ಶಿಗ್ಗಾವ್

ಶ್ರೀರಾಮನ ಸೇವೆ ಮಾಡುವ ಭಾಗ್ಯ ಪಡೆದ ನಾವೆಲ್ಲರೂ ಸೌಭಾಗ್ಯವಂತರು

ಶ್ರೀರಾಮನ ಸೇವೆ ಮಾಡುವ ಭಾಗ್ಯ ಪಡೆದ ನಾವೆಲ್ಲರೂ ಸೌಭಾಗ್ಯವಂತರು

ಶಿಗ್ಗಾವಿ 17:  ಶ್ರೀರಾಮನ ಸೇವೆ ಮಾಡುವ ಭಾಗ್ಯ ಪಡೆದ ನಾವೆಲ್ಲರೂ ಸೌಭಾಗ್ಯವಂತರು. ಎಂದು ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ  ಅಭಿಪ್ರಾಯ ಪಟ್ಟರು  

ಪಟ್ಟಣದಲ್ಲಿ ಮನೆ ಮನೆಗೆ ಮಂತ್ರಾಕ್ಷತೆ ಶ್ರೀರಾಮ ಭಾವಚಿತ್ರಆಮಂತ್ರಣ ನೀಡುವಾಗ  ನಮ್ಮನ್ನು ಪ್ರತಿಯೊಂದು ಮನೆಯವರು ಭಕ್ತಿ ಭಾವದಿಂದಆರತಿ ಬೆಳಗಿ ಸ್ವಾಗತಿಸಿ ಪೂಜ್ಯತಾ ಭಾವನೆ ವ್ಯಕ್ತಪಡಿಸಿದಾಗ ನಮಗೆ ಬಹಳ ಸಂತೋಷವಾಗಿ ನಾವೆಲ್ಲರೂಇಂತಹಕಾರ್ಯದಲ್ಲಿ ಪಾಲ್ಗೊಂಡ ನಾವೇ ಸೌಭಾಗ್ಯವಂತರುಎಂದರು. ಇದೇಜನವರಿ 22ರಂದು ಶ್ರೀರಾಮ ಮಂದಿರದಉದ್ಘಾಟನೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮವನ್ನುರಾಷ್ಟ್ರರಕ್ಷಣೆಗಾಗಿ ಭಕ್ತಿಯಿಂದ ನಮ್ಮ ನಮ್ಮ ಮನೆಗಳಲ್ಲಿ ದೇವಸ್ಥಾನಗಳಲ್ಲಿ ಶ್ರೀರಾಮ ಜ್ಯೋತಿ ಬೆಳಗಿಸಿ ಆರಾಧಿಸಿ ಬೆಳಕಿನ ಹಬ್ಬವೆಂದು ಸಂಭ್ರಮಿಸೋಣಜನವರಿ 14 ರಿಂದ 22 ರವರೆಗೆ ಪ್ರತಿಯೊಂದು ಹಳ್ಳಿ ಹಳ್ಳಿಗಳ ದೇವಸ್ಥಾನ ಮತ್ತುಧಾರ್ಮಿಕ ಸ್ಥಾನಗಳನ್ನು ಭಕ್ತಿಯಿಂದ ಸ್ವಚ್ಛಗೊಳಿಸಿ ಪೂಜಿಸಿ ಶ್ರದ್ದೆ ಭಕ್ತಿಯಿಂದ ಸಂಸ್ಕೃತಿಯ ಸಂರಕ್ಷಣೆಗಾಗಿ ಪ್ರಾರ್ಥಿಸೋಣಅಯೋಧ್ಯೆಯ ಶ್ರೀರಾಮ ಮಂದಿರದರೂಪಅಲಂಕಾರದಲ್ಲಿ ನಿರ್ಮಾಣಗೊಂಡ ನೂತನ ವಿಮಾನ ನಿಲ್ದಾಣಕ್ಕೆ ಶ್ರೀ ರಾಮಾಯಣ ಮಹಾ ಗ್ರಂಥ ರಚಿಸಿದ ಮಹರ್ಷಿ ವಾಲ್ಮೀಕಿಅವರ ನಾಮಕರಣ ಮಾಡಿದ್ದುಇತಿಹಾಸ ಪುಟಕ್ಕೆ ಮತ್ತು ಶ್ರೀ ರಾಮನ ಸರ್ವ ಭಕ್ತರಿಗೆ ಸಂತೃಪ್ತಿತಂದಿದೆಜೊತೆಗೆಕನ್ನಡ ನಾಡಿನ ಹೆಮ್ಮೆಯ ಮೈಸೂರಿನ ಕಲಾ ಶಿಲ್ಪಿ ಅರುಣ್‌ಯೋಗಿರಾಜರವರುಕೆತ್ತಿದ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾವನೆಯಾಗುತ್ತಿರುವುದು ಮತ್ತೊಂದು ಸಂತೋಷತಂದಿದೆಎಂದರು. ಅಯೋಧ್ಯಾ ಶ್ರೀರಾಮ ಮಂದಿರಅದೊಂದುರಾಷ್ಟ್ರ ಮಂದಿರಇದೊಂದು ಪ್ರತಿಯೊಬ್ಬ ಭಾರತೀಯನ ಹೃದಯ ಮಂದಿರ ಬೆಳಕು ನೀಡುವಚಂದಿರ.  ನೂರಾರು ವರ್ಷಗಳ  ಹೋರಾಟ ಹಾಗೂ ಶ್ರೀರಾಮ ಪೂಜೆ ಮತ್ತು ಮಂತ್ರೋಪದೇಶದ ಪ್ರತಿಫಲ. ಭಕ್ತಿಯಜೀವ ಜಲ.ಅಯೋಧ್ಯಎಂಬುದೂಂದು ಪವಿತ್ರ ನೆಲ. ಜಪಿಸೋಣ ಪ್ರತಿದಿನ ಶ್ರೀ ರಾಮನನ್ನು ನೂರು ಸಲ.ಎಂದುಜನವರಿ 22ರಂದು ಶ್ರೀರಾಮ ಮಂದಿರದಉದ್ಘಾಟನೆಯ ಐತಿಹಾಸಿಕ ದಿನ ನೋಡಲು ಆನಂದಿಸಲು ಸಂಭ್ರಮಿಸಲುಇಡೀದೇಶಅಷ್ಟೇಅಲ್ಲಜಗತ್ತುಕಾಯುತ್ತಿದೆ ಆ ದಿನವನ್ನು ದೀಪಾವಳಿಯ ದಿನವನ್ನಾಗಿಆಚರಿಸಲು ಸಂಭ್ರಮಿಸಲುಕಣ್ಣು ತುಂಬಿಸಿಕೊಳ್ಳಲು ಸಜ್ಜಾಗೋಣಎಂದರು. 

 ಈ ಸಂದರ್ಭದಲ್ಲಿಕೆ.ಎಂ.ಎಫ್ ಸದಸ್ಯ ಬಸನಗೌಡ್ರ ಮೇಲಿನಮನಿ, ಗ್ರಾ.ಪಂ.ಸದಸ್ಯ ಸಂತೋಷದೊಡ್ಡಮನಿ, ಮಂಜುನಾಥ ಮಿರ್ಜಿ ಸೇರಿದಂತೆ ಶ್ರೀರಾಮ ಸೇನಾ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ