ಬಸ್ ತಂಗುದಾಣ ನಿರ್ಮಿಸಲು ಟ್ರಸ್ಟ್‌ನವರಿಗೆ ಅನುಮತಿಸಿ ಇಲ್ಲದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಬಸ್ ತಂಗುದಾಣ ನಿರ್ಮಿಸಲು ಟ್ರಸ್ಟ್‌ನವರಿಗೆ ಅನುಮತಿಸಿ ಇಲ್ಲದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಲೋಕದರ್ಶನ ವರದಿ 

ಬಸ್ ತಂಗುದಾಣ ನಿರ್ಮಿಸಲು ಟ್ರಸ್ಟ್‌ನವರಿಗೆ ಅನುಮತಿಸಿ ಇಲ್ಲದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ   

                             ಕಂಪ್ಲಿ 06 : ಪಟ್ಟಣದ ಡಾ.ಅಂಬೇಡ್ಕರ್ ವೃತ್ತ ಹತ್ತಿರ ಪ್ರಯಾಣಿಕರಿಗೆ ಬಸ್ ತಂಗುದಾಣ ನಿರ್ಮಿಸಬೇಕು ಇಲ್ಲವೇ ಹಳೆ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ, ಕಂಪ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ(ಪಕ್ಷಾತೀತ)ದ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣಗೆ ಮಂಗಳವಾರ ಮನವಿ ಸಲ್ಲಿಸಿದರು. ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಜಿ.ಜಿ.ಚಂದ್ರಣ್ಣ ಮಾತನಾಡಿ, ಹಳೆ ಬಸ್‌ನಿಲ್ದಾಣ ಸರಿಯಾಗಿ ಬಸ್ ನಿಲ್ಲಲು ಜಾಗವಿಲ್ಲ. ಇತ್ತ ಅಂಬೇಡ್ಕರ್ ವೃತ್ತ ಬಳಿಯ ಪುನೀತ್‌ರಾಜಕುಮಾರ್ ತಂಗುದಾಣದ ಎದುರು ಹೊಸಪೇಟೆಗೆ ತೆರಳಲು ಮಹಿಳೆಯರಿಗೆೆ ಚಿಕ್ಕಮಕ್ಕಳು ವೃದ್ದ ಪ್ರಯಾಣಿಕರು ಗಾಳಿ, ಮಳೆ, ಬಿಸಿಲು ಎನ್ನದೆ ರಸ್ತೆಯ ಮೇಲೆ ನಿಲ್ಲಬೇಕಿದ್ದು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಪುನೀತ್‌ರಾಜಕುಮಾರ್ ತಂಗುದಾಣದ ಎದುರುಗಡೆ ಪ್ರಯಾಣಿಕರ ತಂಗುದಾಣ ನಿರ್ಮಿಸುವಂತೆ ಪುರಸಭಾಡಳಿತಕ್ಕೆ  2019ರ ಫೆ.13ರಿಂದ ಈತನಕ ಸುಮಾರು ಐದಾರು ಬಾರಿ ಮನವಿ ಸಲ್ಲಿಸಿದ್ದೇವೆ.  

ಪುನೀತ್‌ರಾಜಕುಮಾರ್ ತಂಗುದಾಣ ನಿರ್ಮಿಸಿದ ಜೈನ್ ಸೇವಾ ಟ್ರಸ್ಟ್‌ನವರು ಎದುರುಗಡೆ ಇನ್ನೊಂದು ತಂಗುದಾಣವನ್ನು ನಿರ್ಮಿಸಿಕೊಡಲು ತಯಾರಿದ್ದರೂ, ಪುರಸಭಾಡಳಿತ ಅನುಮತಿ ನೀಡದಿರುವುದು ದುರ್ದೈವದ ಸಂಗತಿಯಾಗಿದೆ. ಕೂಡಲೇ ತಾವಗಳುು ಕಾರ್ಯಪ್ರವೃತ್ತರಾಗಿ ಬಸ್ ತಂಗುದಾಣ ನಿರ್ಮಿಸಬೇಕು ಇಲ್ಲವೇ ನಿರ್ಮಿಸಲು ಜೈನ ಸೇವಾ ಟ್ರಸ್ಟ್‌ನವರಿಗೆ ಅನುಮತಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದರು ತುಂಗಭದ್ರಾ ನದಿ ಸೇತುವೆಯನ್ನು ಕೂಡಲೇ ಬಲವರ್ಧಿಸುವ ಕಾಮಗಾರಿ ಕೈಗೊಳ್ಳಬೇಕು. ನದಿ ಸೇತುವೆಯ ಮೇಲೆ ಪಾದಚಾರಿ, ಲಘುವಾಹನ, ಬಸ್ಸುಗಳ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಅಧಿಕ ಬಾರದ ವಾಹನಗಳ ನಿಯಂತ್ರಣಕ್ಕೆ ಕಾವಲುಗಾರನ ನಿಯಮಿಸಬೇಕು. ನದಿ ಬಳಿ ಹೈಟ್ ಆರೆಸ್ಟ್‌ ಕಮಾನ್ ನಿರ್ಮಿಸಬೇಕು ಎಂದು ಒತ್ತಾಯಿಸಿ ಗಂಗಾವತಿ ಪಿಡಬ್ಲ್ಯೂಡಿ ಎಇಇ ಜೆ.ವಿಶ್ವನಾಥಗೆೆ ಒಕ್ಕೂಟದ ಸದಸ್ಯರು ಮನವಿ ಸಲ್ಲಿಸಿದರು. ಒಕ್ಕೂಟದ ಸದಸ್ಯರಾದ ಕರೇಕಲ್ ಮನೋಹರ, ಬಿ.ನಾಗೇಂದ್ರ, ಎ.ಹನುಮಂತ, ಭಾವೈಕೆವೆಂಕಟೇಶ ರಜಾಕ್, ಮೌಲಾ, ಎಂ.ಗೋಪಾಲ್, ಬಿ.ದೇವೇಂದ್ರ, ಬಿ.ಕೆ.ವಿರುಪಾಕ್ಷಿ, ವಿ.ವೆಂಕಟರಮಣ ಇತರರಿದ್ದರು.   

ಅ002ಬಸ್ ತಂಗುದಾಣ ನಿರ್ಮಿಸಬೇಕೆಂದು ಸಂಘಟನೆಗಳ ಒಕ್ಕೂಟದ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣಗೆ ಮಂಗಳವಾರ ಮನವಿ ಸಲ್ಲಿಸಿದರು. 


ಸುದ್ದಿ ಓದಿ