ಮುದ್ದೆಬಿಹಾಲ್

ವಾರ್ಷಿಕ ಸರ್ವಸಾಧಾರಣ ಸಭೆ

ವಾರ್ಷಿಕ ಸರ್ವಸಾಧಾರಣ ಸಭೆ

ಮುದ್ದೇಬಿಹಾಳ 18:  ಇದೇ ದಿ, 29 ಶನಿವಾರದಂದು ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ತಾಲೂಕಾ ಘಟಕದಿಂದ ಬೆಳಗಾಂವಿ ವಿಭಾಗಿ ಮಟ್ಟದ 31ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಶೈಕ್ಷಣಿಕ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು  ಸಂಘದ ಅಧ್ಯಕ್ಷ ವಿ ಎಸ್ ಮೇತ್ರಿ ಹೇಳಿದರು. 

ಈ ವೇಳೆ  ಡಾ, ಗುರುರಾಜ ಕರ್ಜಗಿಯವರು, ಭಾರತೀಯ ಜೀವ ವಿಮಾ ಸಂಸ್ಥೆಯ(ಎಲ್ ಐ ಸಿ) ಬೆಳಗಾಂವಿ ವಿಭಾಗದ ವ್ಯವಸ್ಥಾಪಕ ಬಿ. ಪಿ ರವಿ ಸೇರಿದಂತೆ ಹಲವಾರು ಗಣ್ಯರು ಅಧಿಕಾರಿಗಳು ಸೇರಿದಂತೆ ಸುಮಾರು  ಎರಡು ಸಾವಿರಕ್ಕೂ ಹೆಚ್ಚು ಜನ ಭಾರತೀಯ ಜೀವ ವಿಮಾ ಪ್ರತಿನಿಧಿಗಳು ಬಾಗವಹಿಸಲಿದ್ದು.   ಕಾರಣ ಜೀವವಿಮಾ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು  ಕರೆ ನೀಡಿದರು. 

ಈ ಸಂದರ್ಭದಲ್ಲಿ ಕಾರ್ಯದರ್ಶಿ ಅಶೋಕ ಬಿರಾದಾರ, ಖಜಾಂಚಿ ಆನಂದ ಜಂಬಗಿ, ಉಪಾಧ್ಯಕ್ಷ ಆರ್ ಬಿ ಬಿದರಕುಂದಿ, ಎಸ್ ಎಸ್ ಹಿರೇಮಠ, ಪ್ರಭುಕರ ಪತ್ತಾರ(ಬಾವೂರ), ಎಂ ಸಿ ಹಡಪದ, ಎನ್ ಬಿ ಬಿರಾದಾರ,ಆರ್ ಆರ್ ಕೈಲವಾಡಗಿ, ಆರ್ ಎಲ್ ಸಿರಿ, ಎಚ್ ವಿ ಗೋಗಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ