ಬಳ್ಳಾರಿ

ಸಿಇಟಿ ಜೆಇಇ ಹಾಗೂ ನೀಟ್ ಕೋಚಿಂಗ್ ಕೊಡುವುದಾಗಿ ಘೋಷಣೆ

ಸಿಇಟಿ ಜೆಇಇ ಹಾಗೂ ನೀಟ್ ಕೋಚಿಂಗ್ ಕೊಡುವುದಾಗಿ ಘೋಷಣೆ


ಸಿಇಟಿ ಜೆಇಇ ಹಾಗೂ ನೀಟ್ ಕೋಚಿಂಗ್ ಕೊಡುವುದಾಗಿ ಘೋಷಣೆ 

ಬಳ್ಳಾರಿ 22 : ನೀಟ್, ಜೆಇಇ ತರಬೇತಿಯಲ್ಲಿ ನ ತಾರತಮ್ಯಕ್ಕೆ ಎಐಡಿಎಸ್‌ಓ ಆಕ್ಷೇಪ!ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಸರ್ಕಾರಿ, ಆದರ್ಶ ವಿದ್ಯಾಲಯ ಹಾಗೂ ಅನುದಾನಿತ ಕಾಲೇಜುಗಳ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ ಜೆಇಇ ಹಾಗೂ ನೀಟ್ ಕೋಚಿಂಗ್ ಕೊಡುವುದಾಗಿ ಘೋಷಿಸಿದೆ.  ಆದರೆ, ಈ ವರ್ಷ ಕೇವಲ 25,000 ವಿದ್ಯಾರ್ಥಿಗಳಿಗೆ ಮಾತ್ರ ಈ ತರಬೇತಿಯನ್ನು ಸೀಮಿತಗೊಳಿಸಿರುವುದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ. ಅಂದರೆ ರಾಜ್ಯದಲ್ಲಿ ಸಿಇಟಿ ಬರೆಯುವ ಶೇಕಡಾ 90ಅ ವಿದ್ಯಾರ್ಥಿಗಳನ್ನು ಉಚಿತ ತರಬೇತಿಯಿಂದ ಹೊರಗಿಟ್ಟು ಕೇವಲ 10ಅ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಹೊರಟಿದೆ. ಎಸ್ ಎಸ್ ಎಲ್ ಸಿ ತೇರ್ಗಡೆ ಆಧಾರದ ಮೇಲೆ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪ್ರವೇಶ ಪಡೆದು ವಿಜ್ಞಾನ ಅಧ್ಯಯನ ನಡೆಸುತ್ತಿರುವ ಎಲ್ಲ ವಿದ್ಯಾರ್ಥಿಗಳು ಈ ತರಬೇತಿಗೆ ಅರ್ಹರು. ಆದರೆ ಉಚಿತ ತರಬೇತಿಯನ್ನು ಕೇವಲ 25000 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಿರುವ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ನಡುವೆ ಅರ್ಹರು ಅನರ್ಹರು ಎಂಬ ತಾರತಮ್ಯವನ್ನು ಸೃಷ್ಟಿಸುತ್ತಿದೆ. ಮತ್ತು ಇದು ಶಿಕ್ಷಣವನ್ನು ಎಲ್ಲರಿಗೂ ಖಾತ್ರಿ ಪಡಿಸಬೇಕೆಂಬ ಸರ್ಕಾರಿ ಕಾಲೇಜಿನ ಮೂಲತತ್ವಕ್ಕೆ ವಿರುದ್ಧವಾಗಿದೆ.ಎಲ್ಲರಿಗೂ ಉಚಿತ ತರಬೇತಿ ನೀಡುವುದಾಗಿ ಘೋಷಿಸಿ ಈಗ ಕೇವಲ 10ಅ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಿರುವುದಕ್ಕೆ ಹಣದ ಕೊರತೆಯ ಕಾರಣ ಕೇಳಿಬರುತ್ತಿದೆ. ಹಾಗಾದರೆ, ಭಾರಿ ಮೊತ್ತ ನೀಡಿ ತರಬೇತಿ ಜವಾಬ್ದಾರಿಯನ್ನು ಖಾಸಗೀ ಸಂಸ್ಥೆಯೊಂದಕ್ಕೆ ನೀಡಿರುವುದು ಕೂಡ ಪ್ರಶ್ನಾರ್ಹ ವಿಷಯವಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಕೂಡಲೇ ಈ ತಾರತಮ್ಯ ವನ್ನು ಕೈಬಿಡಬೇಕು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ತರಬೇತಿಯನ್ನು ನೀಡಬೇಕೆಂದು ಎಐಡಿಎಸ್‌ಓ ಆಗ್ರಹಿಸುತ್ತದೆ. ಧನ್ಯವಾದಗಳು ಕಂಬಳಿ ಮಂಜುನಾಥ ಜಿಲ್ಲಾ ಕಾರ್ಯದರ್ಶಿ 


ಸುದ್ದಿ ಓದಿ