್ದಿ ಓದಿ