ರೋಣ

ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ಮನವಿ

ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ಮನವಿ

ರೋಣ 11:  ಕರ್ನಾಟಕ ಸ್ವಾಭಿಮಾನ ಎಸ್‌.ಸಿ.ಎಸ್ಟಿ. ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ರೋಣ ಇವರ ವತಿಯಿಂದ ಕಳಕಪ್ಪ ಜಿ ಬಂಡಿ  ಶಾಸಕರು ರೋಣ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದ  ಬಸವಂತಪ್ಪ ಹೆಚ್ ತಳವಾರ ಮಾತನಾಡಿ ಪ್ರಸನ್ನಾನಂದ ಮಹಾಸ್ವಾಮಿಗಳೂ ಬೆಂಗಳೂರಿನ ಪ್ರೀಡಂ ಪಾರ್ಕ್‌ ನಲ್ಲಿ ಸತ್ಯಾಗ್ರಹಕ್ಕೆ ಕುಳಿತು 208 ದಿನಗಳು ಕಳೆದಿವೆ ಎಂದರು.      

ಈ ವಿಷಯವನ್ನು ಪರಿಶಿಷ್ಟ ಜಾತಿ 15 ರಿಂದ 17 ರವರೆಗೆ ಪರಿಶಿಷ್ಟ ಪಂಗಡ 3 ರಿಂದ 7.5 ಮೀಸಲಾತಿ ಹೆಚ್ಚಿಸುವ ಸಲುವಾಗಿ ಸಪ್ಟೆಂಬರ್‌-12 ರಂದು ನಡೆಯುವ ಅಧೀವೇಶನದಲ್ಲಿ ಚರ್ಚೆಮಾಡಿ ವಿದಾನ ಸಭೆಯ 224 ಶಾಸಕರು ಹಾಗೂ ಸಚಿವರು ಎಲ್ಲರೂ ಕೂಡಿಕೊಂಡು ಸರ್ವಾನುಮತದಿಂದ ಅದಿವೇಶನದಲ್ಲಿ ಸಿಪಾರಸ್ಸು ಮಾಡಬೇಕೆಂದು ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು.           ಬಹುದಿನಗಳಿಂದ  ಕರ್ನಾಟಕ ರಾಜ್ಯದಲ್ಲಿ ವಾಲ್ಮೀಕಿ ಜನಾಂಗದವರು ತಮ್ಮ ಪಕ್ಷಕ್ಕೆ ಬೆಂಬಲಿಸಿದ್ದು ಆದ ಕಾರಣ ದಯಮಾಡಿ ನಮ್ಮ ಜನಾಂಗಕ್ಕೆ ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ನಮ್ಮ ಜನಾಂಗಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಈ ಮನವಿ ಶಾಸಕರಿಗೆ,ಸರಕಾರಕ್ಕೆ ಮನವರಿಕೆ ಮಾಡಿದರು.      

ಈ ಸಭೆಯಲ್ಲಿ ಬಸವರಾಜ ತಳವಾರ, ಶಿವಕುಮಾರ ತಳವಾರ,ಶರಣಪ್ಪ ದೊಡ್ಡಮನಿ,ಬಿ.ಹೆಚ್‌.ತಳವಾರ, ಹನಮಂತಪ್ಪ ಹೊಂಬಳ,ಹನಮಪ್ಪ ತಳವಾರ,ಬಸಪ್ಪ ತಳವಾರ,ಅಂದಪ್ಪ ತಳವಾರ,ರಮೇಶ ತಳವಾರ,ಪ್ರಶಾಂತ ಹೊಸೂರು,ಶರಣಪ್ಪ ಮೂಲಿಮನಿ,ಗಣೇಶ ತಳವಾರ,ಹನಮಂತ ತಳವಾರ,ದುರುಗೇಶ ಬಂಡಿವಡ್ಡರ ಸೇರಿದಂತೆ ಮುಂತಾದವರು  ಮನವಿ ಪತ್ರ ನೀಡಿದರು. 


ಸುದ್ದಿ ಓದಿ