ಬ್ಯಾಡಗಿ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಸುಳ್ಳು ಆರೋಪ ಖಂಡನೆವೈದ್ಯರ ವಿರುದ್ಧ ಸುಳ್ಳು ಆರೋಪ ಖಂಡಿಸಿ ಮನವಿ
ಬ್ಯಾಡಗಿ 26: ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ವಿರುದ್ಧ ಆಧಾರ ರಹಿತ ಮತ್ತು ಸುಳ್ಳು ಆರೋಪಗಳನ್ನು ಮಾಡುತ್ತಿರುವವರನ್ನು ಖಂಡಿಸಿ ಹಾಗು ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರ ನೆಮಿಸುವಂತೆ ಆಗ್ರಹಿಸಿ ಕರುನಾಡ ಸಮಗ್ರ ಮಹಿಳಾ ಹಿತ ರಕ್ಷಣಾ ಸಮಿತಿ ಸದಸ್ಯರು ತಾಲೂಕು ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ರಕ್ಷಣಾ ಸಮಿತಿಯ ಸದಸ್ಯ ಅಧ್ಯಕ್ಷ ಪರೀದಾ ಬಾನು ನದಿಮುಲ್ಲಾ ಮಾತನಾಡಿ ಪಟ್ಟಣದಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದು ವಿಷಾಧನೀಯ ಸಂಗತಿ ಇಂತಹ ಆಧಾರ ರಹಿತ ಆರೋಪಗಳಿಂದ ವೈದ್ಯರ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಇನ್ನೊಬ್ಬ ಸದಸ್ಯ ಗುತ್ತೆಮ್ಮ ಮಾಳಗಿ ಮಾತನಾಡಿ ಪಟ್ಟಣದಲ್ಲಿ ನಮ್ಮ ಆಸ್ಪತ್ರೆಯ ಬರುವ ಸಾರ್ವಜನಿಕ ರೋಗಿಗಳ ತುಂಬಾ ಕಾಳಜಿಯನ್ನು ನೋಡಿಕೊಳ್ಳುತ್ತಾರೆ ಮತ್ತು ರಾಜ್ಯದಲ್ಲಿಯೇ ಸ್ವಚ್ಛತೆಗೆ ಬ್ಯಾಡಗಿ ಆಸ್ಪತ್ರೆಯ ಹೆಸರುವಾಸಿಯಾಗಿದೆ ಆಸ್ಪತ್ರೆಗೆ ಬರುವಂತ ರೋಗಿಗಳನ್ನು ವೈದ್ಯಾಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಸ್ಪಂದನೆ ಮಾಡುತ್ತಿರುವುದರಿಂದ ಹಲವು ಜಿಲ್ಲೆಗಳಿಂದ ಹಾಗೂ ತಾಲೂಕುಗಳಿಂದ ಸಾರ್ವಜನಿಕರು ಆಸ್ಪತ್ತೆಗೆ ಬರುತ್ತಾರೆ ಬ್ಯಾಡಗಿ ತಾಲೂಕನಾದ್ಯಂತ ಜನರು ತಮ್ಮ ಆರೋಗ್ಯವನ್ನು ತೋರಿಸಿಕೊಳ್ಳುವುದಕ್ಕೆ ಬರುತ್ತಾರೆ.
ಆಸ್ಪತ್ರೆಯ ವೈದ್ಯರ ಮೇಲೆ ಕಾಣದ ಕೈಗಳು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ ಒಂದು ವೇಳೆ ವೈದ್ಯರು ಲಂಚದ ಸುಳಿಯಲ್ಲಿ ಇದ್ದರೆ ಅವರ ಮೇಲೆ ಸಾಕ್ಷಿ ಪುರಾವೆಗಳಿದ್ದರೆ ಅದರ ಸಮೇತ ಲೋಕಾಯುಕ್ತರಿಗೆ ದೂರು ಸಲ್ಲಿಸಿ ಸುಮ್ಮನೆ ಆರೋಪಿಯಗಳನ್ನು ಮಾಡಬಾರದು ಆರೋಪ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು ಈ ವೇಳೆ ರುಕ್ಮಿಣಿ ಹುಲಿಕಟ್ಟಿ ಮಾತನಾಡಿ ಆಸ್ಪತ್ರೆಗೆ ಮಹಿಳೆಯರು ಗರ್ಭಿಣಿಯರು ಸ್ತ್ರೀರೋಗ ತಜ್ಞರು ಹತ್ತಿರ ಆರೋಗ್ಯವನ್ನು ತೋರಿಸುವದಕ್ಕೆ ಸರಿಸುಮಾರು ದಿನನಿತ್ಯ ಅರವತ್ತರಿಂದ 70 ಮಹಿಳೆಯರು ಸರತಿ ಸಾಲಿನಲ್ಲಿ ಕುಳಿತು ಬೆಳಗ್ಗೆಯಿಂದ ಸಾಯಂಕಾಲ ವರೆಗೆ ಆರೋಗ್ಯವನ್ನು ತೋರಿಸಿಕೊಂಡು ಹೋಗುತ್ತಾರೆ.
ಅದರಲ್ಲೂ ಹೆರಿಗೆಯ ಸಂದರ್ಭದಲ್ಲಿ ಮಹಿಳೆಯರಿಗೆ ವೈದ್ಯರಿಲ್ಲದೆ ತುಂಬಾ ತೊಂದರೆಯಾಗುತ್ತಿದೆ ಆದ್ದರಿಂದ ಸ್ತ್ರೀರೋಗ ತಜ್ಞರ ಅವಶ್ಯಕತೆ ಇದ್ದು ಕೂಡಲೇ ಇನ್ನೊಬ್ಬ ವೈದ್ಯರನ್ನು ನೇಮಕ ಮಾಡಬೇಕೆಂದು ವೈದ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ರಾಘವೇಂದ್ರ. ಟಿ ಹೆಚ್ ಓ ಕಾಂತೇಶ್ ಭಜಂತ್ರಿ ಹಾಗೂ ವೈದ್ಯರು ಮತ್ತು ಮಹಿಳಾ ಹಿತರಕ್ಷಣಾ ಸಮಿತಿಯ ಸದಸ್ಯರಾದ ಅನ್ನಪೂರ್ಣ ಸಣ್ಣಪುಟ್ಟಕ್ಕನವರ. ರೂಪಾ ಬಂಗಿ. ಐಶ್ವರ್ಯ ಮಡಿವಾಳರ. ಕರಿಬಸಮ್ಮ ಮಡಿವಾಳರ. ಸೈನಾಜ್ ಮೆಡ್ಲೇರಿ ಹಾಗೂ ಅನೇಕ ಮಹಿಳೆಯರು ಉಪಸ್ಥಿತರಿದ್ದರು.