ಚಿಕ್ಕೋಡಿ

ನ್ಯಾಯವಾದಿಗಳ ಮೇಲೆ ಹಲ್ಲೆ ಖಂಡಿಸಿ ಮನವಿ

ನ್ಯಾಯವಾದಿಗಳ ಮೇಲೆ ಹಲ್ಲೆ ಖಂಡಿಸಿ ಮನವಿ
ನ್ಯಾಯವಾದಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ನ್ಯಾಯವಾದಿಗಳು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ

ಚಿಕ್ಕೋಡಿ 01: ಇತ್ತಿಚೆಗೆ ನಡೆದ ವಕೀಲನ ಹತ್ಯೆ ಖಂಡಿಸಿ ಇಲ್ಲಿನ ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಇತ್ತಿಚ್ಚೆಗೆ ಕೋರ್ಟ ಆವರಣದಲ್ಲಿಯೇ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ನ್ಯಾಯವಾದಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಸರಕಾರ ವಕೀಲರ ರಕ್ಷಣೆಗೆ ವಿಶೇಷ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ನಾಗೇಶ ಕಿವಡ ಮಾತನಾಡಿ, ಇತ್ತಿಚ್ಚಿನ ದಿನಮಾನಗಳಲ್ಲಿ ವಕೀಲರ ಮೇಲೆ ಹಲ್ಲೆ, ಹತ್ಯೆ ನಡೆಯುವುದು ಸಮಾಜ ತಲೆ ತಗ್ಗಿಸುವಂತಾಗಿದೆ. ನ್ಯಾಯವಾದಿಗಳಿಗೆ ರಕ್ಷಣೆ ಇಲ್ಲಂತಾಗಿದೆ. ಇತ್ತಿಚ್ಚೆಗೆ ನಡೆದ ಹೊಸಪೇಠ ಕೋರ್ಟ ಆವರಣದಲ್ಲಿಯೇ ವಕೀಲನ ಹತ್ಯೆ ಮಾಡಿರುವುದು ಚಿಕ್ಕೋಡಿ ನ್ಯಾಯವಾದಿಗಳ ಸಂಘ ತೀವ್ರವಾಗಿ ಖಂಡಿಸುತ್ತದೆ. ನ್ಯಾಯವಾದಿಗಳ ರಕ್ಷಣೆಗೆ ಬಲವಾದ ಕಾಯ್ದೆ ಜಾರಿ ಮಾಡಿ ನ್ಯಾಯವಾದಿಗಳ ರಕ್ಷಣೆಗೆ ಸರ್ಕಾರ ದಿಟ್ಟ ನಿಲುವು ತೋರಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಲ್.ವ್ಹಿ.ಬೋರನ್ನವರ, ಪ್ರಧಾನ ಕಾರ್ಯದರ್ಶಿ ಎಸ್.ವೈ.ಪಾಟೀಲ, ಜಂಟಿ ಕಾರ್ಯದರ್ಶಿ ಎ.ಕೆ.ಮಾಳಿ, ಖಜಾಂಚಿ ಬಿಪಿ.ದೇಸಿಂಗೆ, ಎಚ್.ಎಸ್.ನಸಲಾಪೂರೆ, ಸತೀಶ ಅಪ್ಪಾಜಿಗೋಳ, ಸತೀಶ ಕುಲಕರ್ಣಿ, ಬಿ.ಆರ್.ಯಾಧವ, ಕೆ.ಟಿ.ಕಿವಡ, ಎಸ್.ಆರ್.ಹರಕೆ, ಎ.ಎಚ್.ಮಕಾಂದಾರ, ಎಸ್.ವ್ಹಿ.ಗಸ್ತೆ, ರಮೇಶ ಕಾಳನ್ನವರ ಮುಂತಾದವರು ಇದ್ದರು.

ಸುದ್ದಿ ಓದಿ