ಎಲ್ಐಸಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ
ಮಹಾಲಿಂಗಪುರ : ಸ್ಥಳೀಯ ಟೋನಪಿನಾಥ ದೇವಸ್ಥಾನದಲ್ಲಿ ರವಿವಾರ ಅ.8 ರಂದು ಮುಂಜಾನೆ 10 ಗಂ.ಗೆ ಜಮಖಂಡಿ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆಯನ್ನು ಕರೆಲಾಗಿದ್ದು ಜಮಖಂಡಿ ಶಾಖೆಯ ಎಲ್ಲ ಎಲ್.ಐ.ಸಿ ವಿಮಾ ಪ್ರತಿನಿಧಿಗಳು ಈ ಸಭೆಗೆ ತಪ್ಪದೆ ಹಾಜರಾಗಬೇಕು ಎಂದು ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಪ್ಪ ಕುಂಜನೂರ ಪತ್ರಿಕೆಗೆ ತಿಳಿಸಿದ್ದಾರೆ.
ಈ ಮಹಾ ಸಭೆಯಲ್ಲಿ ದಾರವಾಡದ ಡಾ. ಮಹೇಶ ಮಾಶಾಳ ಎಲ್ಲ ಪ್ರತಿನಿಧಿಗಳಿಗೆ ತರಬೇತಿ ನೀಡಲಿದ್ದಾರೆ. ಅಲ್ಲದೆ ಪ್ರತಿನಿಧಗಿಳ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ, ಮತ್ತು ವಿಷೇಶ ಸಾಧನೆ ಮಾಡಿದ ಪ್ರತಿನಿಧಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಗುವುದು ಕಾರಣ ಎಲ್ಲ ಪ್ರತಿನಿಧಿಗಳು ಈ ವಾಷರ್ಿಕ ಮಹಾಸಭೆಗೆ ತಪ್ಪದೆ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ಸಿ ಗೋಳಿಸಬೇಕೆಂದು ತಿಳಿಸಿದ್ದಾರೆ.