ಮುದ್ದೆಬಿಹಾಲ್

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ

ಮುದ್ದೇಬಿಹಾಳ:  ಪೆಟ್ರೋಲ್, ಡಿಸೈಲ್ ಹಾಗೂ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ದಿನದಿನಕ್ಕೆ ಏರಿಕೆಗೊಳ್ಳುತ್ತಿದೆ ಆದರೇ ರೈತರಿಗೆ ಯಾವೂದೇ ಪ್ರಯೋಜನವಿಲ್ಲ ಹಾಗಾಗಿ ದೇಶದಲ್ಲಿ ನರೇಂದ್ರ ಮೋದಿಯವರ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಸರಕಾರವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ  ತಾಲೂಕಾ ಪ್ರಧಾನ ಕಾರ್ಯದರ್ಶಿ ವಾಯ್ ಎಲ್ ಬಿರಾದಾರ ಆರೋಪಿಸಿದರು. 

ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ವಿವಿಧ ಬೇಡಿಕೆ ಇಡೇರಿಸುವಂತೆ ಒತ್ತಾಯಿಸಿ ಸೋಮವಾರ ತಹಶಿಲ್ದಾರ ಬಿ ಎಸ್ ಕಡಕಭಾವಿಯವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. 

ಇತ್ತಿಚಿಗೆ ತಾಲೂಕಿನೆಲ್ಲಡೆ ವಿಪರೀತ ಮಳೆ ಸುರಿಯುವಿಕೆಯಿಂದಾಗಿ ಕೋರಿ ಹುಳ ಬಾಧೆಯಿಂದ ಸೂರ್ಯಕಾಂತಿ ಬೆಳೆ  ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನಾಶಗೊಂಡಿದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಬೇಕಾಬಿಟ್ಟಿಯಾಗಿ ಸರ್ವೇ ಮಾಡಲಾಗಿದೆ ಸರಕಾರದಿಂದ ಯಾವೂದೇ ರೈತರ ಪರವಾದ ಬೆಳೆ ಪರಿಹಾರ ಬಿಡುಗಡೆಗೊಂಡಿಲ್ಲ. ಜೊತೆಗೆ  ತಾಲೂಕಿನ ಯರಗಲ್ಲ ಮದರಿಯಲ್ಲಿ ಸ್ಥಾಪನೆಗೊಂಡ ಬಾಲಾಜಿ ಶುಗರ​‍್ಸ‌ ಹಾಗೂ ನಿಡಗುಂದಿ ಬಳಿ ಇರುವ  ನಾಯನೇಗಲಿ ಇಐಡಿ ಪ್ಯಾರಿ ಶುಗರ​‍್ಸ‌ ಕಂಪನಿಗಳು ರೈತರು ಬೆಳೆದ ಕಬ್ಬಿಗೆ ಸಮರ​‍್ಕ ಬೆಂಬಲ ಬೆಲೆ ನೀಡದೆ  ಕನಿಷ್ಟ ಬೆಂಬಲ ಬೆಲೆಗೆ ರೈತರಿಂದ ಕಬ್ಬು ಖರಿದಿಸುತ್ತಿದ್ದಾರೆ ಇದರಿಂದಾಗಿ ರೈತರು ತೀವೃ ಸಂಕಷ್ಟದಲ್ಲಿ ಸಿಲುಕುವಂತಾಗಿದೆ. 

ಈ ಬಗ್ಗೆ ಸರಕಾರ ರೈತರ ಪರವಾದ ಧ್ವನಿ ಎತ್ತಿ ನ್ಯಾಯವದಗಿಸದೇ ರೈತರ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿರುವುದು ರೈತರ ಸಂಘಗಳು ತೀವೃವಾಗಿ ಖಂಡಿಸುತ್ತದೆ. ಕಾರಣ ಮುಂದಿನ ಎಂಟು ದಿನಗಳವರಗೆ ಕಾಲಾವಕಶ ಸರಕಾರಕ್ಕೆ ಕಾಲಾವಕಾಶ ನೀಡಾಗುತ್ತದೆ ಅಷ್ಟರೋಳಗಾಗಿ ನಮ್ಮ ಬೇಡಕೆಗಳನ್ನು ಇಡೇಸುವ ಮೂಲಕ ರೈತರ ಬಾಳಿಗೆ ಬೆಳಕಾಗಬೇಕು ಇಲ್ಲದಿದ್ದರೆ ಇಡೀ ರಾಜ್ಯದಾಧ್ಯಂತ ಎಲ್ಲ ರೈತ ಸಂಘಟನೆಗಳ ನೇತೃತ್ವದಲ್ಲಿ ಬೀದಿಗಿಳಿದು ಸರಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿ ಮಾಡಿಕೊಂಡರು. 

ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ತಾಲೂಕಾ ಅಧ್ಯಕ್ಷ ಅಯ್ಯಪ್ಪ ಬಿದರಕುಂದಿ, ಸೋಮಶೇಖರ ಹೊಸಮನಿ, ಬಿ ಎಸ್ ಬಿರಾದಾರ, ಜಿ ಬಿ ಹಂಡರಗಲ್ಲ, ಪ್ರಕಾಶ ಓಲೇಕಾರ, ರುದ್ರ​‍್ಪ ಅಗ್ನಿ, ಸಂಗಪ್ಪ ಕತ್ತಿ, ಪೀರಸಾಬ ನಾಯ್ಕೋಡಿ, ವಿಜಯಕುಮಾರ ಗಣಾಚಾರಿ, ಸಾಹೇಬಲಾಲ ದೊಡಮನಿ, ರಮೇಶ ಕರಡಿ, ಸಿದ್ರಾಮಯ್ಯ ಯರಝರಿ, ಮಲ್ಲು ಗುಡ್ನಶಾಳ ಸೇರಿದಂತೆ ಹಲವರು ಇದ್ದರು. 

26ಎಂಬಿಎಲ್1: ಮುದ್ದೇಬಿಹಾಳ ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಹಶಿಲ್ದಾರ ಬಿ ಎಸ್ ಕಡಕಭಾವಿಯವರಿಗೆ ಮನವಿ ಸಲ್ಲಿಸಿದರು. 


ಸುದ್ದಿ ಓದಿ