ಬಳ್ಳಾರಿ

ರೈತ ವಿರೋಧಿ ಕೇಂದ್ರ ಬಜೆಟ್ ಪ್ರತಿ ಸುಟ್ಟು ಆಕ್ರೋಶ

ರೈತ ವಿರೋಧಿ ಕೇಂದ್ರ ಬಜೆಟ್ ಪ್ರತಿ ಸುಟ್ಟು ಆಕ್ರೋಶ

ಬಳ್ಳಾರಿ,26: 2024-25 ನೇ ಸಾಲಿನ ಕೇಂದ್ರ ಬಜೆಟ್ ಅತ್ಯಂತ ಜನ ವಿರೋಧಿ, ರೈತ ವಿರೋಧಿ ಮತ್ತು ಕಾರ​‍್ೊರೆಟ್ ಪರವಾಗಿರುವುದು ಎದ್ದು ಕಾಣುತ್ತಿದೆ. ಈ ಬಜೆಟ್ ರೈತರ ಬದುಕಿನ ಬವಣೆಗಳಿಗೆ ಪರಿಹಾರ ನೀಡದೆ ಪೊಳ್ಳು ಆಶ್ವಾಸನೆಗಳಿಂದ ತುಂಬಿದೆ. ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ  ಎಐಕೆಕೆಎಂಎಸ್ ರಾಜ್ಯ ಸಮಿತಿ  ವತಿಯಿಂದ ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ  ಬಡ್ಜೆಟ್ ಪ್ರತಿ ಸುಟ್ಟು, ಅದರ ವಿರುದ್ಧ ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡಲಾಯಿತು.  

ಈ ಬಜೆಟ್ ರೈತರ ಬದುಕಿನ ಬವಣೆಗಳಿಗೆ ಪರಿಹಾರ ನೀಡದೆ ಪೊಳ್ಳು ಆಶ್ವಾಸನೆಗಳಿಂದ ತುಂಬಿದೆ. ನಮ್ಮ ದೇಶದ ರೈತರು ಸಿ2+ಶೇ.50 ದರದಲ್ಲಿ ಕನಿಷ್ಟ ಬೆಂಬಲ ಬೆಲೆಯಡಿ ತಮ್ಮ ಉತ್ಪನ್ನಗಳನ್ನು ಸರ್ಕಾರ ಖರೀದಿಸಬೇಕೆಂದು ಹಾಗೂ ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕೆಂದು, ವಿದ್ಯುತ್ ಮಸೂದೆ-2023 ಅನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಹೇಳಿದರು. 

ಸಂಘದ ರಾಜ್ಯ ಅಧ್ಯಕ್ಷರಾದ ಎಂ.ಶಶಿಧರ್ ಮಾತನಾಡುತ್ತಾ  ದೇಶದ ರೈತರು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ನರೆಗಾ ವ್ಯವಸ್ಥೆಯನ್ನು ಬಲಪಡಿಸಬೇಕು, ಸಾಲಮನ್ನಾ ಮಾಡಬೇಕು ಮತ್ತು ಪಿಂಚಣಿ ಕೊಡಬೇಕು ಎಂದು ಬಹಳ ಕಾಲದಿಂದ ಹೋರಾಟಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಹಕ್ಕೊತ್ತಾಯಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ಜೊತೆಗೆ, ಕೇಂದ್ರ ಬಿಜೆಪಿ ಸರ್ಕಾರವು ಕೃಷಿ ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಶೇ.50 ರಷ್ಟು ಹೆಚ್ಚಿನ ಬೆಲೆಯನ್ನು ಕನಿಷ್ಟ ಬೆಂಬಲ ಬೆಲೆಯಡಿ ಕೊಡುತ್ತಿದ್ದೇವೆಂದು ಹೇಳುತ್ತಾ ಕೇಂದ್ರ ಸರ್ಕಾರದ ಈ ಕಾರ​‍್ೊರೆಟ್ ಪರ  ಬಜೆಟ್  ರೈತರನ್ನು ತಮ್ಮ ಉಳುವಿಗಾಗಿ ದೇಶದಾದ್ಯಂತ ಪ್ರಬಲ ಹೋರಾಟಗಳನ್ನು ಬೆಳೆಸುವತ್ತ ತಳ್ಳುತ್ತಿದೆ. ದೇಶದ ರೈತ ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಪಕ್ಷಗಳ ಅಥವಾ ಸರ್ಕಾರಗಳ ಬದಲಾವಣೆಯಿಂದ ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು 

ಎಲ್ಲಾ ಜನರು, ಅದರಲ್ಲೂ ಮುಖ್ಯವಾಗಿ ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ಪ್ರಜಾತಾಂತ್ರಿಕ ಹಕ್ಕೊತ್ತಾಯಗಳನ್ನು ಈಡೇರಿಸಿಕೊಳ್ಳಲು ಪ್ರಬಲ ಚಳುವಳಿಗಳನ್ನು ಕಟ್ಟಲು ಮುಂದೆ ಬರಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಎಐಕೆಕೆಎಂಎಸ್ ಕರೆ ನೀಡುತ್ತದೆ ಎಂದರು. 

ಈ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ ಮತ್ತು ರಾಜ್ಯ ಉಪಾಧ್ಯಕ್ಷರಾದ ವಿ.ನಾಗಮಾಳ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಸ್‌.ಎನ್ ಸ್ವಾಮಿ, ಲಕ್ಷ್ಮಣ್ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ  ಗಣಪತಿ ಮಾನೆ,  ಮಹೇಶ್, ಗೋವಿಂದ್,  ದೀಪಾ, ಶರಣು ಗೂಗಲ್, ಜಿಲ್ಲಾ ಕಾರ್ಯದರ್ಶಿ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ