ಅಂಬೇಡ್ಕರ್ ಆದರ್ಶಗಳು ಪ್ರತಿಯೊಬ್ಬರ ಬದುಕಿಗೆ ಬೆಳಕು : ಹೊಸಕೋಟೆ ಜಗದೀಶ
ಲೋಕದರ್ಶನ ವರದಿ
ಕಂಪ್ಲಿ 16: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಸಮಾನತೆ, ಮೀಸಲಾತಿ, ಶಿಕ್ಷಣ, ಮತದಾನದ ಹಕ್ಕು ಸೇರಿದಂತೆ ನಾನಾ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಪ್ರತಿಯೊಬ್ಬರ ಬಾಳಿಗೆ ಬೆಳಕಾಗಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಹೇಳಿದರು. ಪಟ್ಟಣದ 4ನೇ ವಾರ್ಡಿನ ಅಂಬೇಡ್ಕರ್ ಕಾಲೋನಿಯ ಸಣಾಪುರ-ಬೆಳಗೋಡಹಾಳ್ ರಸ್ತೆ ಮಧ್ಯದಲ್ಲಿ ಇತ್ತೀಚೆಗೆ ಲೋಕಾರೆ್ಣಗೊಂಡ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಮ್ ಅವರ ಪುತ್ಥಳಿಗೆ ಮಾಲಾರೆ್ಣಯೊಂದಿಗೆ ಪುಷ್ಪ ನಮನ ಸಲ್ಲಿಸಿದ ನಂತರ ಅಂಬೇಡ್ಕರ್ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂಬೇಡ್ಕರ್, ಜಗಜೀವನ್ ರಾಮ್ ಅವರ ಚರಿತ್ರೆಯ ಪುಸ್ತಕಗಳನ್ನು ಮಕ್ಕಳಿಗೆ ನೀಡಬೇಕು.
ಅವರ ವಿಚಾರಧಾರೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿವೆ. ಬುದ್ದ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳ ಪರಿಪಾಲನೆಯೊಂದಿಗೆ ಉತ್ತಮ ಜೀವನದ ಕಡೆಗೆ ಸಾಗೋಣ. ಜೂ.10ರಂದು ನಡೆದ ಪುತ್ಥಳಿ ಲೋಕಾರೆ್ಣಗೆ ಬರುವುದಕ್ಕೆ ಆಗಲಿಲ್ಲ. ಆದ್ದರಿಂದ ಈಗ ಮಹಾನ್ ನಾಯಕರ ಪುತ್ಥಳಿಗೆ ಭೇಟಿ ನೀಡಲಾಯಿತು ಎಂದರು. ನಂತರ ಅಂಬೇಡ್ಕರ್ ಸಂಘದಿಂದ ಹೊಸಕೋಟೆ ಜಗದೀಶಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂಘದ ಅಧ್ಯಕ್ಷ ರುದ್ರಮುನಿ, ಗೌರವಾಧ್ಯಕ್ಷ ಕೆ.ಹುಲುಗಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಹೊನ್ನೂರ್ಪ, ಉಪಾಧ್ಯಕ್ಷರಾದ ವಿಜಯ, ಮಾರುತಿ, ಖಜಾಂಚಿ ಮಾರೇಶ, ಮುಖಂಡರಾದ ರಾಘವೇಂದ್ರ, ಹುಲುಗಣ್ಣ, ಕರಿಯಪ್ಪ ಇದ್ದರು.