ಮಹಲಿಂಗಪುರ

ಶಾಲೆಯಂಗಳದಲ್ಲಿ ತ್ರೇತಾಯುಗ ಸೃಷ್ಠಿಸಿದ ಮಕ್ಕಳು : ಶಾಂತಿಲಾಲ ಪಟೇಲ

ಶಾಲೆಯಂಗಳದಲ್ಲಿ ತ್ರೇತಾಯುಗ ಸೃಷ್ಠಿಸಿದ ಮಕ್ಕಳು : ಶಾಂತಿಲಾಲ ಪಟೇಲ

ಮಹಾಲಿಂಗಪುರ 20: ಅಯೋಧ್ಯೆಯಲ್ಲಿ ಜ. 22 ರಂದು ಜರುಗಲಿರುವ ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಶನಿವಾರ ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಶ್ರೀರಾಮ ಚರಿತಾಮೃತ ರೂಪಕ ಪ್ರದರ್ಶನ ಹಾಗೂ ಅಯೋಧ್ಯೆ ರಾಮಮಂದಿರ ಭವ್ಯ ಪ್ರತಿಕೃತಿ ಜನಮನ ಸೂರೆಗೊಂಡಿತು. 

1 ರಿಂದ 4 ನೇ ತರಗತಿಯ 150 ಕ್ಕೂ ಅಧಿಕ ಮಕ್ಕಳು ಪುಟ್ಟ ಹೆಜ್ಜೆಗಳ ಮನೋಜ್ಞ ಅಭಿನಯದಲ್ಲಿ ಪ್ರಭು ಶ್ರೀರಾಮ, ಲಕ್ಷ್ಮಣ, ಭರತ ಶತ್ರುಘ್ನರ ಜನನ, ವಿದ್ಯಾಭ್ಯಾಸ, ಸೀತಾ ಸ್ವಯಂವರ, ಮಂಥರೆಯ ಕುತಂತ್ರ, ಶ್ರೀ ರಾಮಚಂದ್ರನ ವನವಾಸ, ಶಬರಿಯ ಭಕ್ತಿ, ಶೂರ​‍್ನಖಿಯ ಮೋಹ, ಸೀತಾಪಹರಣ, ಸುಗ್ರೀವ ಮತ್ತು ಹನುಮಂತರ ಭೇಟಿ, ವಾಲಿ ಸುಗ್ರೀವರ ಕದನ, ವಾಲಿಯ ವಧೆ, ಹನುಮಂತನ ಸೀಮೋಲ್ಲಂಘನ, ಸೀತೆಯ ಅಶೋಕ ವನದ ವ್ಯಥೆ, ಹನುಮಂತನ ಪರಾಕ್ರಮ, ಲಂಕೆಯ ದಹನ, ಸೇತುವೆ ನಿರ್ಮಾಣ, ಲಂಕಾ ಪ್ರವೇಶ, ರಾಮ ರಾವಣರ ಯುದ್ಧ, ಸಂಜೀವಿನಿಗಾಗಿ ಹನುಮಂತ ಪರ್ವತವನ್ನೇ ಎತ್ತಿ ತರುವ ದೃಶ್ಯ, ವಿಭೀಷಣನ ಸ್ನೇಹ, ರಾವಣನ ಅಂತ್ಯ, ಶ್ರೀರಾಮ ಪಟ್ಟಾಭಿಷೇಕ ಹೀಗೆ ಇಡೀ ರಾಮಾಯಣವನ್ನು ಕೇವಲ 1 ಗಂಟೆಯೊಳಗೆ ಪ್ರದರ್ಶಿಸಿ ಜನಮನ ಸೂರೆಗೊಂಡರು. 

ಶಿಕ್ಷಕಿ ಶಬಾನಾ ಮುಂಡಗನೂರ ಮುಸಲ್ಮಾನ ಮಹಿಳೆಯಾದರೂ ಇಡೀ ರೂಪಕದ ಕಥೆ, ಸಂಭಾಷಣೆ, ನಿರ್ದೇಶನ, ಹಿನ್ನಲೆ ಧ್ವನಿ ಗಮನಸೆಳೆಯಿತು.ಚಿತ್ರಕಲಾ ಶಿಕ್ಷಕ ಶಿವಾನಂದ ನಿರ್ಮಿತ ಥರ್ಮಾಕೋಲ್‌ನ ಭವ್ಯ ರಾಮಮಂದಿರ ಪ್ರತಿಕೃತಿ ಗಮನ ಸೆಳೆಯಿತು. 

ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ, ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಕಾರ್ಯದರ್ಶಿ ಗುರುರಾಜ ಅಂಬಿ, ನಿರ್ದೇಶಕರಾದ ರಮೇಶ ಮುಳವಾಡ, ಈಶ್ವರ ಮುರಗೋಡ, ರಾಜು ಘಟ್ಟೆಪ್ಪನವರ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಪತ್ರಕರ್ತರಾದ  ಶಿವಲಿಂಗ ಸಿದ್ನಾಳ, ನಾರನಗೌಡ ಉತ್ತಂಗಿ, ಮುಖ್ಯೋಪಾಧ್ಯಾಯ ಎಸ್‌.ಜಿ.ಕೌಜಲಗಿ ಮತ್ತು ಪಾಲಕರು, ಶಿಕ್ಷಕರು ಇದ್ದರು. 

ಬಾಕ್ಸ್‌ : ಆಧುನಿಕ ಆಡಂಬರಗಳ ಮಧ್ಯೆ ನಮ್ಮ ಮಕ್ಕಳು ನಮ್ಮ ಶಾಲೆಯ ಅಂಗಳದಲ್ಲೇ ತ್ರೇತಾಯುಗ ಸೃಷ್ಠಿಸಿ ನಮ್ಮನ್ನು ಕೃತಾರ್ಥರನ್ನಾಗಿಸಿದರು : ಶಾಂತಿಲಾಲ ಪಟೇಲ, ಸಂಸ್ಥೆಯ ಅಧ್ಯಕ್ಷ. 


ಸುದ್ದಿ ಓದಿ