22ರಂದು ಅಪೂರ್ವ ಸಂಗಮ ಕಾರ್ಯಕ್ರಮ
ಮಹಾಲಿಂಗಪುರ 19: 1987-88 ನೇ ಸಾಲಿನ ಎಸ್ಸಿಪಿ ಸಂಸ್ಥೆಯ ಹೈಸ್ಕೂಲ್ ನಲ್ಲಿ ಎಸ್ಸೆಸ್ಸೆಲ್ಸಿ ವರೆಗೆ ವಿಧ್ಯಾಭ್ಯಾಸ ಮಾಡಿದ ಸಹಪಾಠಿಗಳ ವತಿಯಿಂದ ಮೂರನೇಯ ಬಾರಿ ‘ಅಪೂರ್ವ ಸಂಗಮ' ಕಾರ್ಯಕ್ರಮ ಸೆಪ್ಟೆಂಬರ್ 22 ರಂದು ರವಿವಾರ ನಡೆಯಲಿದೆ ಎಂದು ಪಂಡಿತ ಪೂಜಾರ ತಿಳಿಸಿದ್ದಾರೆ.
ಅವರು ಸ್ಥಳೀಯ ಗ್ರ್ಯಾಂಡ್ ಅರಸ ಹೊಟೆಲ್ ನಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಯಶಸ್ವಿ 2022 ರಲ್ಲಿ ಗುರುವಂದನ ಹಾಗೂ 2023 ರಲ್ಲಿ ಸ್ನೇಹ ಸಂಗಮ ಈಗ ಅಪೂರ್ವ ಸಂಗಮ ಕಾರ್ಯಕ್ರಮ ಏರಿ್ಡಸಲಾಗಿದೆ. ಅಂದಾಜು 200 ಸಹಪಾಠಿಗಳ ಪೈಕಿ 150 ಸಹಪಾಠಿಗಳು ಸೇರುವ ಅಂದಾಜು ಇದೆ.
ಮಹಾಲಿಂಗಪುರ ವಾಸವಿ ಕಲ್ಯಾಣ ಮಂಟಪದಲ್ಲಿ ಮುಂಜಾನೆ 9 ಗಂಟೆಗೆ ಜರುಗುವ ಈ ಕಾರ್ಯಕ್ರಮದ ಉದ್ಘಾಟನೆ ಮತ್ತು ಸಹಪಾಠಿಗಳ ಕುರಿತು ಆಶಿರ್ವಚನ ನೀಡಲು ಸಮೀಪದ ರಬಕವಿ ಪಟ್ಟಣದ ಬ್ರಹ್ಮಾನಂದ ಮಠದ ಗುರು ಸಿದ್ಧೇಶ್ವರ ಮಹಾಸ್ವಾಮಿಗಳು ಆಗಮಿಸುವರು.
ನಂತರ ಅಪೂರ್ವ ಮೇಲೋಡಿಸ್ ಅವರಿಂದ ಹಿಂದಿ ಮತ್ತು ಕನ್ನಡ ಚಲನಚಿತ್ರ ಗೀತೆಗಳ ಲಹರಿ ಹರಿದು ಬರಲಿದೆ ಮತ್ತು ಇದೆ ಸಮಯದಲ್ಲಿ ಹಳೆಯ ವಿದ್ಯಾರ್ಥಿ/ ನಿಯರೂ ಕೂಡ ಸಾಂಸ್ಕೃತಿಕ ಮತ್ತು ಗಾಯನ ಪ್ರಸ್ತುತ ಪಡಿಸುವರು.
ಕಾರ್ಯಕ್ರಮದ ಆರಂಭದ ಮುನ್ನ ಮುಂಜಾನೆ 8 ಗಂಟೆಯಿಂದ 9 ಗಂಟೆ ವರೆಗೆ ಉಪಹಾರ, ಮಧ್ಯಾಹ್ನ ಭೂರಿ ಭೋಜನ ವ್ಯವಸ್ಥೆ, ಸಂಜೆ 4.30ಕ್ಕೆ ಸಾಮೂಹಿಕ ಭಾವಚಿತ್ರ ತೆಗೆಯಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪಂಡಿತ ಪೂಜಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಹಪಾಠಿಗಳಾದ ಪಂಡಿತ ಪೂಜಾರ, ಸದಾಶಿವ ಗೊಬ್ಬರದ, ಮೀರಾ ತಟಗಾರ, ರಾಹುಲ್ ಅವರಾದಿ, ಶಂಕರ ಕೋಳಿಗುಡ್ಡ, ರಮೇಶ್ ಗೋಲಭಾವಿ, ರಾಜು ನಂದೆಪ್ಪನ್ನವರ, ಗಿರಿಶ ಹುಬ್ಬಳ್ಳಿ, ಮಲ್ಲಿಕಾರ್ಜುನ ಮಣ್ಣಯ್ಯನವರಮಠ ಇದ್ದರು.