ಅಂಜುಮನ್ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ
Anjuman honors achievers
ಮಹಾಲಿಂಗಪುರ 01: ಸೋಮವಾರ ಪಟ್ಟಣದ ಅಂಜುಮನ್. ಏ.ಇಸ್ಲಾಂ ಕಮಿಟಿ ಮತ್ತು ಸಮುದಾಯ ಸೇರಿ ದಾರೂಲ್ ಉಲೂಂ ಎಜ್ಯುಕೇಶನ್ ಸೊಸೈಟಿ ಕಚೇರಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮತ್ತು ಪ್ರಶಸ್ತಿ ಪುರಸ್ಕೃತರಾದವರನ್ನು ಸನ್ಮಾನಿಸಿ ಗೌರವಿಸಿದರು.
ರಾಜಕೀಯ ರಂಗದ ಯುವ ಮುಖಂಡ ಸಿದ್ದು ಕೊಣ್ಣೂರ ಸಾಮಾಜಿಕ ಸಹಕಾರ ಗುಣಕ್ಕೆ ಅಂಜುಮನ್ ವತಿಯಿಂದ ಸನ್ಮಾನ ಪಡೆದರೆ, ಡಾ.ಅಜೀತ ಕನಕರೆಡ್ಡಿ ಉತ್ತಮ ವೈದ್ಯ ಪ್ರಶಸ್ತಿ, ಮೀರಾ ತಟಗಾರ ಉತ್ತಮ ವರದಿಗಾರ ಪ್ರಶಸ್ತಿಯನ್ನು ರಬಕವಿ /ಬನಹಟ್ಟಿ ತಾಲೂಕಡಳಿತದಿಂದ ಇತ್ತಿಚೆಗೆ ನಡೆದ ಸ್ವಾತಂತ್ರ್ಯ ದಿನಾಚರಣೆಯಂದು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ತೇರದಾಳ ಮತ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಧನೆ ಯಾರೋಬ್ಬರ ಸ್ವತ್ತಲ್ಲ, ದೃಢ ನಿರ್ಧಾರ ಮತ್ತು ಶ್ರಮ ವಹಿಸುವ ಜನರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ, ಇದಕ್ಕೆ ಉತ್ತಮ ಉದಾಹರಣೆ ಇವರೆ ಆಗಿದ್ದಾರೆ ಎಂದರೆ ತಪ್ಪಾಗಲಾರದು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಭವಿಷ್ಯದಲ್ಲಿಯೂ ಸಮಾಜ ಬಯಸುವ ಧನಾತ್ಮಕ ಚಿಂತನೆ ಇವರದಾಗಲಿ ಎಂದು ಹಾರೈಸಿದರು.
ಸ್ಥಳೀಯ ವೆಂಕಟೇಶ್ ಆಸ್ಪತ್ರೆಯ ಡಾ.ಅಜೀತ ಕನಕರೆಡ್ಡಿಯವರು ಗೌರವ ಸನ್ಮಾನ ಸ್ವೀಕರಿಸಿ ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡಿದ ಅವರು, ಸಾಧನೆ ಮಾಡಬಯಸುವ ಮಕ್ಕಳಲ್ಲಿರುವ ಅಭಿರುಚಿಯನ್ನು ಬಾಲ್ಯದಲ್ಲಿಯೇ ಶಿಕ್ಷಕರು, ಪಾಲಕರು, ಗುರುತಿಸಬೇಕು. ಇದರಿಂದ ಮಗುವಿನಲ್ಲಿರುವ ಕೌಶಲ್ಯ ಬೆಳಕಿಗೆ ಬರುತ್ತದೆ. ಆ ನಿಟ್ಟಿನಲ್ಲಿಯೇ ಅವರಿಗೆ ಸಹಕಾರ ಸಹ ನೀಡಬೇಕು ಅವರೇ ಸಾಧಕರಾಗುತ್ತಾರೆ ಎಂದರು.
ಪ್ರಾಸ್ತಾವಿಕವಾಗಿ ನಜೀರ್ ಅತ್ತಾರ ಮಾತನಾಡಿದರು. ಎಂಬಿಬಿಎಸ್ ಶ್ರೇಣಿಗೆ ದಾಖಲೆ ಪಡೆದಿರುವ ಜುಬೇರ್ ರೋಣ ಮತ್ತು ಅದ್ನಾನ್ ಯಕ್ಸಂಬಿ ಅವರನ್ನೂ ಸಹಿತ ಈ ಸಂದರ್ಭದಲ್ಲಿ ಅಂಜುಮನ್ ಸನ್ಮಾನಿಸಿತು. ಕಾರ್ಯಕ್ರಮದ ಆರಂಭಕ್ಕೆ ಶಾಲಾ ಮಕ್ಕಳು ಕಿರಾತ ಓದಿದರು.
ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಮೌಲಾನ ಜಕ್ರೀಯಾಸಾಬ, ಮೌಲಾನ ಅಸ್ಲಂ, ಮಲ್ಲಪ್ಪ ಸಿಂಗಾಡಿ, ಡಾ.ಜಬ್ಬಾರ್ ಯಕ್ಸಂಬಿ, ಹಾಸಿಂ ಪೆಂಡಾರಿ, ಫಾರೂಖ್ ಪಕಾಲಿ, ಸಯ್ಯದ್ ಯಾದವಾಡ, ನಜೀರ್ ಝಾರೆ, ನಿಯಾಝ್ ಪಟೇಲ್, ನಬಿ ಯಕ್ಸಂಬಿ, ಜಮೀರ್ ಯಕ್ಸಂಬಿ, ಪೈಗಂಬರ್ ಪೆಂಡಾರಿ, ಅಬ್ದುಲಗಫೂರ ಆಲಗೂರ, ಮೇಹಬೂಬ ಜೀರಗಾಳ, ಬಂದೇನವಾಜ್ ಸಿಂದಗಿ, ಮೇಹಬೂಬ ಜಮಾದಾರ, ರಾಜೇಸಾಬ ನದಾಫ, ಹಾಫೀಜ್ ಯುಸೂಫ್, ಮೇಹಬೂಬ ಮುಜಾವರ, ಶಿಕಂದರ ಮೋಪಗಾರ, ಯಾಸೀನ್ ಐನಾಪೂರ, ಮೌಲಾಲಿ ಬುರಲಿ, ರಸೂಲ್ ಸಾಂಗ್ಲಿಕರ, ಬುಡ್ಡಾ ಬೀಳಗಿ, ಸಿರಾಜಸಾಬ ಮುಜಾವರ, ಮೇಹಬೂಬ ನಾಗನೂರ ಇನ್ನೂ ಮುಂತಾದವರಿದ್ದರು.ಸುದ್ದಿ ಮಿತ್ರ ಯ್ಯೂಟ್ಯ್ಯೂಬ್ ವರದಿಗಾರ ಲಾಲಸಾಬ ನಗಾರ್ಚಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಏಜಾಜ್ ಬಾಗೇವಾಡಿ ವಂದಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 