ಬಳ್ಳಾರಿ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮನವಿ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ  ಮನವಿ

ಬಳ್ಳಾರಿ 23: ನಗರದ ಎಆರ್‌ಪಿ ಪೊಲೀಸ್ ಲೈನ್ ಸರ್ಕಾರಿ ಶಾಲೆಯನ್ನು ನಿಮಗಾಗಿ ನಾವು ಸಂಸ್ಥೆಯು ದತ್ತು ತೆಗೆದುಕೊಂಡಿದ್ದು ಹಲವು ಶೈಕ್ಷಣಿಕ ವಿಕಾಸದ ಕೆಲಸಗಳನ್ನು ಕೈಗೊಂಡಿದೆ. ಶಾಲೆಯಲ್ಲಿ 05 ಕೋಣೆಗಳು ಶಿಥಿಲಾವಸ್ಥೆಯಲ್ಲಿದ್ದು ಯಾವ ಸಂದಭದಲ್ಲಾದರೂ ಕಟ್ಟಡಗಳು ಬೀಳುವ ಸಂಭವವಿರುತ್ತದೆ. ಇದಲ್ಲದೇ ಕೋಣೆಗಳನ್ನು ಸುಮಾರು ವರ್ಷಗಳಿಂದ ಬಳಸದೇ ಇರುವುದರಿಂದ ಹುಳ,ಚೇಳು, ಹಾವು ಕಾಣಿಸಿಕೊಂಡಿದ್ದು ಉರಗ ತಜ್ಞರನ್ನು ಕರಿಸಿ ಹಾವನ್ನು ಹಿಡಿಸಲಾಗಿದೆ. 

ಈ ಶಿಥಿಲಗೊಂಡ ಕಟ್ಟಡಗಳಿಂದ ಮಕ್ಕಳ ಪ್ರಾಣಕ್ಕೆ ಅಪಾಯವಿದ್ದು ದಿನಗಳು ಉರುಳುತ್ತಿರುವಂತೆ ಮಕ್ಕಳ ಜೀವಗಳ ಬಗ್ಗೆ ಅಂಜಿಕೆಯಾಗುತ್ತಿದೆ. ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಗಣಿಸಿ ಆದಷ್ಟು ಬೇಗ ಹಳೇ ಕೋಣೆಗಳನ್ನು ಕೆಡವಿ ಹೊಸ ಕೋಣೆಗಳನ್ನು ನಿರ್ಮಿಸುವ ಮೂಲಕ ಮಕ್ಕಳನ್ನು ಅಪಾಯದಿಂದ ಪಾರುಮಾಡುವುದರ ಜೊತೆಗೆ ಈ ಮೂಲಕ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿರುವ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೆಮ್ಮ ತುಂಬುವ ಕೆಲಸವನ್ನು ಮಾಡಿಕೊಡಬೇಕೆಂದು ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಬಳ್ಳಾರಿ ಜಿಲ್ಲೆ, ಕಾರ್ಯ ನಿರ್ವಾಹಕ ಅಭಿಯಂತರರು, ಪಿಆರ್‌ಇಡಿ ಇಲಾಖೆ ಬಳ್ಳಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಪೂರ್ವವಲಯ ಬಳ್ಳಾರಿ ರವರಿಗೆ ಮನವಿ ಪತ್ರವನ್ನು ನೀಡಲಾಯಿತು.  

ಈ ಸಂದರ್ಭದಲ್ಲಿ ನಿಮಗಾಗಿ ನಾವು ಸಂಸ್ಥೆಯ ಅಧ್ಯಕ್ಷರಾದ ವಿನಯ್ ಕುಮಾರ್ ಕಾಯದರ್ಶಿ ಬಿ ಮಾರುತಿ ಎಸ್‌ಡಿಎಂಸಿ ಉಪಾಧ್ಯಕ್ಷರಾದ ವೀರೇಶ್ ಶಾಲೆಯ ಹಳೇ ವಿದ್ಯಾರ್ಥಿ ಕೆಂಚಪ್ಪ ಮತ್ತು ಸಂಸ್ಥೆಯ ಸದಸ್ಯರಾದ ದಕ್ಷಿಣಮೂರ್ತಿ, ಅಜಿತ್,ಕೇದಾರ್ ನಾಥ್, ಬಾಲಸುಬ್ರಮಣ್ಯ,ಅನಿಲ್,ಸೂರಜ್ ಉಪಸ್ಥಿತರಿದ್ದರು. 


ಸುದ್ದಿ ಓದಿ