ವಿದ್ಯಾರ್ಥಿಗಳಿಗೆ ಪ್ರೇರಣೆಯಾದ ಸಮೃದ್ದಿ ಕಾರ್ಯಕ್ರಮ
ಬಡತನದ ಕಿಚ್ಚು, ಸಾಧಿಸುವ ಹುಚ್ಚು ಇದ್ದವರೇ ಸಾಧಿಸಿದ್ದು ಹೆಚ್ಚು: ಎಸಿ ಕಾಮಗೌಡ
ಮಹಾಲಿಂಗಪುರ: ಸಾಧಕರೆಲ್ಲಾ ಟಾಪ್ ರ್ಯಾಂಕರ್ಸ್ ಅಲ್ಲ, ಟಾಪ್ ಪ್ಲ್ಯಾನರ್ಸ್ ಆದರೆ ಸಾಮಾನ್ಯನೂ ಸಾಧಿಸಬಲ್ಲ, ಬಡತನದ ಕಿಚ್ಚು, ಸಾಧಿಸುವ ಹುಚ್ಚು ಇದ್ದವರೇ ಸಾಧಿಸಿದ್ದು ಹೆಚ್ಚು ಎಂದು ಜಮಖಂಡಿ ವಿಭಾಗೀಯ ಅಧಿಕಾರಿ (ಎಸಿ) ಸಂತೋಷ ಕಾಮಗೌಡ ಹೇಳಿದರು.
ಸ್ಥಳೀಯ ಕೆಎಲ್ಇ ಡಿಪ್ಲೋಮಾ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಸನ್ಮಾನ ಹಾಗೂ ಬೀಳ್ಕೊಡುವ ಸಮಾರಂಭ ಸಮೃದ್ದಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ನಾನೇಕೆ ಇಲ್ಲಿ ಬಂದಿದ್ದೇನೆ? ನಾನೇನಾಗಬೇಕು? ಎಂಬ ಪ್ರಶ್ನೆ ಕೇಳಿಕೊಂಡು ಅದಕ್ಕೆ ಉತ್ತರವಾಗಿ ಸಾಧನೆಯ ಶಿಖರವೇರಿ ತಂದೆ, ತಾಯಿ, ಗುರುಗಳ ಋಣ ತೀರಿಸಬೇಕು. ಸಾಧಕರ ಕಥೆ ಓದಿ ಸ್ಫೂರ್ತಿ ಪಡೆಯಬೇಕು. ಜೀವನದಲ್ಲಿ ಪಾಸ್, ಫೇಲ್ ಎಂಬ ಫಲಿತಾಂಶ ಮುಖ್ಯವಲ್ಲ, ನಮ್ಮ ಫರ್ಮಾರ್ಮನ್ಸ್ ಮುಖ್ಯವಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಉತ್ಕೃಷ್ಠ ಕಾರ್ಯ ಮಾಡಿ ಬೆಸ್ಟ್ ಎನಿಸಿಕೊಳ್ಳಬೇಕು ಎಂದರು.
ಚಿಕ್ಕೋಡಿಯ ಕೆಎಲ್ಇ ಟಿಪಿಒ ಡಾ.ಸಂಜಯ ಅಂಕಲಿ ಮಾತನಾಡಿ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾ ಯುಗದಲ್ಲಿ ಶಿಸ್ತು, ಅಧ್ಯಯನಶೀಲತೆ, ಕ್ರಿಯಾಶೀಲತೆ ಹಾಗೂ ಉದ್ಯಮಶೀಲತೆಯ ಗುಣ ಬೆಳೆಸಿಕೊಂಡು ದೇಶದ ಆರ್ಥಿಕತೆಗೆ ಆಸ್ತಿಯಾಗಬೇಕು ಎಂದರು.
ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ ಸಾನಿಧ್ಯ ವಹಿಸಿ ಮಾತನಾಡಿ ಅಚ್ಚಳಿಯದ ಆಭರಣವೆಂದರೆ ಜ್ಞಾನ, ಯಾರೂ ಕಸಿಯದ ಆಸ್ತಿಯೆಂದರೆ ವಿದ್ಯೆ ಎಂದರು. ಪ್ರಾಚಾರ್ಯ ಎಸ್.ಐ,ಕುಂದಗೋಳ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀಗಳನ್ನು ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾಥರ್ಿಗಳು ತಯಾರಿಸಿದ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅಂತಿಮ ವರ್ಷದ ಎಲ್ಲ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ಎಕ್ಸಿಕ್ಯೂಟಿವ್ ಫೈಲ್ ವಿತರಿಸಲಾಯಿತು. ಇದಕ್ಕೂ ಮುನ್ನ ಅತಿಥಿಗಳನ್ನು ವಿದ್ಯಾರ್ಥಿಗಳು ಜಾಂಜ್ ಬಾರಿಸುತ್ತ ಮೆರವಣಿಗೆ ಮೂಲಕ ವೇದಿಕೆಗೆ ಕರೆದೋಯ್ದರು. ವಿಘ್ನೇಶ್ವರನ ಪೂಜೆಯೊಂದಿಗೆ, ಭರತನಾಟ್ಯದ ಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಒಟ್ಟಾರೆ ಸಮೃದ್ದಿ ಕಾರ್ಯಕ್ರಮ ಸಾಧಕರ ಜೀವಂತ ಸಾಕ್ಷಿಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಯಿತು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ, ಪದವಿ ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ, ಐಟಿಐ ಪ್ರಾಚಾರ್ಯ ಸಚಿನ ಅಂಗಡಿ, ಕ್ರೀಡಾ ವಿಭಾಗದ ಮುಖ್ಯಸ್ಥ ಉಮೇಶ ಹಾದಿಮನಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ವಂದನಾ ಪಸಾರ ಭಾಗವಹಿಸಿದ್ದರು. ಸವಿತಾ ಗೊಂದಿ ನಿರೂಪಿಸಿದರು. ಪ್ರವೀಣ ಅವರಾದಿ, ಸುಭಾಸ್ ಮೂಶಿ, ಉಮೇಶ ಹಾದಿಮನಿ, ಪ್ರಿಯಾ ಸೋನಾರ, ಮಹಾದೇವಿ ಅಂಬಿ, ಅನಿಕೇತ ತಾರದಾಳೆ, ಅಮೀತ ಜಾಧವ, ಮಂಜುನಾಥ ಅರಕೇರಿ, ಈಶ್ವರ ಹೂಲಿ, ಸವಿತಾ ಬೀಳಗಿ, ಲಕ್ಷ್ಮೀ ಅಂಗಡಿ, ಗೀತಾ ಉಪಾಸೆ, ಶಿಲ್ಪಾ ಬೀರನಗಡ್ಡಿ ಇದ್ದರು.