ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಮನವಿ
ಸಿಂದಗಿ 11: ಇಂಡಿ ತಾಲೂಕಿನ ಮಾರ್ಸನಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಭಾವಚಿತ್ರಕ್ಕೆ ಯಾರೋ ಕಿಡಿಗೇಡಿಗಳು ದುಷ್ಕೃತ್ಯವೆಸಗಿದ್ದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮತಿಯ ಭೀಮವಾದ ಸಂಘಟನೆಯ ಪದಾಧಿಕಾರಿಗಳು ಸಿಂದಗಿ ಪಟ್ಟಣದ ತಹಶೀಲದಾರ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ನಂತರ ತಹಶೀಲದಾರ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿದರು.
ಈ ದೇಶಕ್ಕೆ ಬಹು ದೊಡ್ಡ ಕೊಡುಗೆಯನ್ನು ಕೊಟ್ಟ ವ್ಯಕ್ತಿಯ ಭಾವ ಚಿತ್ರಕ್ಕೆ ಅವಮಾನ ಎಸಗಿದ್ದು ದೇಶದ್ರೋಹದ ಕೆಲಸ ಮಾಡಿದ ಆರೋಪಿಗಳಿಗೆ ಶಿಕ್ಷೆಗೆ ಒಳಪಡಿಸಬೇಕು ಒಂದು ವೇಳೆ ಕಾನೂನು ಕ್ರಮ ಕೈಕೊಳ್ಳದಿದ್ದಲ್ಲಿ ಡಿಎಸ್ಎಸ್ ಭೀಮವಾದ ಸಂಘಟನೆಯಿಂದ ಜಿಲ್ಲ್ಲಾಧ್ಯಂತ ಹಾಗೂ ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡುತ್ತೇವೆ. ಆರೋಪಿಗಳನ್ನು 24 ಗಂಟೆಗಳ ಕಾಲಾವಕಾಶದಲ್ಲಿ ಬಂಧಿಸಬೇಕು, ಡಾ. ಬಿ.ಆರ್.ಅಂಬೇಡ್ಕರ ರವರ ಸರ್ಕಲ್ ಮುಂದುಗಡೆ ಸಿಸಿಟಿವಿ ಅಳವಡಿಸಬೇಕು. ಡಾ. ಬಿ.ಆರ್.ಅಂಬೇಡ್ಕರ ರವರ ಮೂರ್ತಿಯನ್ನು ಪುನರಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ರಾಕೇಶ ಕಾಂಬಳೆ, ತಾಲೂಕಾ ಸಂಚಾಲಕ ಉಮೇಶ ದೊಡಮನಿ, ಸಿದ್ದಲಿಂಗ ದೊಡಮನಿ, ರಮೇಶ ಚಲವಾದಿ, ರಾಜು ಸುಲ್ಪಿ, ರವಿಕುಮಾರ ಹೊಸಮನಿ, ನವೀನ ವಗ್ಗಿ, ಶಿವಾನಂದ ದಿವಟಗಿ, ಪ್ರವೀಣ ಯಂಪೂರೆ, ಮಂಜುನಾಥ ಬಡಿಗೇರ್, ಸುರೇಶ ಸೇರಿದಂತೆ ಇನ್ನಿತರರು ಇದ್ದರು.