ಮಹಲಿಂಗಪುರ

ನ್ಯಾಯಾಧೀಶನ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ

ನ್ಯಾಯಾಧೀಶನ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ


ಮಹಾಲಿಂಗಪುರ : ಇತ್ತೀಚೆಗೆ ಗಣರಾಜ್ಯೋತ್ಸವ ದಿನದಂದು ರಾಯಚೂರ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಡಾ.ಅಂಬೇಡ್ಕರ ಅವರ ಭಾವಚಿತ್ರ ತೆರವುಗೊಳಿಸಲು ಹೇಳಿ ಅವಮಾನ ಗೊಳಿಸಿರುವ ಘಟನೆ ಖಂಡಿಸಿ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಬುಧವಾರ ಸ್ಥಳೀಯ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಪುರಸಭೆ ಮುಖ್ಯಾಧಿಕಾರಿ ಎಚ್‌. ಎಸ್‌. ಚಿತ್ತರಗಿ ಅವರ ಮೂಲಕ ಮನವಿ ನೀಡಿದರು.  

 ಪತ್ರಕರ್ತ ಹಾಗೂ ಶಿಕ್ಷಕ ಗಂಗಾಧರ ಗಾಡಿಕರ ಮಾತನಾಡಿ ಸುದೀರ್ಘ ಅವಧಿಯಲ್ಲಿ ದಲಿತರನಷ್ಟೇ ಗುರಿ ಮಾಡಿಕೊಂಡು ಬರೆಯದೆ, ದೀನ, ದಲಿತ, ಅಲ್ಪಸಂಖ್ಯಾತ, ಶೋಷಣೆಗೆ ಒಳಗಾದ ಸಮುದಾಯಗಳ ಏಳಿಗೆಗಾಗಿ ಮತ್ತು ಸಮಾನತೆಯ ಬದುಕಿನ ರಹದಾರಿಗೆ ಡಾ. ಬಿ.ಆರ್ ಅಂಬೇಡ್ಕರ ಅವರು ವಿಶ್ವಶ್ರೇಷ್ಠ ಸಂವಿಧಾನವನ್ನು ರಚಿಸಿದ್ದಾರೆ. ಅಂತಹ ಮಹಾತ್ಮನಿಗೆ ಇದೇ ಸಂವಿಧಾನದಡಿ ನ್ಯಾಯಾಧೀಶರಾಗಿರುವ ಮಲ್ಲಿಕಾರ್ಜುನಗೌಡ ಮಾಡಿರುವ ಅಪಮಾನ ಘೋರ ಕೃತ್ಯ, ಸೇವೆಯಿಂದ ಅವರನ್ನು ವಜಾಗೊಳಿಸಿ ನ್ಯಾಯಾಂಗ ವಶಕ್ಕೆ ನೀಡಿ, ಜೈಲಿಗೆ ಅಟ್ಟಬೇಕು ಎಂದರು. 

 ಶ್ರೀರಾಮಸೇನಾ ಹಿಂದೂಸ್ತಾನ ಜಿಲ್ಲಾಧ್ಯಕ್ಷ ನಾಗರಾಜ ಭಜಂತ್ರಿ ಮಾತನಾಡಿ ಜವಾಬ್ದಾರಿ ಸ್ಥಾನದಲ್ಲಿರುವ ನ್ಯಾಯಾಧೀಶರ ಕೃತ್ಯವನ್ನು ನಮ್ಮ ಸಂಘಟನೆ ತೀವೃವಾಗಿ ಖಂಡಿಸುತ್ತದೆ ಮತ್ತು ಸರ್ಕಾರ ಯಾವುದೇ ತರಹದ ರಾಜಕೀಯ ಮಾಡದೆ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ನೀಡಬೇಕು. ಸಂವಿಧಾನ ಶಿಲ್ಪಿ ಭೀಮರಾವ್ ಅಂಬೇಡ್ಕರ್ ಅವರಿಗೆ ಆಗಿರುವ ಅವಮಾನವನ್ನು ರಾಜ್ಯ, ರಾಷ್ಟ್ರದ ಯಾವೊಂದು ಮಾಧ್ಯಮವೂ ತೋರಿಸದೆ ತಮ್ಮ ತಾರತಮ್ಯ ಧೋರಣೆಯನ್ನು ಪ್ರದರ್ಶಿಸಿವೆ ಎಂದು ಖಾರವಾಗಿ ನುಡಿದರು. 

 ಈ ಪ್ರತಿಭಟನೆಯಲ್ಲಿ ದಲಿತ ಸಮುದಾಯ, ಎಸ್‌.ಡಿ.ಪಿ.ಆಯ್, ಶ್ರೀರಾಮಸೇನಾ ಹಿಂದೂಸ್ತಾನ ಸಂಘ, ಟಿಪ್ಪು ಸುಲ್ತಾನ್ ಸಂಘ ಹಾಗೂ ಇನ್ನೀತರೆ ಸಂಘಟನೆಗಳು ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಿದರು. 

 ಭೀಮ ಆರ್ಮಿ ಅಧ್ಯಕ್ಷ ಬಸವರಾಜ ಮಾವಿನಹಿಂಡಿ ಮಾತನಾಡಿದರು. ಈ ಸಂದರ್ಭದಲ್ಲಿ ಭೀಮಸಿ ಗೌಂಡಿ, ಅರ್ಜುನ ದೊಡಮನಿ, ಪರಶುರಾಮ ಮೇತ್ರಿ, ಶಿವಲಿಂಗ ಘಂಟಿ, ಶಿವಬಸು ಗೌಂಡಿ, ಅಬ್ದುಲ್ಲಾ ಆಲಗೂರ, ಕೆಂಪಣ್ಣ ಮೇತ್ರಿ, ಶ್ರೀಶೈಲ ದೊಡಮನಿ, ಪ್ರಶಾಂತ ಮುಖ್ಯನ್ನವರ, ಲಕ್ಷ್ಮ ಣ ಮಾಂಗ,ಎಂ.ಡಿ ಆನಂದ, ಮಹಾಲಿಂಗಪ್ಪ ಗೌಂಡಿ, ರವಿ ಹಲಸಪ್ಪಗೋಳ, ಮಹೇಶ ಗೌಂಡಿ, ರಘು ಆನೇಪ್ಪಗೋಳ, ಧರ್ಮರಾಜ ಪೂಜಾರಿ, ಶ್ರೀನಿವಾಸ ಬಂಡಿವಡ್ಡರ, ಆನಂದ ನೂಲಿ, ಯುನೂಸ್ ಬೀಳಗಿ, ಜಗದೀಶ ಒಂಟಗೋಡಿ, ನಂದನ ಮುಖ್ಯನ್ನವರ, ಚಂದ್ರು ಭಜಂತ್ರಿ, ಮುಬಾರಕ್ ಅಲ್ಲಾಖಾನ, ಶಂಕರ ಬೆಳವಂಕಿ, ವಿನಾಯಕ ಲೋಹಾರ, ಬಸು ಮೇದಾರ, ಭಾಷಾ ಬಿಸ್ತಿ, ಭೀಮಸಿ ಮಾವಿನಹಿಂಡಿ, ಮಹಾಲಿಂಗಪ್ಪ ಭಜಂತ್ರಿ, ಅನೀಲ ದೊಡಮನಿ, ದುರ್ಗಪ್ಪ ಕಿರಿಕಿರಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ