ಅಂಗನವಾಡಿ ಕೇಂದ್ರ, ಗ್ರಂಥಾಲಯ ಕಟ್ಟಡ ಉದ್ಘಾಟನೆ: ಜೆ.ಎನ್.ಗಣೇಶ್
ಬಳ್ಳಾರಿ16: ಅಂಗನವಾಡಿ ಶಿಕ್ಷಕರು ಮಕ್ಕಳ ಪೌಷ್ಠಿಕತೆ ಕಾಪಾಡುವ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ತಾಲೂಕಿನ ಮೆಟ್ರಿ ಗ್ರಾಮದಲ್ಲಿ 7ನೇಅಂಗನವಾಡಿ ಕೇಂದ್ರ, ಸಾರ್ವಜನಿಕ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ಮಕ್ಕಳ ಶಾಲಾಪೂರ್ವ ಶಿಕ್ಷಣದೊಡನೆ ಸಮಗ್ರ ಅಭಿವೃದ್ಧಿಗಾಗಿ ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸಬೇಕು ಅಂಗನವಾಡಿಯಲ್ಲಿ ರುವ ಸರ್ಕಾರದ ಸೌಲಭ್ಯಗಳನ್ನು ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಒದಗಿಸಿ ಕ್ಷೇತ್ರದಲ್ಲಿ ಶಿಕ್ಷಣ ಅಭಿವೃದ್ಧಿಗೆ ಒತ್ತು ನೀಡಿದ್ದು ಅಂಗನವಾಡಿ ಸೇರಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಾಣ, ಹಾಸ್ಟೇಲ್ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ವಸತಿ ಶಾಲೆಗಳನ್ನು ಆರಂಭಿಸಲು ತಕ್ಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಎಚ್.ಹೊನ್ನೂರಮ್ಮ ಗಂಗಾಧರ ಮಾತನಾಡಿ, ಅಂಗನವಾಡಿ ಮತ್ತು ಸಾರ್ವಜನಿಕ ಗ್ರಂಥಾಲಯ ಕಟ್ಟಡಗಳ ನಿರ್ಮಾಣ ಅಗತ್ಯವಿದ್ದು ಶಾಸಕರು ನೆರವೇರಿಸಿದ್ದಾರೆ ಎಂದರು.
ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಶಂಕ್ರ್ಪ,ಗ್ರಾ.ಪಂ ಸದಸ್ಯ ಎಚ್.ಕುಮಾರಸ್ವಾಮಿ,ನೇಣ್ಕಿಗಿರಿ, ಜಡೆಪ್ಪ, ಪ್ರಮುಖರಾದ ಗಂಗಾಧರ, ಎಚ್.ಜಗದೀಶ, ಜಡೇಗೌಡ, ಚೌಡಪ್ಪ, ಗಾಳೆಪ್ಪ, ನಾಗೇಂದ್ರ, ಯರಿ್ರಸ್ವಾಮಿ, ಮಲ್ಲಿಕಾರ್ಜುನ ಸೇರಿ ಇತರರಿದ್ದರು.