ಅಕ್ಬರ್ ಭಾಷಾ ವ್ಯಕ್ತಿ ಕಾಣೆ; ಪತ್ತೆಗೆ ಮನವಿ
ಬಳ್ಳಾರಿ 12: ಸಿರುಗುಪ್ಪ ಪಟ್ಟಣದ ರಾಜೀವ್ ಗಾಂಧಿ ನಗರದ ನಿವಾಸಿ ಅಕ್ಬರ್ ಭಾಷಾ ಎನ್ನುವ 36 ವರ್ಷದ ಹಣ್ಣಿನ ವ್ಯಾಪಾರಿ ಮೇ 05 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಸಿರುಗುಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ:
ಎತ್ತರ 5.5 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಧೃಡವಾದ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಹೂವುಗಳ ಡಿಸೈನ್ ಉಳ್ಳ ತುಂಬುತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ, ಹಿಂದಿ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್ಐ ದೂ.08392-220333, ಸಿರುಗುಪ್ಪ ವೃತ್ತದ ಸಿಪಿಐ ದೂ.08392-20003, ಸಿರುಗುಪ್ಪ ಉಪ ವಿಭಾಗದ ಡಿಎಸ್ಪಿ ದೂ.08392-276000 ಅಥವಾ ಬಳ್ಳಾರಿ ಎಸ್ಪಿ ದೂ.08392-258400 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.