ರನ್ನ ಬೆಳಗಲಿಯಲ್ಲಿ ರೋಚಕ ಟಗರಿನ ಕಾಳಗ
ಮಹಾಲಿಂಗಪುರ 04: ದೇಶಿಯ ಕ್ರೀಡೆಗಳಾದ ಮಲ್ಲಕಂಬ, ಕಲ್ಲು ಎತ್ತುವುದು, ಕೋಳಿ ಕಾಳಗ, ಟಗರಿನ ಕಾಳಗ ಕುಸ್ತಿ ಹಗ್ಗ ಜಗ್ಗುವುದು, ಕಲ್ಲು ಜಗ್ಗುವುದು, ಕಂಬಳ, ಪಗಡೆ, ಇನ್ನು ಅನೇಕ ಕ್ರೀಡೆಗಳು ನಶಿಸುವ ಹಂತದಲ್ಲಿವೆ, ಹಳ್ಳಿಗಳಲ್ಲಿ ಅಲೊಂದು ಇಲೊಂದು ಕಡೆ ಟಗರಿನ ಕಾಳಗಳು ನಡೆಯುತ್ತವೆ, ರನ್ನ ಬೆಳಗಲಿಯಲ್ಲಿ ಕನಕದಾಸ ಯುವ ಕಮೀಟಿ ಆಶ್ರಯದಲ್ಲಿ 536 ನೇ ಕನಕ ಜಯಂತಿ ನಿಮಿತ್ಯವಾಗಿ ಎರಡು ದಿನಗಳ ಕಾಲ ಟಗರಿನ ಕಾಳಗಗಳು ನಡೆದವು.
ಸಮೀಪದ ರನ್ನ ಬೆಳಗಲಿಯ ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಮೈದಾನದಲ್ಲಿ ಟಗರಿನ ಕಾಳಗವನ್ನು ಲಕ್ಕಪ್ಪ ಮೇಡ್ಯಾಗೋಳ,ರಾಮಪ್ಪ ಪೂಜಾರಿ ಅವರು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದರು, ಕೃಷ್ಣಪ್ಪ ಕೆಂಚಪ್ಪ ಹಾರೂಗೇರಿ ಮತ್ತು ದುಂಡಪ್ಪ ಸೈದಾಪುರ ರವರು ಟಗರಿನ ಕಾಳಗದ ಉದ್ಘಾಟನೆಯನ್ನು ನೆರವೇರಿಸಿದರು.
ಸ್ಥಳೀಯ ಕಜಾಪ ಅಧ್ಯಕ್ಷರಾದ ರಾಘವೇಂದ್ರ ನೀಲಣ್ಣವರ ರವರು ಆಧುನಿಕ ಕ್ರೀಡೆಗಳ ಭರಾಟೆಯಲ್ಲಿ ಗ್ರಾಮೀಣ ಸಾಹಸ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ನಮ್ಮ ಸ್ಥಳೀಯ ಕನಕದಾಸ ಯುವಕ ಮಿತ್ರರು ಪ್ರತಿ ವರ್ಷವೂ ಸಮುದಾಯದ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಹೆಚ್ಚಿನ ನಗದು ಬಹುಮಾನ ಪುರಸ್ಕಾರ ಸನ್ಮಾನ ಆಯೋಜನೆ ಮಾಡುವುದರೊಂದಿಗೆ ಟಗರಿನ ಕಾಳಗ ಸ್ಪರ್ಧೆಗಳನ್ನು ಮುಂದುವರ್ಷಿಕೊಂಡು ಬರುತ್ತಿರುವುದು ಊರಿನ ಹೆಮ್ಮೆಯ ವಿಷಯವಾಗಿದೆ. ರನ್ನ ಬೆಳಗಲಿ ಕಲಾವಿದರ ತವರೂರು ಅದರೊಂದಿಗೆ ಗ್ರಾಮೀಣ ಸಾಹಸ ಕ್ರೀಡೆಗಳ ತವರೂರು ಎಂದರೆ ತಪ್ಪಾಗಲಾರದು.
ಪ್ರತಿ ಪ್ರಾಣಿಗಳಲ್ಲಿ ವಿಶೇಷವಾದಂತಹ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಹೊಂದಿರುತ್ತವೆ.ಆ ಸಾಮರ್ಥ್ಯಗಳನ್ನು ಗುರುತಿಸುವುದರೊಂದಿಗೆ ಪ್ರಾಣಿಗಳ ಮೇಲೆ ದಯೆ ಮತ್ತು ಪ್ರೀತಿ ಇಮ್ಮಡಿಕೊಳ್ಳುತ್ತದೆ. ಈ ಒಂದು ಮನೋಭಾವ ಪ್ರಾಣಿಗಳನ್ನು ಬೆಳೆಸಿ ಪೋಷಣೆ ಮಾಡುವುದರ ಜೊತೆಗೆ ಅವುಗಳಿಂದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಮಾಲೀಕರು ಖುಷಿಪಡುತ್ತಾರೆ. ಕುರಿ ಸಾಕಾಣಿಕೆ,ಕುರಿ ಉಣ್ಣೆ ಉತ್ಪಾದನೆ ಜೊತೆಗೆ ಇಂಥ ವಿಶೇಷ ಸ್ಪರ್ಧೆಗಳು ಕುರಿಯ ಮೇಲೆ ಪ್ರೀತಿಯನ್ನು ಹೆಚ್ಚಿಸುತ್ತೇವೆ,ಹಾಲು ಹಲ್ಲಿನ, ಎರಡು ಹಲ್ಲಿನ, ನಾಲ್ಕು ಹಲ್ಲಿನ, ಮತ್ತು ಎಂಟು ಹಲ್ಲಿನ ಟಗರಿನ ಕಾಳಗ ಸ್ಪರ್ಧೆಗಳು ಜರುಗಿದವು.
ಮಹದೇವಪ್ಪ ಕುಂಬಾಳಿ, ಲಕ್ಷ್ಮಣ ಕ್ವಾನ್ಯಾಗೋಳ, ಭೀಮಪ್ಪ ಮನ್ನಿಕೇರಿ, ಕೆಂಚಪ್ಪ ಕಂಬಳಿ, ಮಲ್ಲು ಕ್ವಾನ್ಯಾಗೋಳ, ಚಿನ್ನಪ್ಪ ಪೂಜೇರಿ, ಶಿವಪ್ಪ ಹಂಚಿನಾಳ, ಬಸಪ್ಪ ಪೂಜೇರಿ, ಪಟ್ಟಣ ಪಂಚಾಯತ್ ಸದಸ್ಯರಾದ ಕಾಂತು ಸೈದಾಪುರ, ಸದಾಶಿವ ಪೂಜೇರಿ, ಕರೆಪ್ಪ ಕುಂಬಾಳಿ, ಮುತ್ತಪ್ಪ ಕ್ವಾನ್ಯಾಗೋಳ, ಚೆನ್ನಪ್ಪ ಜಾಲಿಕಟ್ಟಿ, ಲಕ್ಷ್ಮಣ ಮನ್ಯಾಗೋಳ, ಲಕ್ಕಪ್ಪ ಮುಗಳ್ಯಾಳ, ಸಿದ್ದಲಿಂಗಪ್ಪ ಬೆಳ್ಳುವರಿ, ಕೆಂಚಪ್ಪ ಹನಗಂಡಿ, ಲಕ್ಷ್ಮಣ ಕಂಬಳಿ, ಮುಂತಾದವರು ಉಪಸ್ಥಿತರಿದ್ದರು.