ಹಗರಿಬೊಮ್ಮನಹಳ್ಳಿ

ಭೂಮಿ ಸರ್ವೇ ದರ ನಿಗದಿಪಡಿಸುವಂತೆ ಒತ್ತಾಯಿಸಿ ಮನವಿ

ಭೂಮಿ ಸರ್ವೇ ದರ ನಿಗದಿಪಡಿಸುವಂತೆ ಒತ್ತಾಯಿಸಿ ಮನವಿ

ಹಗರಿಬೊಮ್ಮನಹಳ್ಳಿ. ಫೆ.09 : ರಾಜ್ಯ ಸರಕಾರವು ಇದೇ ಫೆ.1ರಿಂದ ಜಾರಿಯಾಗುವಂತೆ ಭೂಮಿ ಸರ್ವೇ ಮಾಡುವ ಕಾರ್ಯಕ್ಕೆ ನಿಗದಿಗೊಳಿಸಿದ ದರವನ್ನು ಖಂಡಿಸಿ ಹಳೆಯ ದರವನ್ನೆ ನಿಗದಿಪಡಿಸುವಂತೆ ಒತ್ತಾಯಿಸಿ ತಾಲೂಕು ಅಹಿಂದ ವೇದಿಕೆಯು ಬುಧವಾರ ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದರು. 

ಅಹಿಂದ ವೇದಿಕೆಯ ಜಿಲ್ಲಾ ಸಂಚಾಲಕ ಬುಡ್ಡಿ ಬಸವರಾಜ ಮನವಿ ಪತ್ರ ನೀಡಿ ಮಾತನಾಡಿ ರಾಜ್ಯ ಸರ್ಕಾರ ಭೂ ಮಾಪನ ಇಲಾಖೆಯಿಂದ ಭೂಮಿ ಸರ್ವೆ ಮಾಡಲು ರೂ.35/- ಗಳಿಂದ ರೂ.5000/- ಗಳಿಗೆ ಹೆಚ್ಚಿಸಿ ಫೆಬ್ರವರಿ 01 ರಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿರುವುದು ಹಾಡಹಗಲೇ ರೈತರ ಜೇಬಿಗೆ ಕತ್ತರಿ ಹಾಕಿದಂತಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಇದು ರೈತ ವಿರೋಧಿ ಸರ್ಕಾರವಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನೀಡದೇ ರೈತರ ವಿರುದ್ಧ ಚಾಟಿ ಬೀಸುವ ನಿಟ್ಟಿನಲ್ಲಿ ಭೂ-ಮಾಪನಾ ಇಲಾಖೆಯಿಂದ ಸರ್ವೇ ಮಾಡುವ ಪ್ರತಿಯೊಂದು ಜಮೀನಿಗೂ ದೊಡ್ಡಮಟ್ಟದ ಶುಲ್ಕ ನಿಗಧಿ ಮಾಡಿರುವುದು ಖಂಡನೀಯ. ಈ ಕೂಡಲೇ ಸರ್ಕಾರ ಹೊಸದಾಗಿ ಆದೇಶ ಹೊರಡಿಸಿ ಮೊದಲಿನ ಧರದಲ್ಲೇ ಸರ್ವೇ ಕಾರ್ಯ ಮಾಡಲು ಅಹಿಂದ ವೇದಿಕೆಯಿಂದ ಅಗ್ರಹದ ಜೊತೆ ಒತ್ತಾಯ ಮಾಡುತ್ತಿದ್ದೆವೆ ಎಂದರು. 

ಮುಖಂಡ ಗನಿಸಾಬ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ದೇಶದ ಬೆನ್ನೆಲುಬು ಎಂಬ ಮಾತಿಗಷ್ಠೇ ಸೀಮಿತವಾಗಿರುವ ರೈತನಿಗೆ ಸಹಸ್ರ ಸಮಸ್ಯೆಗಳಿದ್ದರೂ ಸರಕಾರ ಪರಿಹಾರ ನೀಡುವಲ್ಲಿ ಮೀನಮೇಷ ಏಣಿಸುತ್ತಿದೆ ಅದರ ಜೊತೆಗೆ ಫೆ.1ರಿಂದ ಸರ್ವೇ ಮಾಪನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಖಂಡನೀಯ ಕೂಡಲೇ ಸರಕಾರ ಮೊದಲಿದ್ದ ದರವನ್ನು ಮುಂದುವರೆಸುವಂತೆ ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಸಂಘದ ಅಧ್ಯಕ್ಷ ದೊಡ್ಡಬಸಪ್ಪ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್, ಮಾತನಾಡಿದರು. ಮದರ್ ಸಾಬ್, ಅನಿಲ್‌ಕುಮಾರ್ ಜಾಣ, ನಾಯಕರ ಮಂಜುನಾಥ, ಎ.ಹನುಮಂತ, ಬಾಲು, ಹರಿಜನ ಬಸವರಾಜ, ಕೆಂಚಪ್ಪ, ಪರಶುರಾಮ, ಎಸ್‌.ಎನ್‌.ಭಜಂತ್ರಿ, ಗುಲ್ಜಾರ್, ಅಸ್ಲಂ, ಹೇಮೇಶ್, ರಾಮಪ್ಪ, ಆರ್‌.ಬಸವರಾಜ ಇತರರು ಇದ್ದರು. 


ಸುದ್ದಿ ಓದಿ