ಬಳ್ಳಾರಿ

ವಾರ್ಷಿಕೋತ್ಸವ ಸಮಾರಂಭ- ಶೈಕ್ಷಣಿಕ ಹಾಗೂ ಕ್ರೀಡಾ ಪುರಸ್ಕಾರ ಕಾರ್ಯಕ್ರಮ

ವಾರ್ಷಿಕೋತ್ಸವ ಸಮಾರಂಭ- ಶೈಕ್ಷಣಿಕ ಹಾಗೂ ಕ್ರೀಡಾ ಪುರಸ್ಕಾರ ಕಾರ್ಯಕ್ರಮ

ಬಳ್ಳಾರಿ 14: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 13 ಶನಿವಾರ ಸಂಜೆ 6.00 ಗಂಟೆಗೆ ವಾರ್ಷಿಕೋತ್ಸವ ಸಮಾರಂಭಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  ಮುಖ್ಯ ಅತಿಥಿಗಳಾಗಿ  ಜೆ.ತಿ​‍​‍್ೇರುದ್ರ​ಪ್ಪ ಕುಲಪತಿಗಳು, ವಿ.ಎಸ್‌.ಕೆ.ಯು, ಬಳ್ಳಾರಿ, ವೀ.ವಿ.ಸಂಘದ  ಪದಾದಿಕಾರಿಗಳು ಅಲ್ಲಂ ಗುರುಬಸವರಾಜ, ಜಾನೇಕುಂಟೆ ಬಸವರಾಜ, ಡಾ. ಅರವಿಂದ್ ಪಟೇಲ್, ಯಾಳ್ಪಿ ಮೇಟಿ ಪಂಪನಗೌಡ, ಬೈಲುವದ್ದಿಗೇರಿ ಯರಿ​‍್ರಸ್ವಾಮಿ, ವಿಶೇಷ ಆಹ್ವಾನಿತರು ಕೋಳೂರು ಮಲ್ಲಿಕಾರ್ಜುನ ಗೌಡ, ಜಿ.ಮಹಾಲಿಂಗಯ್ಯ (ರಾಜಣ್ಣ), ಬಾಡದ ಪ್ರಕಾಶ್  ವೀ.ವಿ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಎಲ್‌.ಟಿ.ಶೇಖರ್, ಮುಂಡಾಸದ ಚೆನ್ನಬಸವರಾಜ್, ಅಲ್ಲಂ ಪರಮೋದ್, ಟಿ.ನರೇಂದ್ರಬಾಬು, ಎಂ.ಶರಣಬಸವನಗೌಡ, ಏಳುಬೆಂಚಿ ರಾಜಶೇಖರ, ಪಲ್ಲೇದ ಪೊಂಪಾವತಿ, ಎಸ್‌.ಎಂ.ಪ್ರಭುಸ್ವಾಮಿ, ಆಜೀವಸದಸ್ಯರು, ಪ್ರಾಂಶುಪಾಲರು ಡಾಽಽಟಿ.ಹನುಮಂತರೆಡ್ಡಿ, ಉಪ-ಪ್ರಾಂಶುಪಾಲರು ಡಾಽಽಸವಿತಾಸೊನೋಳಿ ಹಾಗೂ ಶಿಕ್ಷಕವೃಂದ, ವಿದ್ಯಾರ್ಥಿವೃಂದದವರು ಇವರುಗಳ  ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗಿತು.  

ಮುಖ್ಯ ಅತಿಥಿಗಳಾಗಿ  ಶ್ರೀ ಜೆ.ತಿ​‍​‍್ೇರುದ್ರ​‍್ಪ ಮಾನ್ಯಕುಲಪತಿಗಳು, ವಿ.ಎಸ್‌.ಕೆ.ಯು, ಬಳ್ಳಾರಿ, ಇವರು ಮಾತನಾಡುತ್ತ, “ನಾನು ಸಹಾ ವೀ.ವಿ.ಸಂಘದ  ವೀರಶೈವ ಕಾಲೇಜಿನ  ಒಬ್ಬ ಹಳೇ ವಿದ್ಯಾರ್ಥಿ ಎಂದು ಸ್ಮರಿಸುತ್ತಾ, ಹಿರಿಯರ ನಿರ್ದೇಶನ, ಚಾತುರ್ಯ, ಸಮಯೋಚಿತ ಸಮಾಲೋಚನೆಯಿಂದ ಮಾತ್ರ ಯುವಕರು ಯಾವುದೇ ಕ್ಷೇತ್ರದಲ್ಲಿ ಉನ್ನತ ಪದವಿಗೆ ಬರಲು ಸಾಧ್ಯ ಪದವಿ ಅಂಕಗಳು ಸಾಕಾಗುವುದಿಲ್ಲ, ನೀವು ಸವಾಲಿನ ಸಂದರ್ಭಗಳನ್ನು ಎದುರಿಸಲು ಕಲಿಯಬೇಕು, ನಿಮ್ಮ ಕಂಪನಿ ಮತ್ತು ಕುಟುಂಬವನ್ನು ಪರಿಸ್ಥಿತಿಗಳಿಂದ ಹೊರಬರಲು ಸಾಕಷ್ಟು ಪರಿಹಾರವನ್ನು ಕಂಡುಕೊಳ್ಳಬೇಕು. ಜೀವನದಲ್ಲಿ ದೃಷ್ಟಿ ಮತ್ತು ಗುರಿಗಳು, ಮುಖ್ಯ ಉದ್ದೇಶ ಮತ್ತು ಮಹತ್ವಾಕಾಂಕ್ಷೆಗಳು, ಸಮಯದ ಅರಿವು ಮತ್ತು ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು. ಯಾವುದೇ ಹೊಸ ತಂತ್ರಜ್ಞಾನಗಳಿಗೆ ಮಾನವೀಯ ಮೌಲ್ಯಗಳು ಮುಖ್ಯ. ಭವಿಷ್ಯದಲ್ಲಿ ನೀವು ಕಂಡುಕೊಳ್ಳುವ ಹೊಸ ತಂತ್ರಜ್ಞಾನಗಳಲ್ಲಿ ಮಾನವೀಯ ಮೌಲ್ಯಗಳು ಮತ್ತು ಶಿಸ್ತುಗಳನ್ನು ಬೆಳೆಸಿಕೊಳ್ಳಿ, ಸಮಾಜವನ್ನು ಆರೋಗ್ಯಕರ, ಸಮೃದ್ಧ ಮತ್ತು ಅಭಿವೃದ್ಧಿಶೀಲ ಸಮಾಜವನ್ನಾಗಿ ಮಾಡಿ, ”ಎಂದು ಅವರು ವಿದ್ಯಾರ್ಥಿಗಳಿಗೆ ಕೋರಿದರು. ವೀ.ವಿ.ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ ಇವರು ಮಾತನಾಡುತ್ತ, “ಒಂದು ಕಲ್ಲು ಮೂರ್ತಿವಾಗಬೇಕಿದ್ದರೆ, ಅದಕ್ಕೆ ಸಾವಿರಾರು ಉಳಿ ಪಟ್ಟುಗಳು ಬಿದ್ದಲ್ಲಿ ಮಾತ್ರ ಸಾಧ್ಯ, ಅದರಂತೆಯೇ, ಪ್ರತಿಯೊಬ್ಬ ವಿದ್ಯಾರ್ಥಿ ಇವತ್ತಿನ ನಮ್ಮ ಮುಖ್ಯ ಅತಿಥಿಯಂತೆ ಉನ್ನತಿಪದವಿ ಏರಲು ಕಷ್ಟಪಟ್ಟು ಕೆಲಸ ಮಾಡುವುದು, ಸೌಲಭ್ಯಗಳನ್ನು ಬಳಸಿಕೊಳ್ಳುವುದು ತಮ್ಮ ಶಿಕ್ಷಕರು ಹೇಳಿಕೊಡುವ ಪಾಠದೊಂದಿಗೆ,  ಸಾಧ್ಯ, ಭವಿಷ್ಯದ ವೃತ್ತಿಜೀವನದಲ್ಲಿ ಟೀಂರ್-ವರ​‍್ಕ‌, ಮುಖ್ಯವಾಗಿದೆ, ಏಕಾಂಗಿಯಾಗಿ ಕೆಲಸ ಮಾಡುವುದು ಕಡಿಮೆ ಆದ್ಯತೆ, ತಂಡದಲ್ಲಿ ಕೆಲಸ ಮಾಡುವುದನ್ನು ಕಲಿಯಿರಿ, ನಿಮ್ಮ ಮುಂದಿನ ಜೀವನದ ಪ್ರತಿಯೊಂದು ಹಂತದಲ್ಲೂ ನೀವು ಗೆಲ್ಲಬೇಕೆಂದು ನಾನು ಬಯಸುತ್ತೇನೆ ”ಎಂದು ಶುಭ ಹಾರೈಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶ್ರೇಯಾಂಕಗಳನ್ನು ಸಾಧಿಸಿದ ವಿದ್ಯಾರ್ಥಿಗಳಿಗೆ, ಸಂಸ್ಥೆಯ ಅಧ್ಯಾಪಕರಲ್ಲಿ ಪಿಎಚ್‌ಡಿ ಪುರಸ್ಕೃತರಿಗೆ ಸನ್ಮಾನ, ಪ್ರತಿಭಾವಂತರಿಗೆ ಅತಿಥಿಗಳಿಂದ ಬಹುಮಾನಗಳ ವಿತರಣೆ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು, ಉಪ ಪ್ರಾಂಶುಪಾಲರಾದ ಡಾ. ಸವಿತಾಸೊನೋಳಿ  ಎಲ್ಲರನ್ನು ಸ್ವಾಗತಿಸಿದರು, ಪ್ರಾಂಶುಪಾಲರಾದ ಡಾ. ಟಿ. ಹನುಮಂತರೆಡ್ಡಿ, ಮಹಾವಿದ್ಯಾಲಯದ ವಾರ್ಷಿಕ ವರದಿ ಮಂಡಿಸಿದರು, ಡಾ.ಏ.ತಿಮ್ಮನ ಗೌಡರು  ವಂದಿಸಿದರು, ಶ್ರೀಮತಿ ಅಪರ್ಣ ವಸ್ತ್ರದ, ವಾಣಿ ಹಿರೇಗೌಡರ್, ಉಮದೇವಿ ಕಾರ್ಯಕ್ರಮವನ್ನು ನಿರೂಪಿಸಿದರು.  ಮಹಾವಿದ್ಯಾಲಯದ ಶಿಕ್ಷಕವೃಂದ, ವಿದ್ಯಾರ್ಥಿವೃಂದದವರು, ಭಾಗವಹಿಸಿದ್ದರು 


ಸುದ್ದಿ ಓದಿ