ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಉತ್ತಮ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸಬೇಕು: ಆದಿಮನಿಹುಸೇನ್ ಬಾಷ
ಮರಿಯಮ್ಮನಹಳ್ಳಿ 26: ಅಂಗನವಾಡಿ ಕೇಂದ್ರಗಳು,ಮಕ್ಕಳ ಪೂರ್ವ ಬೆಳವಣಿಗೆಯ ಅಡಿಪಾಯಗಳಾಗಿವೆ,ಆದ್ದರಿಂದ ಪ್ರತಿಯೊಬ್ಬ ಅಂಗನವಾಡಿ ಕಾರ್ಯಕರ್ತೆಯರು ಶ್ರದ್ದೆ ಹಾಗೂ ಸೇವಾಮನೋಭಾವದಿಂದ ಕಾರ್ಯನಿರ್ವಹಿಸಿ ಮಕ್ಕಳ ಉತ್ತಮ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಪ.ಪಂ.ಅಧ್ಯಕ್ಷ ಆದಿಮನಿಹುಸೇನ್ ಬಾಷ ಕರೆ ನೀಡಿದರು.
ಅವರು ಪಟ್ಟಣದ 9ನೇ ವಾರ್ಡಿನ ಅಂಗನವಾಡಿ ಕೇಂದ್ರದಲ್ಲಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ,ಸಮಗ್ರಶಿಶು ಅಭಿವೃದ್ದಿ ಯೋಜನೆಯಿಂದ ಹಮ್ಮಿಕೊಂಡ,ರಾಷ್ಟ್ರೀಯ ಪೋಷಣ ಅಭಿಯಾನದಡಿಯಲ್ಲಿ, ಪೋಷಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಮಹತ್ತರ ಜವಾಬ್ದಾರಿಗಳನ್ನುನೀಡಿದೆ,ಅವುಗಳನ್ನು ಜವಾಬ್ದಾರಿಯಿಂದ ನಿಭಾಯಿಸಿ,ಕೇಂದ್ರಗಳಲ್ಲಿ ಮಕ್ಕಳಸಂಖ್ಯೆ ಹೆಚ್ಚಿಸಿ,ಇತ್ತೀಚೆಗೆ ಸರ್ಕಾರ ಎಲ್.ಕೆ.ಜಿ,ಯುಕೆಜಿ ಆರಂಭಿಸಿವೆ ಇದರಿಂದ ಅಂಗನವಾಡಿಗಳಲ್ಲಿ ಮಕಳಸಂಖ್ಯೆ ಕಡಿಮೆಯಾಗದಂತೆ ಪೋಷಕರ ಮನ ಒಲಿಸಿ ಸಂಖ್ಯೆ ಹೆಚ್ಚಿಸಿ ಎಂದರು.ಹೊಸಪೇಟೆಯಶಿಶುಅಭಿವೃದ್ದಿ ಅಧಿಕಾರಿ ಸಿಂಧು ಎಲಿಗಾರ್, ಮಾತನಾಡಿ,ರಾಷ್ಟ್ರೀಯ ಪೋಷಣ ಅಭಿಯಾನ ದಡಿಯಲ್ಲಿ,ಪ್ರತಿ ವರ್ಷ ಸೆಪ್ಟಂಬರ್ನಲ್ಲಿ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಮಾಡಲಾಗುತ್ತದೆ.ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು,ಪೌಷ್ಟಿಕತೆಗೆ ಒತ್ತು ನೀಡುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಅಲ್ಲದೇ ಈ ಅಭಿಯಾನದ ಉದ್ದೇಶ,ಮಕ್ಕಳಪೌಷ್ಟಿಕತೆಗೆ ಪೋಷಕಾಂಶಗಳು,ಜೀವಸತ್ವಗಳು ಅವಶ್ಯ ಇದಕ್ಕಾಗಿ ಸಿರಿಧಾನ್ಯಗಳಸತ್ವ ಇರುವ ಆಹಾರ ಪದಾರ್ಥಗಳನ್ನು ಇಂದು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ ಎಂದರು.
ಅಂಗನವಾಡಿಯಲ್ಲಿ ವಿತರಿಸುವ ಪೌಷ್ಠಿಕತೆಯ ಆಹಾರಗಳ ಬಗ್ಗೆ ತಪ್ಪು ತಿಳಿವಳಿಕೆ ಬೇಡ,ಆ ಪೌಷ್ಠಿಕತೆಯಲ್ಲಿ ವೀಶೇಷವಾದ ಪ್ರೋಟಿನ್ ಗಳು ಇರುತ್ತದೆ.ಆದ್ದರಿಂದ ತಾಯಂದಿರು ಮಕ್ಕಳಿಗೆ ತುಪ್ಪು,ಹಾಲು,ಉಪ್ಪು,ಸಕ್ಕರೆ,ಹೀಗೆ ಪದಾರ್ಥಗಳನ್ನು ಮಿಶ್ರಣಮಾಡಿ ಕೊಟ್ಟರೆ ಒಳ್ಳೆಯದು ಎಂದು ಸಲಹೆ ನೀಡಿದರು.ಮಕ್ಕಳಿಗೆ ಅಂಗಡಿ ಮುಂಗಟ್ಟುಗಳಲ್ಲಿರುವ ಪಾದಾರ್ಥಗಳು ಹಾಗೂ ಪಿಜ್ಜಾ,ಬರ್ಗರ್,ಇನ್ನು ಮುಂತಾದ ತಿನಿಸುಗಳಿಂದು ದೂರವಿರಿಸಿ ಪೌಷ್ಠಿಕಾಂಶದ ಪಧಾರ್ಥಗಳನ್ನು ಕೊಡಬೇಕು ಎಂದು ತಿಳಿಸಿದರು.ಇದೇ ಸಂಧರ್ಭದಲ್ಲಿ ಪಟ್ಟಣದವ್ಯಾಪ್ತಿಯ ಅಂಗನವಾಡಿಕೇಂದ್ರಗಳ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮತ್ತು ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಯಿತು.ಪ.ಪಂ.ಉಪಾಧ್ಯಕ್ಷೆ ಲಕ್ಷ್ಮೀ ಆರ್.ಮಂಜುನಾಥ,ಸದಸ್ಯೆಯರಾದ ಹುಲಿಗಿಬಾಯಿ,ಸುಮಂಗಳ,ಪೂಜಾ ಅಶ್ವಿನಿ,ಅಂಗನವಾಡಿ ಮೇಲ್ವಿಚಾರಕಿಯರಾದ ರೇಣುಕಾ,ಪ್ರಮೀಳಾಪಾಟೀಲ್,ಶಾರದಮ್ಮ,ರುದ್ರನಾಯ್ಕ್,ಮಂಜುನಾಥ್,ಹಾಗೂಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರಿದ್ದರು.