ಶಿಗ್ಗಾವ್

ತುಳಿತಕ್ಕೊಳಗಾದ ಸಮಾಜದ ಅಭಿವೃದ್ಧಿಗಾಗಿ ಸದಾ ನಿಮ್ಮೊಂದಿಗಿರುತ್ತೇನೆ: ಬೊಮ್ಮಾಯಿ

ತುಳಿತಕ್ಕೊಳಗಾದ ಸಮಾಜದ ಅಭಿವೃದ್ಧಿಗಾಗಿ ಸದಾ ನಿಮ್ಮೊಂದಿಗಿರುತ್ತೇನೆ: ಬೊಮ್ಮಾಯಿ

ಶಿಗ್ಗಾವಿ 28: ವಿಶ್ವಾಸ, ಪ್ರಾಮಾಣಿಕತೆ, ಹೃದಯವೈಶಾಲತೆ ಇರುವಂತಹ ಹಡಪದ ಸಮಾಜದ ಜೊತೆಗೆ ನಿರಂತರವಾಗಿ ತುಳಿತಕ್ಕೊಳಗಾದ ಸಮಾಜದ ಅಭಿವೃದ್ಧಿಗಾಗಿ ಸದಾ ನಿಮ್ಮ ಜೊತೆಗೆ ಇರುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. 

ಪಟ್ಟಣದ ವಿರಕ್ತಮಠದಲ್ಲಿ  ನಡೆದ ಶಿಗ್ಗಾವಿ ಸವಣೂರ ತಾಲೂಕಿನ ಹಡಪದ ಅಪ್ಪಣ್ಣ ಸಮಾಜ ಸೇವಾ ಸಮೀತಿ ವತಿಯಿಂದ ಹಡಪದ ಅಪ್ಪಣ್ಣನವರ 890 ಜಯಂತಿ ಉತ್ಸವದ ನಿಮಿತ್ತ ನಡೆದ  ಜಿಲ್ಲಾ ಸಮಾವೇಶ ಹಾಗೂ ಸಮಾಜದ ಪ್ರತಿವಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿ, ಶಿವಶರಣರು 12ನೇ ಶತಮಾನದಲ್ಲಿ ವಚನ ಚಳವಳಿ ಮೂಲಕ ಎಲ್ಲಾ ಸಮಾಜದ ಆರ್ಥಿಕ, ಸಾಮಾಜಿಕ ಅಸಮಾನತೆ ಹೊಗಲಾಡಿಸಲು ಕಾಯಕ ತತ್ವದಡಿ ಶರಣರು ಶ್ರಮಿಸಿದ್ದಾರೆ. ಬಸವಣ್ಣನವರ ಜೊತೆಗೆ ಅವರ ಅನುಯಾಯಿಯಾಗಿ ಹಡಪದ ಅಪ್ಪಣ್ಣನವರು ಕ್ರಾಂತಿಕಾರಿ ಹೋರಾಟ ಮಾಡಿದವರಲ್ಲಿ ಪ್ರಮುಖರಾಗಿದ್ದಾರೆ ಅಲ್ಲದೇ ಸಮಾಜದ ಅಭಿವೃದ್ದಿಗೆ ನಿಗಮ ಸ್ಥಾಪನೆ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ 5 ಕೋಟಿ ಹಣ ಮೀಸಲಿಡಲಾಗಿತ್ತು. ಆದರೆ ದುರ್ದೈವ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಮಾಜಕ್ಕೆ ಮೀಸಲಿಟ್ಟ ಹಣವನ್ನು ಈಗಿನ ಸರಕಾರ ಬಿಡುಗಡೆಗೊಳಿಸುತ್ತಿಲ್ಲ. 

ವಿಧಾನಸಭೆ ಉಪಸಭಾಪತಿ ರುದ್ರ​‍್ಪ ಲಮಾಣಿ ಮಾತನಾಡಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾಯಕಯೋಗಿ ಎಂದು ಕೆಲಸ ಮಾಡಿದ್ದ ಹಡಪದ ಅಪ್ಪಣ್ಣ ಇಂದಿನ ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದ್ದಾರೆ. ಸಮ ಸಾಮಾಜ ನಿರ್ಮಾಣದ ಬಸವಣ್ಣನವರ ಕನಸನ್ನು ನನಸು ಮಾಡಬೇಕಾದರೆ ಸಮಾಜದ ಬಾಂಧವರು ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದುವರಿಯಬೇಕಾಗಿದೆ. ಸಮಾಜವನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುವ ಇಂದಿನ ರಾಜಕೀಯದಲ್ಲಿ ಸಮಾಜಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದರು. 

ಹಡಪದ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾವಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಪಾರಂಪರಿಕವಾಗಿ ಕ್ಷೌರಿಕ ವೃತ್ತಿಯನ್ನು ಅವಲಂಭಿಸಿದ್ದು, ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಡಪದ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು. 

ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು ತಂಗಡಗಿ 

ತಂಗಡಗಿ ಹಡಪದ ಅಪ್ಪಣ್ಣ ಸಂಸ್ಥಾನಮಠದ  ಅನ್ನದಾನಭಾರತಿ ಅಪ್ಪಣ್ಣ ಮಹಾಸ್ವಾಮಿಗಳು. ವಿರಕ್ತಮಠ  ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಗಡಿಯ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ  ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

ಮಾಜಿ ಸಚಿವ ಆರ್ ಶಂಕರ್, ಸಿದ್ದಪ್ಪ ಹಡಪದ, ಹರೀಶ ಕ್ಷೌರದ, ಶಶಿಧರ ಯಲಿಗಾರ, ಡಿ.ಎಸ್‌.ಮಾಳಗಿ, ರಾಜು ಕುನ್ನೂರ, ಸಿ.ಎಂ.ಪೈಜ, ಶಣ್ಮುಕಪ್ಪ ಕಾಯಕದ, ಮೋಹನ ಚಂದಪ್ಪನವರ, ಮಲ್ಲಿಕಾರ್ಜುನ ಹಡಪದ, ಬಸವರಾಜ ಹಡಪದ, ಮುತ್ತು ಹಡಪದ, ಶಿವು ಕ್ಷೌರದ, ವಿರೇಶ ಹಡಪದ, ಜಗದೀಶ ಹಡಪದ, ರುದ್ರ​‍್ಪ ಹಡಪದ, ಮಾರುತಿ ಹಡಪದ ಸೇರಿದಂತೆ ಎಲ್ಲ ತಾಲೂಕಿನ ಸಮಾಜ ಭಾಂದವರು ಉಪಸ್ಥಿತರಿದ್ದರು. 


ಸುದ್ದಿ ಓದಿ