ಬಳ್ಳಾರಿ

ನ್ಯಾಯಾಧೀಶ ವರ್ತನೆ ಖಂಡಿಸಿ ಮನವಿ

ನ್ಯಾಯಾಧೀಶ ವರ್ತನೆ  ಖಂಡಿಸಿ ಮನವಿ

ಬಳ್ಳಾರಿ 04: ಸಂವಿಧಾನ ಜಾರಿಯಾದ ಗಣರಾಜ್ಯೋತ್ಸವ ದಿನದಂದು ಸಂವಿಧಾನಶಿಲ್ಪಿ ಅಂಬೇಡ್ಕರ್ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿ, ಅಂಬೇಡ್ಕರ್ ಭಾವಚಿತ್ರ ತೆಗೆಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ವರ್ತನೆಯನ್ನು ಬಳ್ಳಾರಿ ಜಿಲ್ಲಾ ಡಾ. ಬಿ.ಆರ್‌.ಅಂಬೇಡ್ಕರ್ ಸಂಘದ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.  
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್‌.ಚಿದಾನಂದಪ್ಪ, ಕಾರ್ಯಾಧ್ಯಕ್ಷ ಎಂ.ವಿ.ಎರುಕಲಸ್ವಾಮಿ, ಉಪಾಧ್ಯಕ್ಷರಾದ ಬಿ.ಕೃಷ್ಣಪ್ಪ, ಸದಸ್ಯರಾದ ಕುಡಿತಿನಿ ಪಂಪಾಪತಿ, ವಿಜಯಕುಮಾರ್, ವೆಂಕಟೇಶ್ ಹೆಗಡೆ, ಸೋಮಶೇಖರ್, ಗಂಗಾಧರ, ದಾನಪ್ಪ, ಟಿ.ಆನಂದ, ಮಹಾನಂದಿಕೊಟ್ಟಂ ಬಾಬು, ಪೃಥ್ವಿರಾಜ್ ಸೇರಿದಂತೆ ಹಲವಾರು ಮುಖಂಡರು ಮಾತನಾಡುತ್ತಾ, ಈ ದೇಶದ ಸರ್ವೋಚ್ಛ ನ್ಯಾಯಾಲಯದಿಂದ ಹಿಡಿದು ಮುನ್ಸಿಫ್ ಕೋರ್ಟ್‌ವರೆಗೆ ಸಂವಿಧಾನದ ಆಧಾರದ ಮೇಲೆ ಕಾರ್ಯಕಲಾಪ ನಡೆಯುತ್ತದೆ. ಅಂತಹುದರಲ್ಲಿ ದೇಶಕ್ಕೆ ಅಪಾರವಾದ ಗೌರವ ಇರಬೇಕಿತ್ತು. ಜಿಲ್ಲಾ ನ್ಯಾಯಾಧೀಶಂತಹ ಮಹತ್ತರ ಸ್ಥಾನದಲ್ಲಿ ಕುಳಿತರಿಗೆ ಸಂವಿಧಾನ ಮತ್ತು ಅದನ್ನು ರಚಿಸಿದವರ ಬಗ್ಗೆ ಅಪಾರ ಗೌರವ ಇರಲೇಬೇಕು. ಆದರೆ ತಮ್ಮ ಮನುವಾದಿ ಮನಸ್ಥಿತಿಯಿಂದ ಅವರು ಇನ್ನೂ ಹೊರಬಂದಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕಳೆದ ವರ್ಷ ಸರ್ಕಾರವು ಸಂವಿಧಾನ ಜಾರಿಯಾದ ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಭಾವಚಿತ್ರವನ್ನು ಎಲ್ಲಾ ಶಾಲೆ, ಕಾಲೇಜು ಮತ್ತು ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಇಡಬೇಕೆಂದು ಆದೇಶ ಹೊರಡಿಸಲಾಗಿದೆ. ನ್ಯಾಯಾಂಗ ಇಲಾಖೆ ಕೂಡಾ ಸರ್ಕಾರದ ಭಾಗವೇ ಹೊರತು ಪ್ರತ್ಯೇಕವಲ್ಲ. ನ್ಯಾಯಾಧೀಶರ ಸ್ಥಾನವನ್ನು ನಿಭಾಯಿಸುತ್ತಾರೆ ಎಂಬುದೇ ಆಶ್ಚರ್ಯಕರ. 
ಕೂಡಲೇ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೆಯೇ ಸದರಿ ಜಿಲ್ಲಾ ನ್ಯಾಯಾಧೀಶರು ಇದುವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆಯಡಿಯಲ್ಲಿ ನೀಡಿರುವ ತೀರ​‍್ುಗಳನ್ನು ಪರಾಮರ್ಶೆಗೆ ಒಳಪಡಿಸಲು ಹೈಕೋರ್ಟ್‌ ಒಂದು ಸಮಿತಿಯನ್ನು ರಚಿಸಬೇಕೆಂದು, ಬಳ್ಳಾರಿ ಜಿಲ್ಲಾ ಡಾ. ಬಿ.ಆರ್‌.ಅಂಬೇಡ್ಕರ್ ಸಂಘವು ಖಂಡಿಸುತ್ತದೆ ಎಂದರು. 

ಸುದ್ದಿ ಓದಿ