ಸಿಂಧಗಿ

ತಳವಾರ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಸದಾ ಸಿದ್ಧ: ಮನಗೂಳಿ

ತಳವಾರ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಸದಾ ಸಿದ್ಧ: ಮನಗೂಳಿ

ಸಿಂದಗಿ 12: ತಳವಾರ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಸದಾ ಸಿದ್ಧವಿರುವುದಾಗಿ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ತಳವಾರ ಸಮಾಜದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನೋತ್ತರವಾಗಿ ಮಾತನಾಡಿದರು. 

ಸಮಾಜದ ಗೋಲಗೇರಿ ಗ್ರಾಮದ ತಳವಾರ ಸಮಾಜದ ಬಹಳ ವರ್ಷದ ಬೇಡಿಕೆಯಾಗಿದ್ದ ಈರಣ್ಣ ಮುತ್ಯಾ ಗುಡಿಯ 

ಕಟ್ಟಡದ ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸುವುದಾಗಿ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶಿವು ಹತ್ತಿ, ರವಿರಾಜ ದೇವರಮನಿ, ಬಸವರಾಜ ಮಾರಲಭಾವಿ, ವಿಜುಗೌಡ ಕರ್ನಾಳ, ತಳವಾರ ಸಮಾಜದ ಮುಖಂಡರಾದ ಮಡಿವಾಳ ನಾಯ್ಕೋಡಿ, ಮಂಜುನಾಥ ನಾಯ್ಕೋಡಿ, ರಮೇಶ ತಳವಾರ. ಮಲ್ಲಣ್ಣ ನಾಯ್ಕೋಡಿ, (ಬೆಂಗಳೂರು), ರಾಜು ಯಂಕಂಚಿ, ಚಂದ್ರಾಮ ನಾಯ್ಕೋಡಿ, ಸಿದ್ದಪ್ಪ ನಾಯ್ಕೋಡಿ, 

ಭಾಗಪ್ಪ ಕೊಂಡಗೂಳಿ, ಭೀಮಣ್ಣ ತೋಳವಾರ, ಮಲ್ಲಪ್ಪ ನಾಯ್ಕೋಡಿ, ರಾವುತಪ್ಪ ಮಾಗಣಗೇರಿ, ಮಹಾಂತೇಶ ನಾಯ್ಕೋಡಿ, ರಾವುತ್ ನಾಯ್ಕೋಡಿ ಹಾಗೂ ಇತರರು ಇದ್ದರು. 


ಸುದ್ದಿ ಓದಿ