ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಜೀವನ ಅಗತ್ಯ: ಪ್ರಾಚಾರ್ಯ ಕಾಮತ ಸಲಹೆ
ಚಿಕ್ಕೋಡಿ 17: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕೆಂದು ಪ್ರಾಚಾರ್ಯ ಎ.ಎಂ. ಕಾಮತ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇಲ್ಲಿನ ಚಿಂಚಣಿ ಸಿದ್ಧಪ್ರಭು ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಬಲವಾಡದ ಗೌತಮ ಸಿದ್ಧಾರ್ಥ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿ ಸರೋಜನಿ ಕುಂದರಗಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರಿ ಸಾಧನೆಗೆ ಮುಂದಾಗಬೇಕು. ಶಿಕ್ಷಣವೇ ಭವಿಷ್ಯದ ಯಶಸ್ಸಿನ ಮೂಲಾಧಾರ ಎಂದರು.ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿ ಸಿದ್ದಪ್ಪ ಪಟಾಯತ್, ಮುಖ್ಯೋಪಾಧ್ಯಾಯನಿ ಸುರೇಖಾ ಕಾಂಬಳೆ, ಸುರೇಖಾ ಕುಲಕರ್ಣಿ, ವಂದನಾ ಹುಲ್ಲೋಳ್ಳಿ, ಶಿವಾನಂದ ಕಮತೆ, ಶ್ರೀಧರ ಕಿಚಡೆ, ಆರ್ಟಿ ಕವಟಕೊಪ್ಪ, ಸವಿತಾ ಪೊಮ್ಮಾಯಿ, ರೂಪಾ ಗುಡೋಡಗಿ, ಗೋವಿಂದಪ್ಪ, ಆನಂದ ಪಟಾಯತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪನ್ಯಾಸಕ ಎಸ್.ಬಿ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವಿ.ಸಿ. ಕೋರಿ ಸ್ವಾಗತಿಸಿದರು. ಎಂ.ಜಿ. ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೀತಾ ಪೂಜೇರಿ ವಂದಿಸಿದರು.