ರೈತ ವಿರೋಧಿ ಕೃಷಿ, ಎಪಿಎಂಸಿ ಕಾಯ್ದೆ ವಿರೋಧಿಸಿ ಮನವಿ
ಲೋಕದರ್ಶನ ವರದಿ
ಮುದ್ದೇಬಿಹಾಳ 08: ಪಟ್ಟಣದ ಕೆಲ ಕೆಲ ರೈತ ಪರ ಸಂಘಟನೆಗಳು, ಹಾಗೂ ಯೂಥ್ ಕಾಂಗ್ರೇಸ್ ಪಕ್ಷ ಸೇರಿದಂತೆ ಕನ್ನಡ ಪರ ಸಂಘಟನೆಗಳ ನೇತ್ರತ್ವದಲ್ಲಿ ಕೇಂದ್ರ ಸಕಾರದಿಂದ ರೈತ ವಿರೋಧಿ ಕೃಷಿ ಹಾಗೂ ಎಪಿಎಂಸಿ ಕಾಯ್ದೆಯನ್ನು ವಿರೋಧಿಸಿ ಇಡೀ ದೇಶಾಧ್ಯಂತ ರೈತರು ಹಾಗೂ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತ್ ಬಂದ್ ಚಳುವಳಿ ಕೇವಲ ಸಾಂಕೇತಿಕ ಸರಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಪಟ್ಟಣ ಸೇರಿದಂತೆ ತಾಲೂಕಿನಲ್ಲೆಡ ನೀರಸ ಪ್ರತಿಕ್ರಿಯೇ ವ್ಯಕ್ತವಾಗಿದೆ.
ಈ ವೇಳೆ ಜಿಲ್ಲಾ ರೈತ ಸಂಘದ ಜಿಲ್ಲಾಅಧ್ಯಕ್ಷ ಸಿದ್ದನಗೌಡ ಬಿರಾದಾರ ಅವರು ಮಾತನಾಡಿ ಈ ಹಿಂದೆ ದಿವಂಗತ ಡಿ ದೇವರಾಜು ಅರಸುರವರು ಆಡಳಿತ ಸರಕಾರ ಉಳ್ಳುವವನೆ ಭೂ ಒಡೇಯ ಎನ್ನು ಮಹತ್ತರ ಕಾಯ್ದೆ ಜಾರಿಗೆ ತರುವ ಮೂಲಕ ಕೋಟ್ಯಾಂತರ ಜನ ರೈತರ ಆಶಾಕಿರಣರಾಗಿದ್ದಲ್ಲದೇ ರೈತರ ಹಿತ ಕಾಪಾಡಿದ ಕೀತರ್ೀ ಅವರಿಗೆ ಸಲ್ಲುತ್ತದೆ.
ಆದರೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡೀಯೂರಪ್ಪನವರ ಬಿಜೆಪಿ ರಾಜ್ಯ ಸರಕಾರ ಅಧಿಕಾರದ ಗದ್ದುಗೆ ಹಿಡಿಯುವ ಸಂದರ್ಭದಲ್ಲಿ ರೈತರ ಹೆಸರಿನಲ್ಲಿ ಹಸಿರು ಶಾಲು ಧರಸಿ ಪ್ರಮಾಣ ವಚನ ಮಾಡಿದ ಇವರು ಸಧ್ಯ ದೇಶದ ಪ್ರತಿಯೊಬ್ಬ ರೈತನಿಗೆ ಅನ್ಯಾಯವಾಗುವ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಇಡೀ ವಿಶ್ವಕ್ಕೆ ರೈತರು ಬೆನ್ನೆಲಬಾಗಿದ್ದ ನಿಜವಾದ ರೈತನ ಬೆನ್ನು ಮೂಳೆಯನ್ನೇ ಮುರಿದಿದ್ದಾರೆ ಕಾಶರಣ ಕೇಂದ್ರ ಸರಕಾರ ಈ ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು ಎಂದಿದ್ದಾರೆ.
ಅದರಂತೆ ಎನ್ ಎಸ್ ಯೂ ಐ ಸಂಘಟನೆಯ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಕೊಪ್ಪ, ಅವರು ಮಾತನಾಡಿ ಈ ದೇಶಕ್ಕೆ ಅನ್ನ ನೀಡುವ ರೈತನನ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕಿಲ್ಲ. ಇವರಿಗೆ ಕೇವಲ ಅಧಿಕಾರದಲ್ಲಿ ಕುಡುವದೊಂದೆ ಇವರ ಸಾಧನೆಯಾಗಿದೆ.ಇವರಿಂದ ದೇಶದಲ್ಲಿ ರಾಜ್ಯದಲ್ಲಿ ರೈತರು ಮತ್ತಷ್ಟು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದ್ದಾರೆ.ಇಂತಹ ರೈತ ವಿರೋಧಿ, ಕಾಮರ್ಿಕ ವಿರೋಧಿ, ಜನಸಾಮನ್ಯರ ವಿರೋದಿ ಬಿಜೆಪಿ ಸರಕಾರವನ್ನು ಯಾರೂ ನಂಬಬಾರದು ಎಂದರು.
ಈ ಸಂದರ್ಭದಲ್ಲಿ ಇಟಗಿಯ ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ರೈತರು ಕರೆ ನೀಡಿದ್ದ ಭಾರತ್ ಬಂದ್ ಚಳುವಳಿಗೆ ಬಂಬಲಿಸಿ ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರೈತ ಮುಖಂಡರಾದ ವಾಯ್ ಎಲ್ ಬಿರಾದಾರ, ಅಯ್ಯಣ್ಣ ಬಿದರಕುಂದಿ,ಹುಲಗಪ್ಪಗೌಡ ಬಿರಾದಾರ, ಸಿದ್ದಪ್ಪ ಬಿದರಕುಂದಿ, ನೀಲಪ್ಪ ಮದರಿ, ಗುರಣ್ಣ ಮದರಿ, ಕಾಶಪ್ಪ ಚಲವಾದಿ, ಪುಂಡಲೀಕ ಮುರಾಳ ಸೇರಿದಂತೆ ಹಲವರು ಇದ್ದರು.