ಮಹಲಿಂಗಪುರ

ಮಹಾಲಿಂಗಪುರವನ್ನು ತಾಲೂಕು ಕೇಂದ್ರ ಘೋಷಣೆಗೆ ಒತ್ತಾಯಿಸಿ ಮನವಿ

ಮಹಾಲಿಂಗಪುರವನ್ನು ತಾಲೂಕು ಕೇಂದ್ರ ಘೋಷಣೆಗೆ ಒತ್ತಾಯಿಸಿ ಮನವಿ


ಮಹಾಲಿಂಗಪುರ 07: ಮಹಾಲಿಂಗಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ತೀವ್ರವಾಗಿ ಒತ್ತಾಯಿಸಿ ಸ್ಥಳೀಯ ತಾಲೂಕು ಹೋರಾಟ ಸಮಿತಿ ಪಟ್ಟಣದ ಅಂಗಡಿ-ಮುಂಗಟ್ಟುಗಳನ್ನು ಬಂದ ಮಾಡಿ ಪು.ಸಭೆ ಮುಖ್ಯಾಧಿಕಾರಿ ಎಚ್ ಎಸ್‌. ಚಿತ್ತರಗಿ ಅವರಿಗೆ ಮನವಿ ಸಲ್ಲಿಸಿತು.  

ಬುಧವಾರ ಮುಂಜಾನೆ 10 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಸ್ಥಳೀಯ ಹಾಗೂ ನೆರೆಹೊರೆಯ ಹಳ್ಳಿಗಳ ಮುಖಂಡರು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಹಾಗೂ ಮುಖಂಡರು ಬಸವೇಶ್ವರ ಶಿಲಾ ಮೂರ್ತಿಗೆ ಪುಷ್ಪ ಮಾಲೆ ಹಾಕಿ ಜೋಡು ರಸ್ತೆ, ನಡುಚೌಕಿ, ಜವಳಿ ಬಾಜಾರ, ಗಾಂಧಿವೃತ್ತ, ಚನ್ನಮ್ಮ ವೃತ್ತ ಹಾಗೂ ಪುರಸಭೆಯ ವರೆಗೆ ಸಾಗುವ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಇಲ್ಲ ಮುಧೋಳ ತಾಲೂಕಿನಲ್ಲಿಯೇ ಯಥಾಸ್ಥಿತಿಯಾಗಿ ಮುಂದುವರೆಸಬೇಕು. ಢವಳೇಶ್ವರ ಗ್ರಾಮದಿಂದ ಸುಮಾರು 27 ಕಿ.ಮೀ ಅಂತರದಲ್ಲಿರುವ ತೇರದಾಳ ಪಟ್ಟಣಕ್ಕೆ ರಬಕವಿ /ಬನಹಟ್ಟಿ ತಾಲೂಕನ್ನು ದಾಟಿ ಹೋಗಬೇಕಾದ ಪರಿಸ್ಥಿತಿ, ಸರಕಾರದ ಈ ಅವೈಜ್ಞಾನಿಕ ನಡೆಯಿಂದ ಸಾರ್ವಜನಿಕರಿಗೆ ಸಮಯ ಹಾಗೂ ಆರ್ಥಿಕ ನಷ್ಠ ಉಂಟಾಗುತ್ತದೆ. ಇಂತಹ ಕ್ರಮವನ್ನು ನಾವು ಖಡಾಖಂಡಿತವಾಗಿ ತಿರಸ್ಕರಿಸುವತ್ತೇವೆ ಮತ್ತು ತಾಲೂಕು ದೊರಕುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು. 

ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ ಮತ್ತು ರೈತ ಸಂಘ ಹಸಿರು ಸೇನೆ ರಾಜಾಧ್ಯಕ್ಷ ಗಂಗಾಧರ ಮೇಟಿ ಮಾತನಾಡಿ ಮಹಾಲಿಂಗಪುರವು ರಾಜ್ಯದ ಬೊಕ್ಕಸಕ್ಕೆ ಉತ್ತಮ ಕರ ಆದಾಯ ನೀಡುವ, ತಾಲೂಕಿಗೆ ಎಲ್ಲ ಅರ್ಹತೆಗಳನ್ನು ಹೊಂದಿರುವ ಐತಿಹಾಸಿಕ ಪಟ್ಟಣವಾಗಿದೆ ಆದ್ದರಿಂದ ಬಹುದಿನಗಳ ಬೇಡಿಕೆ ಮಹಾಲಿಂಗಪುರವನ್ನು ಮುಧೋಳ ತಾಲೂಕಿನಲ್ಲಿಯೇ ಮುಂದುವರೆಯಿಸಿ ಶೀಘ್ರದಲ್ಲಿ ತಾಲೂಕು ಕೇಂದ್ರವೆಂದು ಘೋಷಣೆ ಮಾಡಬೇಕು ತಪ್ಪಿದಲ್ಲಿ ಗ್ರಾಮ ಪಟ್ಟಣಗಳ ಸಾರ್ವಜನಿಕರು ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  

ಕೆಪಿಸಿಸಿ ರೈತ ರಾಜ್ಯ ಸಂಚಾಲಕ ಸಿದ್ದಪ್ಪ ಕೊನ್ನೂರ, ಪು.ಸಭೆ ಮಾಜಿ ಅಧ್ಯಕ್ಷ ಜಿ ಎಸ್‌. ಗೊಂಬಿ, ಕಾಂಗ್ರೆಸ್ ಹಿರಿಯ ಧುರೀಣ ಎಸ್ ಎಂ. ಉಳ್ಳೆಗಡ್ಡಿ, ರಾಜ್ಯ ಭಾಜಪ ನೇಕಾರ ಪ್ರಕೋಷ್ಟ ಅಧ್ಯಕ್ಷ ಮನೋಹರ ಶಿರೋಳ, ಜೆಡಿಎಸ್ ಧುರೀಣ ನಿಂಗಪ್ಪ ಬಾಳಿಕಾಯಿ, ಯೋಗ ಗುರು ಫಕ್ರುದ್ದೀನ ಕುಂಟೋಜಿ, ರೈತ ಮುಖಂಡ ಬಂದೇನವಾಜ ಪಕಾಲಿ ಇನ್ನಿತರರು ತಾಲೂಕು ಹೋರಾಟ ಪರವಾಗಿ ಮಾತನಾಡಿದರು. ಹೋರಾಟಗಾರರು ಚನ್ನಮ್ಮ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ಟೈಯರ್ ಸುಟ್ಟು ಮಹಾಲಿಂಗಪುರ ಪಟ್ಟಣ ತಾಲೂಕಿಗೆ ಆಗ್ರಹಿಸಿ ಮತ್ತು ನಿಯೋಜಿತ ತೇರದಾಳ ತಾಲೂಕಿಗೆ ಸೇರೆ​‍್ಡಗೊಳಿಸುವುದರ ವಿರುದ್ಧ ಹೋರಾಟಗಾರರು ತಮ್ಮ ಆಕ್ರೋಶವನ್ನು ಹೊರಹಾಕಿದರು. 

ಪುರಸಭೆ ಮಾಜಿ ಅಧ್ಯಕ್ಷರಾದ ಬಸನಗೌಡ ಪಾಟೀಲ,ಯಲ್ಲನಗೌಡ ಪಾಟೀಲ, ಶೇಖರ ಅಂಗಡಿ, ಜಿ ಎಸ್‌. ಗೊಂಬಿ, ಬಸವರಾಜ ರಾಯರ ಮತ್ತು ಮಹಾಂತೇಶ ಹಿಟ್ಟಿನಮಠ, ಡಾ. ಎ.ಆರ್ ಬೆಳಗಲಿ, ಸಂಗಪ್ಪ ಹಲ್ಲಿ, ಅಶೋಕಗೌಡ ಪಾಟೀಲ,ಮಲ್ಲಪ್ಪ ಸಿಂಗಾಡಿ, ಜಾವೇದ ಭಾಗವಾನ, ಎಸ್ ಎಂ. ಉಳ್ಳೆಗಡ್ಡಿ, ಸಿ.ಎಂ ಹುರಕಡ್ಲಿ,ಮಹಾದೇವ ಮಾರಾಪುರ, ರವಿ ಬ್ಯಾಳಿ, ಭೀಮಶಿ ಸಸಾಲಟ್ಟಿ, ದುಂಡಪ್ಪ ಜಾಧವ, ಬಸವರಾಜ ಮರನೂರ, ಅನೀಲ ಮಮದಾಪೂರ, ಪ್ರಕಾಶ ಮಮದಾಪುರ, ರಾಜು ಚಮಕೇರಿ, ರಾಜು ಬಾರಕೋಲ, ರಾಜೇಶ ಬಾವಿಕಟ್ಟಿ, ಶಂಕರಗೌಡ ಪಾಟೀಲ, ಶ್ರೀಪಾದ ಗುಂಡಾ,ವೆಂಕಣ್ಣ ಗೊಬ್ಬರದ, ಚನಬಸು ಯರಗಟ್ಟಿ, ಬಸವರಾಜ ಹಿಟ್ಟಿನಮಠ, ಮಲ್ಲಪ್ಪ ನಾವಿ ಇನ್ನಿತರರು ತಾಲೂಕು ಹೋರಾಟದಲ್ಲಿ ಭಾಗವಹಿಸಿದ್ದರು 


ಸುದ್ದಿ ಓದಿ