ಬರುವ ದಿನಗಳಲ್ಲಿ ಕುತೂಹಲ ಮೂಡಿಸಿದ ಚುನಾವಣೆ
ಮಹಾಲಿಂಗಪುರ,07: ಉಳಿದ 15 ತಿಂಗಳ ಅವಧಿಗೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗಾಗಿ ಕ್ರಮವಾಗಿ ಸಾಮಾನ್ಯ ಪುರುಷ ಹಾಗೂ ಮಹಿಳಾ ಸಾಮಾನ್ಯ ಅಭ್ಯರ್ಥಿಗಳಿಗೆ ಸುಪ್ರೀಂ ಕೋರ್ಟ್ ನಿರ್ಧೇಶನದಂತೆ ಕರ್ನಾಟಕ ರಾಜ್ಯ ಸರ್ಕಾರದಿಂದ ಅವಕಾಶ ದೊರಕಿರುವುದರುವುದು ಪಟ್ಟಣದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಹಾಗೂ ಭಾಜಪ ಪಕ್ಷಗಳ ಮಧ್ಯೆ ರಾಜಕೀಯ ಆಂತರಿಕ ಚಟುವಟಿಕೆಗಳು ಗರಿಗೆದರಿವೆ.
ಈ ಹಿಂದೆ ಭಾಜಪ ಪಕ್ಷದ ಪುರಸಭೆ ಸದಸ್ಯೆ ಸ್ನೇಹಲ್ ಶಿವಾನಂದ. ಅಂಗಡಿ 20 ತಿಂಗಳ ಅವಧಿಗೆ ನವೆಂಬರ್ 9. ಸನ್ 2019 ರಿಂದ ಮಾರ್ಚ್ 30, ಸನ್ 2022 ರವರೆಗೆ ಅಧ್ಯಕ್ಷ ಕಾರ್ಯ ನಿರ್ವಹಿಸಿದರೆ, ಭಾಜಪ ಪಕ್ಷದ ಬಂಡಾಯ ಅಭ್ಯರ್ಥಿ (ಕಾಂಗ್ರೆಸ್ ಬಣದಲ್ಲಿ ಗುರುತಿಸಿಕ್ಕೊಂಡ )ಪುರಸಭೆ ಸದಸ್ಯೆ ಗೋದಾವರಿ ವಿರುಪಾಕ್ಷಿ. ಬಾಟ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ನಂತರ ಜುಲೈ 17, 2022 ರಿಂದ ಮೇ 08, 2023 ರವರೆಗೆ ಪುರಸಭೆ ಸದಸ್ಯ ಬಸವರಾಜ ಹಿಟ್ಟಿನಮಠ 10 ತಿಂಗಳ ಅವಧಿಗೆ ಕೆಲಸ ಮಾಡಿದರೆ,ಪುರಸಭೆ ಸದಸ್ಯೆ ಗೋದಾವರಿ ಬಾಟ್ ಯಥಾವತ್ತಾಗಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದರು.
ಎರಡು ಅವಧಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ಭಾಜಪ, ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸಜನಸಾಬ ಪೆಂಡಾರಿ ಹಾಗೂ ಶಾಸಕ ಸಿದ್ದು ಸವದಿ, ಲೋಕಸಭಾ ಸದಸ್ಯ ಪಿ ಸಿ.ಗದ್ದಿಗೌಡರ್, 05 ಜನ ಪುರುಷ ಅಭ್ಯರ್ಥಿಗಳು, 04 ಜನ ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 13 ಅಂಕೆ ಸಂಖ್ಯೆಗಳನ್ನು ಹೊತ್ತು ಅಧಿಕಾರ ನಡೆಸಿದೆ.
ಅಂದು ಪುರುಷ 06, ಮಹಿಳಾ03 , ಭಾಜಪದಿಂದ ಬಂಡಾಯಗೊಂಡ ಮಹಿಳಾ ಮೂವರು ಅಭ್ಯರ್ಥಿಗಳು ಸೇರಿ ಒಟ್ಟು 12 ಸಂಖ್ಯಾ ಬಲವನ್ನು ಹೊಂದಿದ ಕಾಂಗ್ರೆಸ್ ಪಕ್ಷ ಬಹುಮತಕ್ಕೆ ಒಬ್ಬ ಅಭ್ಯರ್ಥಿ ಕೊರತೆಯಿಂದಾಗಿ ಕೂದಲೆಳೆ ಅಂತರದಲ್ಲಿ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ ಗಾದಿಯಿಂದ ವಂಚಿತಗೊಂಡು ವಿರೋಧ ಪಕ್ಷದಲ್ಲಿ ಕಾರ್ಯ ನಿರ್ವಹಿಸಿರುವುದನ್ನು ನಾವಿಲ್ಲಿ ಸ್ಮರಿಸಬಹುದು.
ಈಗಲೂ ಕೂಡ ಮಹಾಲಿಂಗಪುರ ಪುರಸಭೆ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಗಳಿಗೆ ಎರಡೂ ಪಕ್ಷಗಳಲ್ಲಿ ಈಗಿನಿಂದಲೇ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ ಎಂದರೆ ತಪ್ಪಾಗಲಾರದು. ಅಭ್ಯರ್ಥಿಗಳ ನಿರ್ಧಿಷ್ಟ ಅಂಕೆ ಸಂಖ್ಯೆಗಳು ನಮ್ಮುಂದೆ ಇದ್ದರೂ ಕೂಡ ಮುಂದಿನ ದಿನಮಾನಗಳಲ್ಲಿ ಯಾವುದೇ ಪಕ್ಷ ಪುರಸಭೆ ಅಧಿಕಾರವನ್ನ ಕೈಗೆ ತೆಗೆದುಕ್ಕೊಳ್ಳಬಹುದಾಗಿದೆ.
ಪ್ರತಿಷ್ಠೆ: ಕೇಂದ್ರದ ಭಾಜಪ ಆಡಳಿತಾರೂಢ ಲೋಕಸಭಾ ಸದಸ್ಯ ಪಿ ಸಿ ಗದ್ದಿಗೌಡರ್ ಮತ್ತು ಭಾಜಪದ ತೇರದಾಳ ಆಡಳಿತ ಕ್ಷೇತ್ರದ ಶಾಸಕ ಸಿದ್ದು ಸವದಿ ಅವರಿಗೆ ಮಹಾಲಿಂಗಪುರ ಪುರಸಭೆ ಆಡಳಿತವನ್ನು ಉಳಿಸಿಕ್ಕೊಳ್ಳುವ ಪ್ರತಿಷ್ಠೆಯ ಹೊಣೆಗಾರಿಕೆ ತಲೆದೋರಿದೆ.. ಕಾಲಾಯತಷ್ಮೆ ನಮಃ ಎಂಬಂತೆ ಇದಕ್ಕೆ ಕಾಲವೇ ಉತ್ತರಿಸಬೇಕು. ಅದರಂತೆ ಕೆಲವೆ ದಿನಗಳಲ್ಲಿ ಫಲಿತಾಂಶ ಬರಲಿದ್ದು ಕುತೂಹಲ ಕಣ್ಣುಗಳಿಂದ ಪಟ್ಟಣದ ಜನತೆ ಕಾಯುತ್ತಿದ್ದಾರೆ.