ಇನ್ನೋರ್ವ ತಮಿಳುನಾಡು ಸಚಿವರಿಂದ ಸನಾತನ ಧರ್ಮ ವಿರೋಧಿ ಹೇಳಿಕೆ: ಎಚ್ಐವಿ, ಕುಷ್ಠರೋಗಕ್ಕೆ ಹೋಲಿಸಿದ ಎ ರಾಜಾ

ಇನ್ನೋರ್ವ ತಮಿಳುನಾಡು ಸಚಿವರಿಂದ ಸನಾತನ ಧರ್ಮ ವಿರೋಧಿ ಹೇಳಿಕೆ: ಎಚ್ಐವಿ, ಕುಷ್ಠರೋಗಕ್ಕೆ ಹೋಲಿಸಿದ ಎ ರಾಜಾ

ಚೆನೈ 07: ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯ ನಂತರ ಇದೀಗ ಡಿಎಂಕೆ ಸಂಸದ ಎ ರಾಜಾ ಸನಾತನ ಧರ್ಮವನ್ನು ಎಚ್ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ರೋಗಗಳಿಗೆ ಹೋಲಿಸಿ ನೀಡಿರುವ ಹೇಳಿಕೆ ನೀಡಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಎ.ರಾಜಾ, ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂ ಅಂತ ಹೇಳಿ ನಿಮರ್ೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಮೃದುವಾಗಿ ಹೇಳಿದ್ದರು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸನಾತನ ಧರ್ಮವನ್ನು ಎಚ್ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಅವಸ್ಥೆಗಳಿಂದ ತುಂಬಿದ ಕಾಯಿಲೆಯಾಗಿ ನೋಡಬೇಕಾಗಿದೆ ಎಂದು ಹೇಳಿದ್ದಾರೆ. ಇದು ಜನರ ತೀವ್ರ ವಿರೋಧಕ್ಕೆ ಗುರಿಯಾಗಿದೆ.

ಅಷ್ಟೆ ಅಲ್ಲದೆ ಯಾರನ್ನಾದರೂ ಕರೆತನ್ನಿ, ನಾನು ಸನಾತನ ಧರ್ಮದ ಬಗ್ಗೆ ಚಚರ್ೆಗೆ ಸಿದ್ಧ ಎಂದು ಎ ರಾಜ ಸವಾಲ್ ಹಾಕಿದ್ದಾರೆ. ಇನ್ನು 10 ಲಕ್ಷ ಅಥವಾ 1 ಕೋಟಿಯಾದರೂ ಪರವಾಗಿಲ್ಲ, ಯಾವುದೇ ಆಯುಧ ಹಿಡಿದು ಬಂದರೂ ನಾನು ಪೆರಿಯಾರ್ ಮತ್ತು ಅಂಬೇಡ್ಕರ್ ಪುಸ್ತಕಗಳೊಂದಿಗೆ ದೈರ್ಯವಾಗಿ ಚಚರ್ೆಗೆ ಬರುತ್ತೇನೆ ಎಂದು ತಿಳಿಸಿದ್ದಾರೆ. 

 

ಸುದ್ದಿ ಓದಿ