ನೇಕಾರ ಸೇವಾಸಂಘದಿಂದ ವಿದ್ಯುತ ದರ ಕಡಿಮೆ ಮಾಡುವಂತೆ ಹೆಸ್ಕಾಂಗೆ ಮನವಿ
ಮಹಾಲಿಂಗಪುರ 21: ವಿದ್ಯುತ ಚಾಲಿತ ಮಗ್ಗಗಳಿಗೆ ಬಳಸುತ್ತಿರುವ ವಿದ್ಯುತ ಮೀಟರ್ಗೆ ಮಿನಿಮಮ್ ಚಾರ್ಜ ಮತ್ತು ದರ ಹೆಚ್ಚು ಮಾಡಿರುವುದನ್ನು ಪರೀಶೀಲಿಸಿ, ಮೊದಲಿನಂತೆ ಜಾರಿ ಮಾಡಲು ರಾಜ್ಯ ನೇಕಾರ ಸೇವಾ ಸಂಘದಿಂದ ಹೆಸ್ಕಾಂ ಎ.ಇ.ಇ ಮಂಜುನಾಥ ಭೋಕಿಯವರ ಮುಖಾಂತರ ಕೆ.ಪಿ.ಟಿ.ಸಿ.ಎಲ್.ವ್ಯೆವಸ್ಥಾಪಕ ನಿರ್ದೆಶಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರ್ಕಿ, ರಾಜ್ಯದಲ್ಲಿ 1ಲಕ್ಷ 35ಸಾವಿರ ವಿದ್ಯುತ್ ಮಗ್ಗಗಳು ಕಾರ್ಯನಿರ್ವಹಿಸುತ್ತಿವೆ. ಈ ರಂಗದಲ್ಲಿ ತೊಡಗಿಕೊಂಡಿರುವ ನೇಕಾರರು ದಶಕಗಳಿಂದ ಬರಗಾಲ, ಅತಿವೃಷ್ಠಿ, ಅನಾವೃಷ್ಠಿ ಮತ್ತು ಕೋವಿಡ್-19 ಅವೈಜ್ಞಾನಿಕ ಲಾಕಡೌನ್ ಗಳು ನೇಕಾರರ ಮೇಲೆ ದುಷ್ಪರಿಣಾಮಗಳನ್ನು ಬೀರಿ ಅವರನ್ನು ಕಂಗೆಡಿಸಿವೆ.
ಇಂತಹ ಸ್ಥಿತಿಯಲ್ಲಿ ರಾಜ್ಯ ನೇಕಾರರಿಗೆ ಬದುಕು ಸಾಗಿಸುವುದೇ ಕಷ್ಟಕರವಾಗಿರುವಾಗ 5ಎಚ್.ಪಿ.ಮೇಲ್ಪಟ್ಟ ಮೀಟರ್ ಗಳಿಗೆ ಎಚ್.ಪಿ 1ಕ್ಕೆ 85 ರೂ, 4 ಎಚ್.ಪಿ.ಒಳಗಿನ ಕನೇಕ್ಷಣಗಳಿಗೆ ಎಚ.ಪಿ.1ಕ್ಕೆ 75ರೂ ಶುಲ್ಕ, ವಿದ್ಯುತ ದರ ಹೆಚ್ಚಳ ಅಲ್ಲದೆ ಈ ಮೊತ್ತಕ್ಕೆ ಜಿ.ಎಸ್.ಟಿ ಸೇರಿ ಸಾಮಾನ್ಯ ವೃತ್ತಿಪರ ನೇಕಾರನ ಮೇಲೆ ಸಾಕಷ್ಟು ಹೊರೆಯಾಗುತ್ತಿದೆ. ನಿಗಮವು ನೇಕಾರರ ಸ್ಥಿತಿಗತಿಯನ್ನು ಕೂಲಂಕುಶವಾಗಿ ಅರಿತು ಸೂಕ್ತಕ್ರಮ ಕೈಗೊಳ್ಳುವುದರೊಂದಿಗೆ ನೇಕಾರರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲು ಮನವಿ ಮಾಡಿದರು.
ಪ್ರತಿಭಟನೆ : ವೃತ್ತಿಪರ ನೇಕಾರರ ಹಕ್ಕೋತ್ತಾಯಗಳಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಜು.23ರಂದು ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಯೊಂದಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರಣ ಈ ಪ್ರತಿಭಟನೆಯಲ್ಲಿ ಎಲ್ಲ ವೃತ್ತಿಪರ ನೇಕಾರರು ಭಾಗವಹಿಸಲು ಶಿವಲಿಂಗ ಟಿರ್ಕಿ ಕರೆ ನೀಡಿದರು.
ರಾಜೇಂದ್ರ ಮಿರ್ಜಿ, ಶಂಕರ ಶಿರೋಳ, ಶ್ರೀಶೈಲ ಬೀಸನಕೊಪ್ಪ, ಶಂಬು ಕೈಸೊಲಗಿ, ರಮೇಶ ನಾಗರಾಳ, ಮಲ್ಲಪ್ಪ ಚಿಂಚಕಂಡಿ, ಮಲ್ಲಪ್ಪ ಹುಲಕುಂದ, ಮಹಾಲಿಂಗಪ್ಪ ಲಕ್ಷೆ??ಶ್ವರ, ನೀಲಕಂಠ ಮುಂಡಾಸ, ಮಹಾಲಿಂಗಪ್ಪ ಅಮ್ಮಣಗಿ, ಕಾಡಪ್ಪ ಕಡಕೋಳ, ಮಹಾಲಿಂಗಪ್ಪ ಕಂದಗಲ್ಲ, ಮಹಾದೇವ ಹೊಸಕೋಟಿ, ಮಹಾದೇವಪ್ಪ ಕೈಸೊಲಗಿ, ಸಿ.ಎಸ್ ಹುಣಶ್ಯಾಳ, ಎಂ.ಎಸ್ ಮುಂಡಗನೂರ, ಮಹಾಲಿಂಗ ಹಳ್ಳಿ, ರಾಜು ಕಡಖೋಳ, ಸೋಮಶೇಖರ ಮರೆಗುದ್ದಿ, ನಿಜಗುನಿ ಹಳ್ಳಿ, ಮಹಾಲಿಂಗ ಹಳ್ಳಿ ಸೇರಿದಂತೆ ಹಲವರು ಇದ್ದರು.