ರಾಣೆಬೆನ್ನೂರ

ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ : ಕಾನೂನು ಅರಿವು ನೆರವು ಕಾರ್ಯಕ್ರಮ

ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ : ಕಾನೂನು ಅರಿವು ನೆರವು ಕಾರ್ಯಕ್ರಮ

ಲೋಕದರ್ಶನ ವರದಿ 

ರಾಣೆಬೆನ್ನೂರು  05:   ತಾಲೂಕಿನ  ಕವಲೆತ್ತು ಗ್ರಾಮದ ಬಿ.ಎ.ಜೆ.ಎಸ್‌.ಎಸ್‌. ಶ್ರೀ ದುರ್ಗಾಮಾತಾ  ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ  ರಾಣೆಬೆನ್ನೂರು ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘವು, ಮಾನವ ಕಳ್ಳ ಸಾಗಾಣಿಕೆ ತಡೆ  ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಿತ್ತು.  

 ಅರಿವು ಜಾಗೃತಿ ಕಾರ್ಯಕ್ರಮವು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ ಪಾರ್ವತೆಮ್ಮ ಹುಂಡೇಕಾರ ಅವರು ಉದ್ಘಾಟಿಸಿ ಚಾಲನೆ ನೀಡಿದರು.  ಪ್ರೌಢಶಾಲಾ ಮುಖ್ಯೋಪಾಧ್ಯಾಯ ಅಜ್ಜಪ್ಪ ಬಿಜ್ಜುರ ಅವರು, ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.  ಮಾನವ ಕಳ್ಳ ಸಾಗಾಣಿಕೆ ತಡೆ ಮತ್ತು ಮೋಟಾರ್ ವಾಹನಗಳ ಕಾಯ್ದೆ ಕುರಿತು ಪ್ಯಾನಲ್ ನ್ಯಾಯವಾದಿ ಹೆಚ್‌.ಎಸ್‌. ಸಿದ್ದಪ್ಪನವರ ವಿಶೇಷ ಉಪನ್ಯಾಸ ನೀಡಿದರು.    

ಮುಖ್ಯ ಅತಿಥಿಗಳಾಗಿ ಕುಮಾರ ಪಟ್ಟಣಂ ಪಿ.ಎಸ್‌.ಐ.ನಿಂಗಪ್ಪ ಕರಕಣ್ಣನವರ, ವಕೀಲರ ಸಂಘದ ಉಪಾಧ್ಯಕ್ಷ ಹೆಚ್‌.ಹೆಚ್‌. ತಿಮ್ಮೇನಹಳ್ಳಿ, ಕಾರ್ಯದರ್ಶಿ ಸುರೇಶ್ ದ್ಯಾವಕ್ಕಳ್ಳವರ, ಅಪರ ಸರ್ಕಾರಿ ವಕೀಲರಾದ ಟಿ.ಎಸ್‌. ಜಂಗರಡ್ಡೇರ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ವಿಜಯಾ ಬಣಕಾರ, ಕವಲೆತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನಾಗರಾಜ್ ಹೆಚ್‌. ಸೇರಿದಂತೆ ಮತ್ತಿತರ ಗಣ್ಯರು  ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು 


ಸುದ್ದಿ ಓದಿ